ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಹಡಗಲಿ | ಜಮೀನು ಲಾವಣಿ ಜಗಳ: ಸಹೋದರನ ಕೊಲೆ

Published 27 ಮೇ 2024, 15:29 IST
Last Updated 27 ಮೇ 2024, 15:29 IST
ಅಕ್ಷರ ಗಾತ್ರ

ಹೂವಿನಹಡಗಲಿ: ಲಾವಣಿ ಹಾಕಿರುವ ಜಮೀನನ್ನು ಮರಳಿ ಬಿಡಿಸಿಕೊಳ್ಳುವ ವಿಚಾರಕ್ಕೆ ಸಹೋದರರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ತಾಲ್ಲೂಕಿನ ನಂದಿಗಾವಿಯಲ್ಲಿ ಭಾನುವಾರ ಸಂಜೆ ನಡೆದಿದೆ.

ನಂದಿಗಾವಿ ಗ್ರಾಮದ ಕಿನ್ನೂರಿ ರಮೇಶ (38) ಕೊಲೆಯಾದವರು. ಇವರ ಹಿರಿಯ ಸಹೋದರ ಕಿನ್ನೂರಿ ಮಲ್ಲಪ್ಪ (40) ಕೊಲೆ ಆರೋಪಿ.

10 ವರ್ಷಗಳ ಹಿಂದೆ ಮಲ್ಲಪ್ಪ ತಮ್ಮ ಅರ್ಧ ಎಕರೆ ಜಮೀನನ್ನು ಕಿರಿಯ ಸಹೋದರ ರಮೇಶನಿಗೆ ಲಾವಣಿ ಹಾಕಿದ್ದರು. ₹40 ಸಾವಿರ ಲಾವಣಿ ಹಣ ನಿಗದಿಪಡಿಸಿ, ₹37 ಸಾವಿರ ಮುಂಗಡ ನೀಡಿ ರಮೇಶ ಜಮೀನು ಉಳುಮೆ ಮಾಡಿಕೊಂಡಿದ್ದರು. ಲಾವಣಿ ಜಮೀನು ಮರಳಿ ಬಿಟ್ಟುಕೊಡುವ ವಿಚಾರದಲ್ಲಿ ಸಹೋದರರ ನಡುವೆ ಕೆಲ ದಿನಗಳಿಂದ ಜಗಳ ನಡೆಯಿತ್ತಿತ್ತು. ಇದೇ ವಿಚಾರಕ್ಕೆ ಭಾನುವಾರ ಸಂಜೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರಮೇಶನ ಎದೆಗೆ ಮಲ್ಲಪ್ಪ ಕತ್ತರಿಯಿಂದ ಚುಚ್ಚಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಗಾಯಾಳುವನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ.

ಮೃತರ ಪತ್ನಿಯ ದೂರಿನನ್ವಯ ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT