ಮುದ್ದೇಬಿಹಾಳ: ಶ್ರಮಿಕ ವೃತ್ತಿಗಳನ್ನು ಆಶ್ರಯಿಸಿ ಬದುಕುವ ವರ್ಗಕ್ಕಾಗಿಯೇ 'ಕಾಯಕ ಯೋಜನೆ' ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾರಿಗೆ ತಂದು ₹50 ಸಾವಿರವನ್ನು ಶ್ರಮಿಕ ವರ್ಗಕ್ಕೆ ನೀಡುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಮಾರುತಿ ನಗರದಲ್ಲಿ ಶುಕ್ರವಾರ ತಾಲ್ಲೂಕು ಹಡಪದ ಸಮಾಜ ಜನಜಾಗೃತಿ ಸಮಾವೇಶ ಹಾಗೂ ನೂತನ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಮಡಿವಾಳ, ಹಡಪದ, ಹೂಗಾರ, ಗಾಣಿಗ ಸಮಾಜಗಳನ್ನು ಇದುವರೆಗೂ ಯಾವ ಸರ್ಕಾರಗಳೂ ಪರಿಗಣಿಸಿರಲಿಲ್ಲ, ನಮ್ಮ ಸರ್ಕಾರ ಹಿಂದುಳಿದ ನಿಗಮ ಮಾಡಿತು. ಹಡಪದ ಸಮಾಜದ ಸಮುದಾಯ ಭವನಕ್ಕೆ ₹ 10 ಲಕ್ಷ ಅನುದಾನ ನೀಡಿದೆ ಎಂದರು.
ಯಾರು ಎಷ್ಟು ಕುತಂತ್ರ ಮಾಡುತ್ತಾರೋ ಮಾಡಲಿ, ಕುತಂತ್ರಿಗಳು ಹೊರಗಡೆಯೂ ಇರುತ್ತಾರೆ, ಮನೆಯಲ್ಲೂ ಇರುತ್ತಾರೆ, ಎದುರಿಸುವುದು ಅನಿವಾರ್ಯ. ಈ ಬಾರಿ ಭಾರತೀಯ ಜನತಾ ಪಕ್ಷದಿಂದ ನಾನು ಅಭ್ಯರ್ಥಿಯಾಗಿ ನಿಲ್ಲೋದು ಸತ್ಯ, ಒಂದು ಲಕ್ಷ ಮತಗಳಿಂದ ಗೆಲ್ಲುವ ಗುರಿ ಇದೆ
ಜನರೇ ದೈವ ಸ್ವರೂಪರು, ಮತದಾರ ದೇವರಲ್ಲಿ ನಂಬಿಕೆ ಇಟ್ಟಿರುವೆ, ದೈವ ಯಾವತ್ತೂ ನನ್ನ ಕೈ ಬಿಡುವುದಿಲ್ಲ. ನನ್ನ ದುಡಿಮೆಯ ಬಹುಪಾಲು ದಾಸೋಹಕ್ಕೆ ಮೀಸಲಿಟ್ಟಿದ್ದೇನೆ ಎಂದರು.
ತಂಗಡಗಿ ಹಡಪದ ಅಪ್ಪಣ್ಣ ಮಹಾ ಸಂಸ್ಥಾನಮಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಶೋಭಾತಾಯಿ ಶರಣಮ್ಮನವರು, ಪುರಸಭೆ ಸದಸ್ಯೆ ಭಾರತಿ ಪಾಟೀಲ್, ಸದಾನಂದ ಮಾಗಿ, ಗಣ್ಯರಾದ ಹುಲಗೇಶ್ ಈಳಗೇರ, ಶಿವಾನಂದ ಮಂಕಣಿ, ಹಡಪದ ಸಮಾಜದ ತಾಲ್ಲೂಕು ಅಧ್ಯಕ್ಷ ಶಂಕ್ರಪ್ಪ ಹಡಪದ, ಉಪಾಧ್ಯಕ್ಷ ಚಂದಪ್ಪ ಕವಡಿಮಟ್ಟಿ, ಅಡಿವೆಪ್ಪ ಹಡಪದ, ಶಂಕರ ಹಡಪದ, ಸವಿತಾ ಸಮಾಜದ ಅಧ್ಯಕ್ಷ ರವಿ ತೇಲಂಗಿ, ಮಹೇಶ ತೇಲಂಗಿ, ದೇವೇಂದ್ರ ಶಹಾಪೂರ, ಬಸವರಾಜ ಹಡಪದ, ಭೀಮು ಹಡಪದ, ಶಿವು ಬಿದರಕುಂದಿ, ಶೇಖರ ಹಡಪದ, ಬಸವರಾಜ ಹಡಪದ, ಶ್ರೀಕಾಂತ ಹಡಪದ ಸೇರಿದಂತೆ ಸಮಾಜದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎ.ಬಿ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.