ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧ್ಯಾತ್ಮ ಅರಿಯಲು ಪರಿಶುದ್ಧ ಮನಸ್ಸು ಮುಖ್ಯ’

Last Updated 26 ಜೂನ್ 2022, 13:30 IST
ಅಕ್ಷರ ಗಾತ್ರ

ವಿಜಯಪುರ: ಮನುಷ್ಯ ಮನೋವಿಕಾಸದ ಅಧ್ಯಾತ್ಮಿಕ ಮತ್ತು ಅಂತರ್ಮುಖಿಯ ಭಾವನೆಗಳನ್ನು ಪರಿಪೂರ್ಣವಾಗಿ ಅರಿಯಲು ಪರಿಶುದ್ಧವಾದ ಮನಸ್ಸು ಮುಖ್ಯ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾರಾಯಣ ಪವಾರ ಅಭಿಪ್ರಾಯಪಟ್ಟರು.

ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಆರ್.ಕೆ. ಕುಲಕರ್ಣಿ ವಿರಚಿತ ‘ದರ್ಶನ ದೀಪಿಕೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‌ಪಾಶ್ಚಿಮಾತ್ಯ, ಪೌರ್ವಾತ್ಯ ನಾಡಿನ ಆತ್ಮಶೋಧಕರಿಗೆ ವೈಚಾರಿಕ, ಅಧ್ಯಾತ್ಮಿಕ, ಅಲೌಕಿಕ ಮತ್ತು ಪಾರಮಾರ್ತಿಕ ಜಗತ್ತನ್ನು ಅರಿಯಲು ದರ್ಶನ ದೀಪಿಕೆ ಕೃತಿ ಸಹಕಾರಿಯಾಗಿದೆ ಎಂದರು.

ಪುಸ್ತಕ ಬಿಡುಗಡೆ ಮಾತನಾಡಿದ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮದಭಾವಿ, ಇಂಗ್ಲಿಷ್ ಭಾಷಾ ಸಾಹಿತ್ಯಕ್ಕೆ ಡಾ.ಆರ್.ಕೆ.ಕುಲಕರ್ಣಿ ಅವರ ಕೊಡುಗೆ ಅಮೂಲ್ಯವಾದುದು ಎಂದು ಹೇಳಿದರು.

ಜೀವನಧರ್ಮ ಮತ್ತು ಅಧ್ಯಾತ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಭೌತಿಕ-ಅಲೌಕಿಕ ಜೀವನದ ಬಗ್ಗೆ ಬೆಳಕು ಚೆಲ್ಲುವ ಒಂದು ಉತ್ತಮ ಕೃತಿಯಾಗಿದೆ ಎಂದರು.

ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಸಮಾಜದಲ್ಲಿ ಸಾಹಿತ್ಯ ಪ್ರಜ್ಞೆ ಮತ್ತು ಅಭಿರುಚಿ ಮೂಡಿಸಲು ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.

ಡಾ. ಚನ್ನಪ್ಪ ಕಟ್ಟಿ ಮಾತನಾಡಿ, ಭಾಷೆಯು ವ್ಯಕ್ತಿಯೊಳಗಿನ ಅಂತರರಾತ್ಮದ ಗುಣಗಳನ್ನು ಮತ್ತು ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಲು ಸಾಧನವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಟಿ.ಮುದಕಣ್ಣವರ,ಸಾಹಿತಿ ಡಾ. ರಾಜಶೇಖರ ಮಠಪತಿ, ಡಾ. ಆರ್.ಕೆ. ಕುಲಕರ್ಣಿ, ಕುಣಗಲ್‍ನ ಕಾಚಕ್ಕಿ ಪ್ರಕಾಶನದ ಚೇತನ ನಾಗರಾಳ, ಡಾ.ಐ.ಎಸ್.ಶಿವಶರಣರ, ಪ್ರೊ.ಎಂ.ಎಸ್.ಖೊದ್ನಾಪೂರ,ಪ್ರೊ.ಬಿ.ಎನ್.ಶಾಡದಳ್ಳಿ, ತರಂಗಿಣಿ, ಸಿದ್ದಾರ್ಥ, ಪ್ರೊ.ಎಂ.ಎಸ್.ಖೊದ್ನಾಪೂರ, ಗೋಪಾಲ ಕುಲಕರ್ಣಿ, ಬಸವರಾಜ ಇರ್ಮಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT