ಶುಕ್ರವಾರ, ಆಗಸ್ಟ್ 19, 2022
25 °C

ಶಾಸಕರ ಅವಹೇಳನ ಆರೋಪ: ವಕೀಲ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ವಕೀಲ ಸೈಯದ್‌ ಆಸೀಫ್‌ವುಲ್ಲಾ ಖಾದ್ರಿ ಎಂಬುವವನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದು, ಕೋರ್ಟ್‌ಗೆ ಹಾಜರು ಪಡೆದಿದ್ದಾರೆ.

‘ನಗರದ ಎಸ್‌.ಎಸ್‌.ಪ್ರೌಢಶಾಲೆ ಮುಂದೆ ಕಟ್ಟಿಸುತ್ತಿರುವ ಮಂದಿರದ ಬಗ್ಗೆ ಹಾಗೂ ವಕ್ಫ್‌ ಬೋರ್ಡ್‌ನಿಂದ ಕಟ್ಟಿಸುತ್ತಿರುವ ಮಸೀದಿಗಳ ಬಗ್ಗೆ ಶಾಸಕ ಯತ್ನಾಳ ವಿರೋಧ ಮಾಡುತ್ತಿದ್ದಾರೆ’ ಎಂದು ವಕೀಲ ಸೈಯದ್‌ ಆಸೀಫ್‌ವುಲ್ಲಾ ಖಾದ್ರಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡುವ ಮೂಲಕ ಮತೀಯ ಗಲಭೆ ಹಬ್ಬಿಸುಲು ಮುಂದಾಗಿದ್ದಾರೆ’ ಎಂದು ಆರೋಪಿಸಿ ಗೋಳಗುಮ್ಮಟ ಠಾಣೆಯಲ್ಲಿ ಬಾಪುಗೌಡ ಪಾಟೀಲ ದೂರು ದಾಖಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಸೈಯದ್‌ ಆಸೀಫ್‌ವುಲ್ಲಾ ಖಾದ್ರಿ ಅವರನ್ನು ಪೊಲೀಸರು ಬಂಧಿಸಿ, ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.

ವಿರೋಧ: ಸೈಯದ್‌ ಆಸೀಫ್‌ವುಲ್ಲಾ ಖಾದ್ರಿ ಬಂಧನ ವಿರೋಧಿಸಿ ಅವರ ಬೆಂಬಲಿಗರು ಠಾಣೆ ಎದುರು ಜಮಾಯಿಸಿದ್ದರು. ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು