ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ನಿಗದಿಗೆ ಸಭೆ

Published 2 ಜೂನ್ 2023, 16:31 IST
Last Updated 2 ಜೂನ್ 2023, 16:31 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಒಟ್ಟು 211 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವರ್ಗವಾರು ಮೀಸಲಾತಿಯನ್ನು ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ನಿಗದಿಪಡಿಸುವ ಪ್ರಕ್ರಿಯೆಯನ್ನು ನಡೆಸಲು ಜಿಲ್ಲಾಧಿಕಾರಿ ವಿಜಯಮಹಾಂತೇಶ ಅವರು ತಾಲ್ಲೂಕುವಾರು ಸ್ಥಳ ಹಾಗೂ ದಿನಾಂಕ ನಿಗದಿಪಡಿಸಿದ್ದಾರೆ.

ಜೂನ್ 12ರಂದು ಬೆಳಿಗ್ಗೆ 11ಕ್ಕೆ ಕೊಲ್ಹಾರದ ತಾಲ್ಲೂಕು ಪಂಚಾಯಿತಿ ಕಚೇರಿಯ ಸಮುದಾಯ ಭವನದಲ್ಲಿ, ಮಧ್ಯಾಹ್ನ 3 ಕ್ಕೆ ನಿಡಗುಂದಿ ಮುದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.

ಜೂ.13ರಂದು ಬೆಳಿಗ್ಗೆ 10.30ಕ್ಕೆ ತಿಕೋಟಾದ ಹಾಜಿಮಸ್ತಾನ್ ದರ್ಗಾದಲ್ಲಿ, ಮಧ್ಯಾಹ್ನ 12.30ಕ್ಕೆ ಬಬಲೇಶ್ವರದ ಗುರುಪಾದೇಶ್ವರ ಶಿವಾನುಭವ ಮಂಟಪದಲ್ಲಿ ಮತ್ತು ಮಧ್ಯಾಹ್ನ 3.30ಕ್ಕೆ ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಜೂ.14ರಂದು ಬೆಳಿಗ್ಗೆ 11ಕ್ಕೆ ಬಸವನಬಾಗೇವಾಡಿಯ ಕೆ.ಕೆ.ಆರ್.ಟಿ.ಸಿ. ಡಿಪೋ ಹತ್ತಿರದ ಶ್ರೀ ಜಗದ್ಗುರು ಪಂಚಾಚಾರ್ಯ ಬಸವಕಲ್ಯಾಣ ಭವನದಲ್ಲಿ, ಮಧ್ಯಾಹ್ನ 3ಕ್ಕೆ ದೇವರಹಿಪ್ಪರಗಿಯ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.

ಜೂ.15ರಂದು ಬೆಳಿಗ್ಗೆ 11ಕ್ಕೆ ಮುದ್ದೇಬಿಹಾಳದ ತಹಶೀಲ್ದಾರ್‌ ಕಚೇರಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಾಗೂ ಮಧ್ಯಾಹ್ನ 3 ಕ್ಳೆ ತಾಳಿಕೋಟೆಯ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.

ಜೂ.16ರಂದು ಬೆಳಿಗ್ಗೆ 11ಕ್ಕೆ ಇಂಡಿ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಾಗೂ ಮಧ್ಯಾಹ್ನ 3ಕ್ಕೆ ಚಡಚಣದ ಗುರು ಕೃಪಾ ಭವನದಲ್ಲಿ ಆಯೋಜಿಸಲಾಗಿದೆ.

ಜೂ.17ರಂದು ಸಿಂದಗಿಯ ವಿಜಯಪುರ ರಸ್ತೆಯ ಡಾ.ಭಾವಿಕಟ್ಟಿ ಕಲ್ಯಾಣ ಮಂಟಪದಲ್ಲಿ ಹಾಗೂ ಮಧ್ಯಾಹ್ನ 3ಕ್ಕೆ ಆಲಮೇಲದ ಐ.ಕೆ. ರಾಯಲ್ ಫಂಕ್ಷನ್ ಹಾಲ್‍ನಲ್ಲಿ ಆಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT