ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಡಿಸಿ ನಗರ ಸಂಚಾರ: ಮತದಾರರ ವಿವರ ಪರಿಶೀಲನೆ

Last Updated 4 ಜುಲೈ 2022, 15:21 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರು ಸೋಮವಾರನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ವಿಜಯಪುರ ನಗರ ಮತಕ್ಷೇತ್ರದ ವ್ಯಾಪ್ತಿಯ ವಿವಿಧ ಮತಗಟ್ಟೆಗಳಲ್ಲಿ ಲಿಂಗಾನುಪಾತ, ಪುನಾರವರ್ತಿತ ಮತದಾರ ಹೆಸರು ಮತ್ತು ಹೊಸ ಮತದಾರ ನೋಂದಣಿ ಬಗ್ಗೆ ಪರಿಶೀಲಿಸಿದರು.

ನಗರದ ಕಾಳಿಕಾನಗರ, ಶಾಹುನಗರ ಸೇರಿದಂತೆ ವಿವಿಧೆಡೆ ಸಂಚರಿಸಿದ ಜಿಲ್ಲಾಧಿಕಾರಿಗಳು, ಮತದಾರರ ಮನೆಗಳಿಗೆ ಭೇಟಿ ನೀಡಿ, ಪುನಾರವರ್ತಿತ ಹೆಸರಗಳನ್ನು ಮತದಾರರ ಪಟ್ಟಿಯಿಂದ ನಿಯಮಾನುಸಾರ ಕಡಿಮೆ ಮಾಡಿದ ಬಗ್ಗೆ ಪರಿಶೀಲಿಸಿದರು.

ಕೆಲ ಕಡೆಗಳಲ್ಲಿ, ಒಬ್ಬ ಮತದಾರನು ಬೇರೆ ಬೇರೆ ಮತಗಟ್ಟೆಗಳಲ್ಲಿ ಇರುವ ಬಗ್ಗೆ ಚುನಾವಣಾ ಆಯೋಗದಿಂದ ಮಾಹಿತಿ ಸ್ವೀಕರಿಸಿದ ಮೇಲೆ ಸ್ಥಳೀಯ ಮತಗಟ್ಟೆ ಅಧಿಕಾರಿಗಳಿಂದ ಈ ಬಗ್ಗೆ ಮನೆಮನೆ ಸಮೀಕ್ಷೆ ಮಾಡಿಸಿದಾಗ ಅಂತಹ ಕೆಲವು ಮತದಾರರ ವಿವರಗಳು ಎರಡು ಅಥವಾ ಹೆಚ್ಚು ಕಡೆ ಇರುವುದು ಕಂಡು ಬಂದಿತ್ತು. ಈ ರೀತಿ ಬೇರೆ ಬೇರೆ ಕಡೆ ಇರುವವರ ಹೆಸರನ್ನು ಅವರ ಅರ್ಹ ಸ್ಥಳದ ಮತದಾರರ ಪಟ್ಟಿಯಲ್ಲಿಯೇ ಉಳಿಸಿ, ಬೇರೆ ಕಡೆ ಇರುವಂತಹ ವಿವರವನ್ನು ಮತದಾರ ಪಟ್ಟಯಿಂದ ತೆಗೆದು ಹಾಕಲಾಗಿದೆ ಎಂದು ವಿಜಯಪುರ ತಹಶೀಲ್ದಾರ್‌ ಸಿದ್ದರಾಮ ಬೋಸಗಿ ಅವರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಸಹಾಯಕ ಆಯುಕ್ತ ಬಲರಾಮ ಲಮಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT