ಸೋಲಾಪುರ: ಜಿಲ್ಲೆಯ ಪಂಢರಪುರ–ಮಂಗಳವೇಡಾ ರಸ್ತೆಯ ಶರದ್ ನಗರ ಬಳಿ ಸೋಮವಾರ ನಡೆದ ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ. ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತುಳಜಾಪುರ ಮತ್ತು ಅಕ್ಕಲಕೋಟದಲ್ಲಿ ದೇವರ ದರ್ಶನ ಮುಗಿಸಿ ತೆರಳುತ್ತಿದ್ದ ಭಕ್ತರಿದ್ದ ಕ್ರೂಸರ್ಗೆ ಕಂಟೇನರ್ ಡಿಕ್ಕಿ ಹೊಡೆಯಿತು.

ಮುಂಬೈನ್ ಡೊಂಬಿವಲಿ ಪ್ರದೇಶದ ನಿವಾಸಿಗಳಾದ ಯೋಗಿನಿ ಕೋಕಣೆ, ಸೋನಂ ಆಹಿರೆ, ಆದಿತ್ಯ ಗುಪ್ತಾ, ಸವಿತಾ ಗುಪ್ತಾ ಮೃತರು. ಮೃತರು ಮತ್ತು ಗಾಯಾಳುಗಳು ಮುಂಬೈ ಮತ್ತು ಠಾಣೆಯ ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದು, ರಜೆ ನಿಮಿತ್ತ ಕುಟುಂಬ ಸಮೇತ ಪ್ರವಾಸಕ್ಕೆ ಬಂದಿದ್ದರು. ಅವರು ಸೋಮವಾರ ರಾತ್ರಿ ಪಂಢರಪುರದಿಂದ ರೈಲಿನಲ್ಲಿ ಮುಂಬೈಗೆ ತೆರಳಬೇಕಾಗಿತ್ತು. ಆದರೆ, ಅದಕ್ಕೂ ಮೊದಲು ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ನಂತರ ಕೆಲಕಾಲ ಪಂಢರಪುರ–ಮಂಗಳವೇಡಾ ರಸ್ತೆಯ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.