ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಭೂಕಂಪನ: 4.6 ತೀವ್ರತೆ ದಾಖಲು 

Last Updated 9 ಜುಲೈ 2022, 2:21 IST
ಅಕ್ಷರ ಗಾತ್ರ

ವಿಜಯಪುರ: ಶನಿವಾರ ಬೆಳ್ಳಂಬೆಳಿಗ್ಗೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭೂಕಂಪನದ ಅನುಭವವಾಗಿದೆ.

ಬೆಳಿಗ್ಗೆ 6.22ರಿಂದ 6.23ರ ವೇಳೆಗೆ ಭೂಮಿ 10 ಸೆಕೆಂಡ್ ಗೂ ಅಧಿಕ ಸಮಯ ಕಂಪಿಸಿದೆ. ಜೊತೆಗೆ ಭಾರೀ ಶಬ್ಧ ಭೂಮಿಯೊಳಗಿಂದ ಕೇಳಿಬಂದಿತು.

ನಿದ್ರೆಯಿಂದ ಆಗ ತಾನೆ ಎದ್ದವರು, ಏಳದವರು ಭೂಮಿಯ ಕಂಪನ ಮತ್ತು ಭಾರೀ ಶಬ್ಧದಿಂದ ಬೆಚ್ಚಿ ಬಿದ್ದು ಆತಂಕದಿಂದ ಮನೆಯಿಂದ ಓಡಿ ಹೊರಬಂದರು.

ಭೂಕಂಪನದ ಕೇಂದ್ರಬಿಂದು ಯಾವುದು ಮತ್ತು ಭೂಕಂಪನದ ತೀವ್ರತೆ ಎಷ್ಟಿತ್ತು ಎಂಬುದು ಇನ್ನು ಖಚಿತವಾಗಿಲ್ಲ. ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ಭೂಕಂಪನದ ಅನುಭವ ಆಗುತ್ತಿದ್ದು, ಜನರಿಗೆ ಸಾಮಾನ್ಯ ಸಂಗತಿಯಂತಾಗಿದೆ.

ವಿಜಯಪುರ ನಗರವೇ ಕೇಂದ್ರ ಬಿಂದು
ಶನಿವಾರ ಬೆಳಿಗ್ಗೆ 6.22ಕ್ಕೆ ವಿಜಯಪುರ ನಗರ ಕೇಂದ್ರಿತವಾಗಿ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.9 ರಷ್ಟು ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಖಚಿತಪಡಿಸಿದೆ.

9.9 ಕಿ.ಮೀ. ಭೂಮಿಯ ಆಳದಲ್ಲಿ ಭೂಕಂಪನ ಸಂಭವಿಸಿದೆ.ವಿಜಯಪುರ ನಗರ ಸೇರಿದಂತೆ ಬಸವನ ಬಾಗೇವಾಡಿ, ತಿಕೋಟಾ, ಬಬಲೇಶ್ವರ, ಜಮಖಂಡಿ, ಹೊರ್ತಿ, ನೆರೆಯ ಮಹಾರಾಷ್ಟ್ರದ ಸೋಲಾಪುರ, ಪುಣೆ, ಪಂಢರಪುರದಲ್ಲೂ ಭೂಕಂಪನದ ಅನುಭವವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT