ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಹಡಗಲಿ: ದಾಖಲೆ ರಹಿತ ₹12.17 ಲಕ್ಷ ವಶ

Published 24 ಏಪ್ರಿಲ್ 2024, 4:58 IST
Last Updated 24 ಏಪ್ರಿಲ್ 2024, 4:58 IST
ಅಕ್ಷರ ಗಾತ್ರ

ಹೂವಿನಹಡಗಲಿ: ಸಮೀಪದ ಎಸ್.ಆರ್.ಎಂ.ಪಿ.ಪಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ದಾಖಲೆ ರಹಿತ ₹12.17 ಲಕ್ಷವನ್ನು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.

‘ಹೂವಿನಹಡಗಲಿಯ ವರ್ತಕ ಜೇತುಸಿಂಗ್ (ನಾತುಸಿಂಗ್) ಎಂಬುವವರ ಕಾರು ತಪಾಸಣೆ ನಡೆಸಿದಾಗ ₹12,17,500 ನಗದು, ₹14,965 ಮೌಲ್ಯದ 50.6 ಲೀ ಮದ್ಯ, ₹2.50 ಲಕ್ಷ ಮೌಲ್ಯದ ಚಿನ್ನಾಭರಣ ಸಿಕ್ಕಿದೆ’ ಎಂದು ಸಹಾಯಕ ಚುನಾವಣಾಧಿಕಾರಿ ರಮೇಶಕುಮಾರ್ ತಿಳಿಸಿದ್ದಾರೆ.

ಹಡಗಲಿಯಿಂದ ಹರಪನಹಳ್ಳಿ ಕಡೆ ಹೊರಟಿದ್ದ ಕಾರು, ಪೊಲೀಸ್ ವಾಹನ ಕಂಡು ವೇಗ ಹೆಚ್ಚಿಸಿದ್ದರಿಂದ ಪೊಲೀಸರು ಅನುಮಾನಗೊಂಡು ಅಡ್ಡಗಟ್ಟಿ ತಪಾಸಣೆ ನಡೆಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT