ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತ್ಯಾಚಾರ, ಕೊಲೆ: ವೈದ್ಯರ ಖಂಡನೆ

Published 17 ಆಗಸ್ಟ್ 2024, 16:10 IST
Last Updated 17 ಆಗಸ್ಟ್ 2024, 16:10 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕೋಲ್ಕತ್ತಾ ಆರ್.ಬಿ.ಕರ್ ಮೆಡಿಕಲ್ ಕಾಲೇಜಿನಲ್ಲಿ ಪಿ.ಟಿ. ವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಹೊಸಪೇಟೆ ಮತ್ತು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ  ಗರದಲ್ಲಿ ಶನಿವಾರ ಪ್ರತಿಭಟನಾ ರ‍್ಯಾಲಿ ನಡೆಯಿತು.

ಡಿಎಚ್‌ಒ ಡಾ. ಎಲ್.ಆರ್.ಶಂಕರ್‌ನಾಯ್ಡ್ ಮಾತನಾಡಿ, ‘ತಪ್ಪಿಸ್ಥರಿಗೆ ಕಾನೂನು ಮೂಲಕ ಶಿಕ್ಷೆ ನೀಡಬೇಕು’ ಎಂದರು.

ಭಾರತೀಯ ವೈದ್ಯ ಸಂಘದ ಹೊಸಪೇಟೆ ಶಾಖೆ ಅಧ್ಯಕ್ಷ ಡಾ.ಶ್ರೀನಿವಾಸ ದೇಶಪಾಂಡೆ ಮಾತನಾಡಿ, ‘ವೈದ್ಯಕೀಯ ವೃತ್ತಿ ನಿರತರಿಗೆ ಅಗೌರವ ಮತ್ತು ಅಭದ್ರತೆ ಇದೆ’ ಎಂದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಜಂಬಯ್ಯ ಸೇರಿದಂತೆ ಪ್ರೇರಣಾ, ಭಾರತೀಯ ಮಕ್ಕಳ ಸಂಘ, ಭಾರತೀಯ ದಂತ ವೈದ್ಯಕೀಯ ಸಂಘ, ವಿಜಯನಗರ ಕಾಲೇಜು, ಸಪ್ತಗಿರಿ ನರ್ಸಿಂಗ್ ಕಾಲೇಜು, ದೀಪಾಲಿ ಮತ್ತು ಮಲ್ಲರ ಪ್ಯಾರಾಮಹಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಅಕ್ಕನ ಬಳಗ, ಮಹಿಳಾ ಸಮಾಜದ ಸದಸ್ಯರು, ಎನ್.ಸಿ.ಸಿ. ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT