ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊರ್ತಿ | ಆಧ್ಯಾತ್ಮಿಕ ಬೇಸಿಗೆ ಶಿಬಿರಕ್ಕೆ ಚಾಲನೆ

Published 2 ಏಪ್ರಿಲ್ 2024, 15:23 IST
Last Updated 2 ಏಪ್ರಿಲ್ 2024, 15:23 IST
ಅಕ್ಷರ ಗಾತ್ರ

ಹೊರ್ತಿ: ಸಮೀಪದ ಕನ್ನೂರಿನ ಗಣಪತರಾವ್‌ ಮಹಾರಾಜ ಶಾಂತಿಕುಟೀರ ಟ್ರಸ್ಟ್, ಶ್ರೀಶೈಲೇಶ್ವರ ವಿದ್ಯಾಕೇಂದ್ರ ಮತ್ತು ಭಾರತೀಯ ಸಂಸ್ಥೆ ಆಶ್ರಯದಲ್ಲಿ ಶಾಂತಿಕುಟೀರದಲ್ಲಿ 24ನೇ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ಈಚೆಗೆ ನಡೆಯಿತು.

ಈ ವೇಳೆ ಶ್ರೀಕೃಷ್ಣ ಸಂಪಗಾಂವಕರ ಮಹಾರಾಜರು ಮಾತನಾಡಿ, ‘ಶಾಂತಿ ಕುಟೀರವು ನೈತಿಕ ನೆಲೆಗಟ್ಟಿನಲ್ಲಿ ಶಿಕ್ಷಣ ಕೊಡುತ್ತಿದೆ’ ಎಂದರು.

ಭರತ್ ರಾಜ್ ಮಾತನಾಡಿ, ‘ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಜವಾಬ್ದಾರಿ ಎಲ್ಲರದ್ದು. ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕು. ತ್ಯಾಗ–ಬಲಿದಾನದಿಂದ ಸ್ವಾತಂತ್ರ್ಯ ಲಭಿಸಿದ್ದು, ಈ ಇತಿಹಾಸ ಅರಿತು ದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು’ ಎಂದರು.

ವಾಸುದೇವ ಹೆರಕಲ್, ಪ್ರಕಾಶ ಗದ್ದಿಗನ್ನವರ, ಅಣ್ಣಾಸಾಹೇಬ ಪಾಟೀಲ, ಕುಮಾರ್ ನಾನಾವಟೆ ಮಾತನಾಡಿದರು.

ಶಾಂತಿಕುಟೀರ ಟ್ರಸ್ಟ್‌ ಅಧ್ಯಕ್ಷ ಗೋವಿಂದ ಬಾಹೇತಿ, ಅಜಿತ್ ಕನ್ನೂರ, ರವಿ ದಾನಿ, ಪ್ರಕಾಶ್ ಗದ್ದಿಗೆನ್ನವರ, ವಿವೇಕಾನಂದ, ಭರತ್ ರಾಜ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಠ್ಠಲ ಭಜಂತ್ರಿ, ಶ್ರೀನಿವಾಸ ಕುಲಕರ್ಣಿ, ಶ್ರೀಕೃಷ್ಣ ಸಂಪಗಾಂವಕರ್, ಕುಮಾರ್ ನಾನಾವಟೆ ಇದ್ದರು.

ಹೊರ್ತಿ:ಸಮಿಪದ ವಿಜಯಪೂರ ತಾಲ್ಲೂಕಿನ ಕನ್ನೂರು ಸಮರ್ಥ ಸದ್ಗುರು ಗಣಪತರಾವ ಮಹಾರಾಜ ಶಾಂತಿ ಕುಟೀರ ಟ್ರಸ್ಟ್ ಕನ್ನೂರ ಹಾಗೂ ಶ್ರೀಶೈಲೇಶ್ವರ ವಿದ್ಯಾ ಕೇಂದ್ರ ಸಂಡೂರು ಮತ್ತು ಭಾರತೀಯ ಸಂಸ್ಥೆಯ ಇದರ ಸಂಯುಕ್ತ ಆಶ್ರಯದಲ್ಲಿ ಶಾಂತಿ ಕುಟೀರದಲ್ಲಿ ಭಾನುವಾರ ಹಮ್ಮಿಕೊಂಡ 2024ರ 1ತಿಂಗಳ ಉಚಿತ 24ನೇ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಬೇಸಿಗೆ ಸಿಬಿರದಲ್ಲಿ ಶ್ರೀಕೃಷ್ಣ ಸಂಪಗಾಂವಕರ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT