ಹೊಸಪೇಟೆ (ವಿಜಯನಗರ): ವಿಜಯನಗರ ಸಾಮ್ರಾಜ್ಯದಲ್ಲಿ ಜನಪದ ಕಲೆಗಳಿಗೂ ಉತ್ತೇಜನ ಸಿಕ್ಕಿತ್ತು, ಅಂತಹ ಉತ್ತೇಜನ ಹೇಗಿದ್ದಿರಬಹುದು ಎಂದು ಯೋಚಿಸುವ ಮಟ್ಟಿಗೆ ಗುರುವಾರ ಸಂಜೆ ಇಲ್ಲಿ ನಡೆದ ವಸಂತ ವೈಭವ ಜನರನ್ನು ಸೆಳೆಯಿತು.

ವಡಕರಾಯನ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಕನ್ನಡ ಭುವನೇಶ್ವರಿಯ ಅಂಬಾರಿ ಹೊತ್ತ ಗಜಲಕ್ಷ್ಮಿಯ ಗಂಭೀರದ ನಡಿಗೆ ವಿಜಯನಗರ ಸಾಮ್ರಾಜ್ಯದ ಆಡಳಿತವನ್ನು ನೆನಪಿಸುವಂತಿತ್ತು, ನಗಾರಿ, ಡೋಲು, ಡೊಳ್ಳು ಸೇರಿದಂತೆ ವಿವಿಧ ವಾದ್ಯಗಳ ಗದ್ದಲಗಳಿಗೆ ಗಜಲಕ್ಷ್ಮಿ ಕಿವಿಗೊಡದೆ ಗಂಭೀರವಾಗಿ ಹೆಜ್ಜೆ ಹಾಕಿದಂತೆ ಕಲಾಲೋಕವೇ ಮೇನ್ಬಜಾರ್ ಬೀದಿಯಲ್ಲಿ ತೆರೆದುಕೊಂಡಿತು.

ನಗರದ ಪಟೇಲ್ ನಗರದ ಮಹಿಳೆಯರ ವರ್ಣರಂಜಿತ ಛತ್ರಿ ಚಾಮರ, ರಾಮಸಾಗರದ ಕಹಳೆ, ಹಗರಿಬೊಮ್ಮನಹಳ್ಳಿಯ ಜಿ.ವಿ.ಶಿವಕುಮಾರ ಮತ್ತು ತಂಡದ ನಾದಸ್ವರದೊಂದಿಗೆ ಭುವನೇಶ್ವರಿಗೆ ಹೂವಿನ ಸಿಂಚನ ಮಾಡುವ ಮೂಲಕ ವಸಂತ ವೈಭವಕ್ಕೆ ಚಾಲನೆ ನೀಡಲಾಯಿತು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವೈವಿಧ್ಯಮಯ 96 ಕಲಾತಂಡಗಳು ತಮ್ಮ ಕಲೆಯ ಪ್ರಕಾರಗಳ ನೈಪುಣ್ಯತೆಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದವು, ನಗರದ ಮಾರುಕಟ್ಟೆಯಲ್ಲಿ ರಜೆ ಇದ್ದರೂ ರಸ್ತೆಯ ಎರಡೂ ಬದಿಯಲ್ಲಿ ಕಿಕ್ಕಿರಿದು ಸೇರಿದ್ದ ಜನ ಕಲೆಗಳನ್ನು ಕಣ್ತುಂಬಿಕೊಂಡರು.

ಮೀರಜ್ನ ಕೃಷ್ಣಜಾಂಗ್ ಪತಂಗ ಪ್ರದರ್ಶನ, ಮಹೇಂದ್ರ ಮತ್ತು ತಂಡದ ಕಂಗೀಲು ನೃತ್ಯ, ಹುಬ್ಬಳ್ಳಿಯ ಕಲಾತಂಡದ ಯಕ್ಷಗಾನ ಮತ್ತು ಗೊಂಬೆ ಕುಣಿತ, ಮಲಪನಗುಡಿಯ ಡೊಳ್ಳು ಕುಣಿತ, ಹಗರಿಬೊಮ್ಮನಹಳ್ಳಿಯ ಕಿರಣ್ಕುಮಾರ್ ತಂಡದ ಭದ್ರಕಾಳಿ ನೃತ್ಯ, ಮುದ್ಲಾಪುರದ ಮರಗಾಲು ಕುಣಿತ, ಯಾದಗಿರಿಯ ಗೊರವರ ಕುಣಿತ, ಪಾವಗಡದ ಗಾರುಡಿ ಗೊಂಬೆ, ಮದ್ದೂರಿನ ಪಟ ಕುಣಿತ, ಮಂಡ್ಯದ ಪೂಜಾ ಕುಣಿತ, ಹುಬ್ಬಳಿಯ ಕೆಳಗೇರಿಯ ಜಗ್ಗಲಗಿ ಮೇಳ, ಕಲಘಟಗಿಯ ಲಂಬಾಣಿ ನೃತ್ಯ, ಹಾಸನದ ಸೋಮನ ಕುಣಿತ, ಸಾಗರದ ಮಹಿಳಾ ಡೊಳ್ಳು, ರಾಮನಗರ ಪೂಜಾ ಕುಣಿತ, ಕನಕದಪುರದ ವೇಷಾಧಾರಿಗಳು, ಮೇಲುಕೋಟೆಯ ನಾಸಿಕ್ ಡೋಲು, ಬೇಲೂರಿನ ಕೀಲು ಕುದುರೆ, ಮಂಡ್ಯದ ವಿಶಿಷ್ಟ ನಗಾರಿ, ಬೆಂಗಳೂರಿನ ಯಕ್ಷಗಾನ ವೇಷಧಾರಿಗಳು, ಉಡುಪಿಯ ಕಥಕ್ಕಳಿ ವೇಷಧಾರಿಗಳು, ಮೈಸೂರಿನ ಕಂಸಾಳೆ ನೃತ್ಯ, ಮಂಗಳೂರಿನ ಅಗೋರಿ ವೇಷ, ತುರುವೇಕೆರೆಯ ನಂದಿಧ್ವಜ, ಬೆಳ್ಳಾವಿಯ ಅರೆ ವಾದ್ಯ, ಮಧುಗಿರಿಯ ಹುಲಿವೇಷ, ಉಡುಪಿಯ ಚಂಡೆಮದ್ದಳೆ, ಮೈಸೂರಿನ ಮಹಿಳಾ ನಗಾರಿ, ವರುಣಾದ ತಮಟೆ ನಗಾರಿ ಹೀಗೆ ವಿವಿಧ ಕಲಾ ಪ್ರಕಾರಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿದವು.

ಇವರೆಲ್ಲರ ಜತೆಯಲ್ಲಿ ಗೊಂಬೆ ಕುಣಿತ, ಕರಡಿ ಮಜಲು, ನಾದಸ್ವರ, ಕೊಂಬು ಕಹಳೆ, ಜೋಕರ್ ಗೊಂಬೆ, ಹೂವಿನ ನೃತ್ಯ, ಸಿಂಧೋಳ್ ಕುಣಿತ, ಕರಗ ಕೋಲಾಟ, ಮಹಿಳೆಯರ ವೀರಗಾಸೆ, ಹುಲಿವೇಷ, ಭಜರಂಗಬಲಿ, ಭರ್ಚಿ ಕುಣಿತ, ಪೋತರಾಜ್ ಕುಣಿತ, ಸುಡುಗಾಡು ಸಿದ್ದರವೇಷ, ಗೋಂದಳಿ ಕಲಾವಿದರು ತಮ್ಮ ಕಲಾವಂತಿಕೆಯನ್ನು ಮೇಳೈಸುವಲ್ಲಿ ಯಶಸ್ವಿಯಾದರು. ನೂರಾರು ಮಂದಿ ಕಲಾವಿದರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಹಲವರು ಅವರೊಂದಿಗೆ ಸೆಲ್ಫಿ, ಫೋಟೊ ತೆಗೆಸಿಕೊಂಡರು.

ಸಚಿವ ಜಮೀರ್ ಪೂಜೆ: ನಗರದ ಮೂರಂಗಡಿ ವೃತ್ತದ ಬಳಿ ನಿರ್ಮಿಸಿದ್ದ ವೇದಿಕೆಯಲ್ಲಿ ಆಸೀನರಾಗಿದ್ದ ಬಿ.ಝೆಡ್.ಜಮೀರ್ ಅಹಮದ್ ಖಾನ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ, ಉಪ ವಿಭಾಗಧಿಕಾರಿ ವಿವೇಕಾನಂದ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಂ ನಿಯಾಜಿ ವಸಂತ ವೈಭವವನ್ನು ಕಣ್ತುಂಬಿಕೊಂಡರು.

ಭುವನೇಶ್ವರಿ ಹೊತ್ತ ಗಜಲಕ್ಷ್ಮಿಗೆ ಹೂಮಳೆಗೆರೆದರು. ಕನ್ನಡಮ್ಮಗೆ ಹೂಮಳೆಗೈದರು, ಅದಕ್ಕೆ ಪ್ರತಿಯಾಗಿ ಗಜಲಕ್ಷ್ಮಿ ಎಲ್ಲರಿಗೂ ಮಾಲಾರ್ಪಣೆ ಮಾಡಿದ್ದಕ್ಕೆ ಪುಳುಕಿತರಾದರು, ನೆರೆದಿದ್ದ ಕೆಲವರು ಗಜಲಕ್ಷ್ಮಿ ಮುಟ್ಟಿ ನಮಿಸಿದರು.

ವಸಂತ ಆಗಮನ

ಸೂಚಿಸುವ ವೇದಿಕೆ ವಡಕರಾಯ ದೇವಸ್ಥಾನ ಸಮೀಪ ನಿರ್ಮಿಸಲಾಗಿದ್ದ ವಸಂತ ವೈಭವ ವೇದಿಕೆಯನ್ನು ವಿಶೇಷ ಅಲಂಕಾರದಿಂದ ಸಿಂಗರಿಸಲಾಗಿತ್ತು. ಸ್ಥಳೀಯ ಪ್ರಸನ್ನ ಡೆಕೊರೇಟರ್ಸ್ಮ ಅನಿಲ್ ಜೋಷಿ ಅವರು ಈ ಅಲಂಕಾರಕ್ಕೆ ಸಾಂಪ್ರದಾಯಿಕ ಸ್ಪರ್ಶ ನೀಡಿದ್ದರು. 42 ಗಡಿಗೆಗಳನ್ನು ನಿಲ್ಲಿಸಿ ಹೊಂಬಾಳೆ ಮಾವಿನ ಎಲೆ ಗರಿಕೆ ಬಿದಿರಿನ ಚಕ್ರ ಸಹಿತ ಹಲವು ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ ವಸಂತದ ಆಗಮನದ ಸನ್ನಿವೇಶವನ್ನು ಮರುಸೃಷ್ಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.