ಮಂಗಳವಾರ, ಸೆಪ್ಟೆಂಬರ್ 29, 2020
22 °C

ಟ್ರ್ಯಾಕ್ಟರ್‌, ಟ್ರೇಲರ್‌ ಕಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಟ್ರ್ಯಾಕ್ಟರ್‌, ಟ್ರೇಲರ್‌ ಮತ್ತು ಬೈಕ್‌ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಂದಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಿಂದಗಿ ತಾಲ್ಲೂಕಿನ ಗುತ್ತರಗಿ ಗ್ರಾಮದ ಹುಸೇನ್‌ ನದಾಫ(24), ಸಮೀರ್‌ ನದಾಫ(20), ರವಿಕುಮಾರ ಮಾದರ(24), ಪೈಗಂಬರ್‌ ನದಾಫ(20) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಅಂದಾಜು ₹ 14.93 ಲಕ್ಷ ಮೌಲ್ಯದ 8 ಟ್ರೇಲರ್‌, ಒಂದು ಬೈಕ್‌, ಎರಡು ಟ್ರ್ಯಾಕ್ಟ‌ರ್‌ ಎಂಜಿನ್‌ ವಶಪಡಿಸಿಕೊಂಡಿದ್ದಾರೆ.

ಇಂಡಿ ಉಪವಿಭಾಗದ ಪ್ರಭಾರ ಡಿ.ಎಸ್.ಪಿ. ಟಿ.ಎಸ್. ಸುಲ್ಪಿ ನೇತೃತ್ವದಲ್ಲಿ ಸಿಂದಗಿ ಸರ್ಕಲ್‌  ಸತೀಶಕುಮಾರ ಎಸ್. ಕಾಂಬಳೆ, ಪಿ.ಎಸ್.ಐ. ಎಸ್.ಎಚ್. ಹೊಸಮನಿ, ಸಿಬ್ಬಂದಿಗಳಾದ ಎಸ್.ಎನ್.ಸಂಕದ, ಎಂ.ಜಿ.ಪಾಟೀಲ. ಎಚ್.ಎಸ್. ಬಗಲಿ, ಎಸ್.ಪಿ.ಹುಣಸಿಕಟ್ಟಿ, ಜಿ.ಸಿ.ಪಾಟೀಲ, ಬಿ.ಎಲ್.ಪಟೇದ, ಎಸ್.ಎಂ. ಬತ್ತಗೌಡರ, ವೈ.ಕೆ.ಉಕಮನಾಳ, ಆರ್.ಎಲ್.ಕಟ್ಟಿಮನಿ, ಎ.ಕೆ.ಮಾಳಾಬಾ, ಜಿ.ಎಂ. ಕೊಟ್ಯಾಳ, ವಿ.ಆರ್.ರಾಠೋಡ, ಎಸ್.ಕೆ.ಯಳಸಂಗಿ, ಎಸ್.ಆರ್.ಚವ್ಹಾಣ ನೇತೃತ್ವದ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು