ನಾಲತವಾಡ: ಪಟ್ಟಣದಲ್ಲಿ ಜೋಡಿ ದ್ಯಾಮವ್ವ ಜಾತ್ರೆ ಅಂಗವಾಗಿ ಶುಕ್ರವಾರ ಸಂಜೆ ಬಜಾರ್ನಲ್ಲಿ ಟ್ರ್ಯಾಕ್ಟರ್ ಡೆಡ್ಲಿ ರೇಸ್ ಸ್ಪರ್ಧೆ ಆಯೋಜಿಸಲಾಗಿತ್ತು.

ಶನಿವಾರ ಬೆಳಗಿನ ಜಾವ 2 ಗಂಟೆವರೆಗೆ ನಡೆದ ರೇಸ್ನಲ್ಲಿ, ಎರಡು ಟ್ರ್ಯಾಕ್ಟರ್ಗಳನ್ನು ಹಿಂಬದಿ ಜೋಡಿಸಿ, ಇಂಜಿನ್ ಮೇಲಕ್ಕೇರಿಸುವ, ಹಿಂದಿನ ಚಕ್ರ ಕಾರ್ಬನ್ ದೂಳು ಎಬ್ಬಿಸುವ ಹಗ್ಗಜಗ್ಗಾಟದಂತೆ ಪರಸ್ಪರ ಹಿಂಬದಿಯಲ್ಲಿ ಬಂಧಿಸಲ್ಪಟ್ಟ ಎರಡು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಟ್ರ್ಯಾಕ್ಟರ್ ಓಡಿಸುವ ಸ್ಪರ್ಧೆ ರೋಚಕವಾಗಿತ್ತು. ಟ್ರ್ಯಾಕ್ಟರ್ನ ಮುಂದಿನ ಗಾಲಿಗಳು ಮೇಲಕ್ಕೆ ಎದ್ದಿದ್ದರೂ ಚಾಲಕರು ಚಲಾಯಿಸುತ್ತಾ ಸಾಹಸ ತೋರಿದರು.

ಪಟ್ಟಣ ಸೇರಿದಂತೆ ಹೋಬಳಿಯಲ್ಲಿ ಇದೇ ಮೊದಲ ಬಾರಿಗೆ ಈ ತರಹದ ರೇಸ್ ಆಯೋಜಿಲಾಗಿದ್ದು, ರಾಯಚೂರು, ಬಾಗಲಕೋಟೆ, ವಿಜಯಪುರ, ಯಾದಗಿರಿ ಜಿಲ್ಲೆಗಳಿಂದ ಟ್ರ್ಯಾಕ್ಟರ್ಗಳು ಬಂದಿದ್ದವು. ರೇಸ್ಗೆ ಮೊದಲ ನಾಲ್ಕು ಸ್ಥಾನ ಪಡೆದವರಿಗೆ ಬಹುಮಾನ ನೀಡಲಾಯಿತು. ಈ ರೇಸ್ ನೋಡಲು ಕಿಕ್ಕಿರಿದು ಸೇರಿದ್ದ ಜನಸ್ತೋಮ ಬಜಾರ್ನ ಮಹಡಿಗಳ ಮೇಲೆ, ಮರವೇರಿ, ರಸ್ತೆ ಇಕ್ಕೆಲಗಳಲ್ಲಿ ಸಾವಿರಾರು ಜನ ಸೇರಿದ್ದರು.

ಟ್ರ್ಯಾಕ್ಟರ್ ರೇಸ್ ಕಂಡು ನೆರದಿದ್ದ ಜನರು ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಜಾತ್ರೆ ಪ್ರಯುಕ್ತ ನಡೆದ ರೇಸ್ ನೋಡುಗರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಕೆಲ ಸಮಯ ಕುತೂಹಲ ಉಂಟುಮಾಡಿತು. ಆಯ್ಕೆಯಾದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.