ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ ಜಲಾಶಯ: 19,172 ಕ್ಯುಸೆಕ್‌ ನೀರು ಒಳಹರಿವು

Published 12 ಜುಲೈ 2023, 12:20 IST
Last Updated 12 ಜುಲೈ 2023, 12:20 IST
ಅಕ್ಷರ ಗಾತ್ರ

ವಿಜಯಪುರ: ಆಲಮಟ್ಟಿ ಜಲಾಶಯಕ್ಕೆ ಬುಧವಾರದಿಂದ ಒಳಹರಿವು ಆರಂಭಗೊಂಡಿದೆ. ಜಲಾಶಯದ ನೀರಿನ ಸಂಗ್ರಹದ (2002ರಿಂದ) ಇತಿಹಾಸದಲ್ಲಿಯೇ ಬುಧವಾರ (ಜುಲೈ 12) ಆರಂಭಗೊಂಡ ಒಳಹರಿವು ಅತ್ಯಂತ ತಡವಾದ ಒಳಹರಿವು. ಇಲ್ಲಿಯವರೆಗೆ 2019 ರಲ್ಲಿ ಜುಲೈ 3ರಂದು ತಡವಾಗಿ ಒಳಹರಿವು ಆರಂಭವಾಗಿತ್ತು.

ಬುಧವಾರ ಜಲಾಶಯಕ್ಕೆ 19,172 ಕ್ಯುಸೆಕ್ (1.65 ಟಿಎಂಸಿ ಅಡಿ) ನೀರು ಹರಿದು ಬಂದಿದೆ. ಜಲಾಶಯದಲ್ಲಿ ಸದ್ಯ 20.547 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಬಳಕೆಯೋಗ್ಯ 3 ಟಿಎಂಸಿ ಅಡಿ ನೀರಿದೆ. ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಕೊರತೆಯ ಕಾರಣ ಹೆಚ್ಚಿನ ನೀರು ಆಲಮಟ್ಟಿಗೆ ಹರಿದು ಬರುವುದು ತೀರಾ ಕಡಿಮೆ. ಹೀಗಾಗಿ ಮುಂಗಾರು ಹಂಗಾಮಿಗೆ ಕೃಷಿಗೆ ನೀರು ಹರಿಸುವುದು ಅನುಮಾನ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT