ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯ ನಿವಾರಣೆಗೆ ಸಾಕ್ಷಿಯಾದ ಹಡಪದ ಅಪ್ಪಣ್ಣ

Last Updated 18 ಆಗಸ್ಟ್ 2022, 15:31 IST
ಅಕ್ಷರ ಗಾತ್ರ

ಕಲ್ಯಾಣದ ಶರಣರಲ್ಲಿ ಒಂದು ಗಟ್ಟಿ ನಿಲುವಿತ್ತು, ಕಲ್ಯಾಣಕ್ಕೆ ಬಂದವರೆಲ್ಲ ನಮ್ಮವರು, ಅವರು ಶರಣರು ಎಂದರು. ಹೀಗಾಗಿ ಅಲ್ಲಿರುವವರೆಲ್ಲ 770ಅಮರ ಗಣಂಗಳಾದರು. ಇಲ್ಲಿ ಬಸವಣ್ಣನವರು, ಬರಿಯ ಬಾಯಿ ಮಾತಿನಿಂದ ಕಲ್ಯಾಣವನ್ನು ಕಟ್ಟಲಿಲ್ಲ. ಅಲ್ಲಿ ಪ್ರತಿಯೊಬ್ಬರದು ನುಡಿದದ್ದೇ ನಡೆಯಾಗಿತ್ತು. ಎಲ್ಲರದೂ ಒಂದೇ ಮಾರ್ಗವಾಗಿತ್ತು. ತಮ್ಮ ಜವಾಬ್ದಾರಿಯನ್ನು ಒಂದೆಳೆಯೂ ವ್ಯತ್ಯಾಸವಾಗದಂತ ನಿಭಾಯಿಸಿ ಬದುಕಿನ ಸಾರ್ಥಕತೆ ಮೆರೆದ ಶರಣರಲ್ಲಿ ಹಡಪದ ಅಪ್ಪಣ್ಣನವರು ಪ್ರಮುಖರು.

ಇವರು ಬಸವಣ್ಣನವರ ಪರಮ ಆಪ್ತರಾಗಿ ಕೊನೆಯವರೆಗೂ ಬಸವಣ್ಣನವರ ನೆರಳಿನಂತೆ ಇದ್ದಕಾರಣ ನಿಜಸುಖಿ ಎಂದು ಇತಿಹಾಸದಲ್ಲಿ ಉಳಿದವರು ಹಡಪದ ಅಪ್ಪಣ್ಣನವರು.

ಆಪ್ತರು ಎನ್ನುವದಕ್ಕೆ ಒಳ್ಳೆಯ ಉದಾಹರಣೆ ಹಡಪದ ಅಪ್ಪಣ್ಣ. ಇವರನ್ನು ಬಸವಣ್ಣವರು ತಮ್ಮ ಆಪ್ತಸಹಾಯಕರನ್ನಾಗಿ ಇಟ್ಟಕೊಂಡದ್ದರ ಹಿಂದೆಯೂ ಒಂದು ವೈಚಾರಿಕ ನಿಲುವು ಅಡಕವಾಗಿದೆ. ಅಂದಿನ ಕಾಲದಲ್ಲಿ ಹಡಪದ(ಕ್ಷೌರಿಕ)ರು ಎಂದರೆ ದಲಿತರಿಗಿಂತ ಕೀಳಾಗಿ ಕಾಣುತ್ತಿದ್ದರು. ಬೆಳಿಗ್ಗೆ ಎದ್ದೊಡನೆ ಇವರ ಮುಖವನ್ನು ನೋಡಿದರೆ ಖಂಡಿತವಾಗಿಯೂ ಅನಿಷ್ಠ ಸಂಭವಿಸುತ್ತದೆ ಎಂಬುದು ಸಾಂಪ್ರದಾಯವಾಗಿತ್ತು. ಈ ಬಲವಾದ ಮೌಢ್ಯವನ್ನು ಬೇರುಸಹಿತ ಕಿತ್ತಿಹಾಕುವ ಮುಂದಾಲೋಚನೆ ಬಸವಣ್ಣನವರದಾಗಿತ್ತು.

ಹೀಗಾಗಿ ಕಲ್ಯಾಣದಲ್ಲಿದ್ದ ಅಥವಾ ಕಲ್ಯಾಣಕ್ಕೆ ಯಾರಾದರೂ ಬಂದು ಬಸವಣ್ಣನವರನ್ನು ಭೇಟಿಯಾಗಬೇಕಾದರೆ ಮೊದಲು ಹಡಪದ ಅಪ್ಪಣ್ಣನವರನ್ನೆ ಕಂಡು ಅವರಿಂದ ಸೂಚನೆ ಸಿಕ್ಕಮೇಲಷ್ಟೆ ಬಸವಣ್ಣನವರನ್ನು ನೋಡ ಬೇಕಾಗಿತ್ತು. ಈ ವ್ಯವಸ್ಥೆಯಿಂದ ಒಬ್ಬವ್ಯಕ್ತಿ ಮುಖ ನೋಡವುದರಿಂದ ಎನಾದರೂ ಸಂಭವಿಸುತ್ತದೆ ಎನ್ನುವುದಕ್ಕೆ ಬಸವಣ್ಣ ಅಂತಿಮ ಹೇಳಿದರು. ಈ ಕಾರ್ಯವನ್ನು ಗಮನಿಸಿದ ಅಪ್ಪಣ್ಣನವರು ಬಸವಣ್ಣನವರ ಅಂತರಂಗ ಬಹಿರಂಗವನ್ನು ಅರಿತು ಅಲ್ಲಮಪ್ರಭುದೇವರಂತಹ ಘನವ್ಯಕ್ತಿತ್ವದ ಮಹಾಪುರುಷರಿಗೆ ಬಸವಣ್ಣನವರ ಬಗ್ಗೆ ಇದ್ದ ತಪ್ಪು ಪರಿಕಲ್ಪನೆಯನ್ನು ಜಾಣ್ಮೆಯಿಂದ ಪರಿಹರಿಸಿದ್ದು, ಬಸವಣ್ಣನವರು ಮತ್ತು ಹಡಪದ ಅಪ್ಪಣ್ಣನವರ ಆಪತ್ತೆಯನ್ನು ಜಗಜ್ಜಾಹಿರಗೊಳಿಸಿದೆ. ಇದು ಸಾವಿನಲ್ಲೂ ಆಪ್ತರಾಗುವಂತೆ ಮಾಡಿದ ಅಪರೂಪದ ಆಪ್ತತೆಗೆ ಇತಿಹಾಸದಲ್ಲಿ ಸಾಕ್ಷಿಯಾಗಿದೆ.

ಸಂಗ್ರಹ: ಎಂ.ಬಿ.ಕಟ್ಟಿಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT