ಸೋಮವಾರ, ಅಕ್ಟೋಬರ್ 18, 2021
28 °C

ಸಿಇಟಿ:ಎಕ್ಸಲೆಂಟ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕರ್ನಾಟಕ ಪರೀಕ್ಷಾ ಪ್ರಾದಿಕಾರ ಈಚೆಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ನಗರದ ಎಕ್ಸಲೆಂಟ್ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ನಂದಿನಿ ಚೌಕಿಮಠ ಎಂಜಿನಿಯರಿಂಗ್‍ನಲ್ಲಿ 117, ಬಿ.ಎಸ್ಸಿ ಅಗ್ರಿಕಲ್ಚರ್‌ನಲ್ಲಿ 18 ಮತ್ತು ವೆಟರ್ನರಿಯಲ್ಲಿ 77ನೇ ರ‍್ಯಾಂಕ್‌ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾಳೆ.

ಶ್ರವಣಕುಮಾರ ಬಿರಾದಾರ (ಎಂಜಿನಿಯರಿಂಗ್ 565), ಅಭಿಷೇಕ ಅವಟಿ(ಎಂಜಿನಿಯರಿಂಗ್ 630, ಬಿ.ಎಸ್ಸಿ ಅಗ್ರಿ 142, ವೆಟರ್ನರಿ 96), ಸಾಯಿಪ್ರಸಾದ ಬಿರಾದಾರ (ಎಂಜಿನಿಯರಿಂಗ್ 1253, ಬಿ.ಎಸ್ಸಿ ಅಗ್ರಿ 339, ವೆಟರ್ನರಿ 627), ಶರಣಬಸಯ್ಯ ಹಿರೇಮಠ (ಎಂಜಿನಿಯರಿಂಗ್ 1453), ರಾಹುಲ್ ಪಾಟೀಲ (ಎಂಜಿನಿಯರಿಂಗ್ 3031, ಬಿ.ಎಸ್ಸಿ ಅಗ್ರಿ 863, ವೆಟರ್ನರಿ 589), ಅಭಿಷೇಕ ಕಿಣಗಿ (ಎಂಜಿನಿಯರಿಂಗ್ 3059), ಪ್ರಣಾಲಿ ಜಾಧವ (ಎಂಜಿನಿಯರಿಂಗ್ 3117), ಪ್ರಿಯಾಂಕಾ ಹತ್ತಿ (ಎಂಜಿನಿಯರಿಂಗ್ 3214, ಬಿ.ಎಸ್ಸಿ ಅಗ್ರಿ 1224, ವೆಟರ್ನರಿ 1036), ಸಯ್ಯದ ಅರ್ಸಲನ್ ಇನಾಮದಾರ (ಎಂಜಿನಿಯರಿಂಗ್ 3351, ಬಿ.ಎಸ್ಸಿ ಅಗ್ರಿ 2270, ವೆಟರ್ನರಿ 3556), ನಬಿರಸುಲ್ಲಾ ಮುಲ್ಲಾ (ಎಂಜಿನಿಯರಿಂಗ್ 3556, ಬಿ.ಎಸ್ಸಿ ಅಗ್ರಿ 1523, ವೆಟರ್ನರಿ 2182), ಪ್ರನಮ್ಯ ಬಿರಾದಾರ (ಎಂಜಿನಿಯರಿಂಗ್ 3991), ಸುಪ್ರಿಯಾ ಜೋಶಿ (ಎಂಜಿನಿಯರಿಂಗ್ 4339, ಬಿ.ಎಸ್ಸಿ ಅಗ್ರಿ 1759, ವೆಟರ್ನರಿ 1829), ಅಶ್ವಿನಿ ಶಿರಗಾಂವ (ಎಂಜಿನಿಯರಿಂಗ್ 4251, ಬಿ.ಎಸ್ಸಿ ಅಗ್ರಿ 2389, ವೆಟರ್ನರಿ 4510), ಅಭಿಷೇಕ ಕಟ್ಟಿಮನಿ (ಎಂಜಿನಿಯರಿಂಗ್ 4798, ಬಿ.ಎಸ್ಸಿ ಅಗ್ರಿ 2356, ವೆಟರ್ನರಿ 3955) ರ‍್ಯಾಂಕ್‌ ಗಳಿಸಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಚೆರ್ಮನ್‌ ಬಸವರಾಜ ಕೌಲಗಿ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಪ್ರಾಂಶುಪಾಲ ಡಿ.ಎಲ್. ಬನಸೊಡೆ, ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.