ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ದರ ಏರಿಕೆ ನಿರೀಕ್ಷೆಯಲ್ಲಿ ರೈತ

ಕಳೆದ ವಾರದ ಧಾರಣೆಯೇ ಈ ವಾರವೂ ಮುಂದುವರಿಕೆ
Last Updated 20 ಜೂನ್ 2019, 11:34 IST
ಅಕ್ಷರ ಗಾತ್ರ

ವಿಜಯಪುರ: ಅಗತ್ಯಕ್ಕೆ ತಕ್ಕಂತೆ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಆಗುತ್ತಿರುವುದರಿಂದ, ಈ ವಾರದ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ, ಮುಂದಿನ ವಾರ ಧಾರಣೆ ಹೆಚ್ಚಳವಾಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ.

‘ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದ ಈರುಳ್ಳಿ ಮಾರುಕಟ್ಟೆಗೆ ಆವಕವಾಗುತ್ತಿದ್ದರಿಂದ ಪ್ರತಿ ಕ್ವಿಂಟಲ್‌ಗೆ ₹ 800 ರಿಂದ ₹ 900 ಮಾರಾಟವಾಗುತ್ತಿತ್ತು. ಕ್ರಮೇಣ ಧಾರಣೆಯಲ್ಲಿ ಹೆಚ್ಚಳಗೊಂಡು, ಸದ್ಯ ವಿಜಯಪುರ ಮಾರುಕಟ್ಟೆಯಲ್ಲಿ ₹1,400 ರಿಂದ ₹1,600 ವರೆಗೆ ಮಾರಾಟವಾಗುತ್ತಿದೆ’ ಎಂದು ವ್ಯಾಪಾರಿಗಳು ಹಾಗೂ ರೈತರು ಹೇಳುತ್ತಾರೆ.

‘ಧಾರಣೆ ಕಡಿಮೆ ಇರುವ ಕಾರಣ ಮಾರ್ಚ್‌ ತಿಂಗಳಿನಲ್ಲಿ ಬೆಳೆದ ಸುಮಾರು 800 ರಿಂದ 900 ಪ್ಯಾಕೆಟ್‌ (5 ಲೋಡ್‌) ಈರುಳ್ಳಿ ಶೆಡ್‌ನಲ್ಲಿ ಹಾಕಿದ್ದೇನೆ. ಈ ವಾರ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಈರುಳ್ಳಿಗೆ ₹1,100 ರಿಂದ ₹1,200 ಧಾರಣೆ ಇದ್ದು, ಇದಕ್ಕೂ ಹೆಚ್ಚಿನ ಬೆಲೆಗೆ ಮಾರಾಟ ಆಗಿದೆ. ಮುಂದಿನ ವಾರ ಧಾರಣೆ ಹೆಚ್ಚಳಗೊಳ್ಳುವ ನಿರೀಕ್ಷೆಯಿದೆ. ಲೋಡ್‌ ಈರುಳ್ಳಿ ಬೆಳೆಯಲು ₹ 60 ರಿಂದ ₹70 ಸಾವಿರ ಖರ್ಚು ಮಾಡಿದ್ದು, ಕನಿಷ್ಠ ₹1,500 ರಿಂದ ₹ 2 ಸಾವಿರ ವರೆಗೆ ಮಾರಾಟವಾದರೆ ಮಾತ್ರ ಒಳ್ಳೆಯ ಆದಾಯ ಸಿಕ್ಕಂತಾಗುತ್ತದೆ’ ಎನ್ನುತ್ತಾರೆ ಗೊಳಸಂಗಿ ಗ್ರಾಮದ ರೈತ ಅಮೃತ ಯಾದವ.

‘ನಮ್ಮಲ್ಲಿ ನಾಲ್ಕು ಜನರು ಮಾತ್ರ ಈರುಳ್ಳಿ ವ್ಯಾಪಾರಸ್ಥರು ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರುವುದಿಲ್ಲ. ಪ್ರತಿ ವಾರ 950ರಿಂದ ಸಾವಿರ ಕ್ವಿಂಟಲ್‌ ಆಸುಪಾಸು ಬರುತ್ತದೆ. ಗಾತ್ರ ಮತ್ತು ಗುಣಮಟ್ಟದ ಆಧಾರದ ಮೇಲೆ ಈ ವಾರ ₹ 1,400 ರಿಂದ ₹1,600 ವರೆಗೆ ಮಾರಾಟವಾಗಿದೆ. ಹೋದ ವಾರಕ್ಕೆ ಹೊಲಿಸಿದರೆ, ಹತ್ತಿಪ್ಪತ್ತು ರೂಪಾಯಿ ಮಾತ್ರ ಏರಿಳಿತವಾಗಿದೆ’ ಎಂದು ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ವಿ.ರಮೇಶ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT