ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಕೋಟಾ: ಬಿಸಿಲ ನಾಡಲ್ಲಿ ದಾಹ ತಣಿಸುವ ಮಡಿಕೆ

Published 21 ಮಾರ್ಚ್ 2024, 5:09 IST
Last Updated 21 ಮಾರ್ಚ್ 2024, 5:09 IST
ಅಕ್ಷರ ಗಾತ್ರ

ತಿಕೋಟಾ: ದಿನದಿಂದ‌‌ ದಿನಕ್ಕೆ‌ ಹೆಚ್ಚುತ್ತಿರುವ ಬಿಸಿಲ ಧಗೆಗೆ ಕಂಗಾಲಾದ ಬಿಸಿಲ ನಾಡಿನ ಜನರು ತಂಪು ನೀರಿಗಾಗಿ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಮಣ್ಣಿನ ಮಡಕೆ ಮೊರೆ ಹೋಗುತ್ತಿದ್ದಾರೆ.

ಪಟ್ಟಣದ ಜತ್ತ ರಸ್ತೆಯಲ್ಲಿ ಕುಂಬಾರ ಕುಟುಂಬದವರು ತಯಾರಿಸುವ ಹಲವು ಮಾದರಿಯ ಮಣ್ಣಿನ ಮಡಿಕೆಗಳಿಗೆ ಬಾರಿ ಬೇಡಿಕೆ ಇದ್ದು, ಸುತ್ತಮುತ್ತಲಿನ ಗ್ರಾಮದ ಜನರಷ್ಟೆ ಅಲ್ಲದೇ ಮಹಾರಾಷ್ಟ್ರಕ್ಕೆ ಹೋಗುವ ಪ್ರಯಾಣಿಕರು ಸಹ ತಮ್ಮ ವಾಹನ ನಿಲ್ಲಿಸಿ ಮಡಕೆಗಳನ್ನು ಖರೀದಿಸುವುದು ಈಗ ಸಾಮಾನ್ಯವಾಗಿದೆ.

ಮಣ್ಣಿನಿಂದ ತಯಾರಿಸಿದ ಬಾಟಲ್
ಮಣ್ಣಿನಿಂದ ತಯಾರಿಸಿದ ಬಾಟಲ್

ಅಧುನಿಕತೆಯ ಭರದಲ್ಲಿ ಮರೆಯಾಗುತ್ತಿರುವ ಮಡಿಕೆ ತಯಾರಿಕೆಯನ್ನೇ ಅವಲಂಬಿಸಿರುವ ಕುಂಬಾರ ಕುಟುಂಬಗಳು, ಬಡವರ ಪ್ರೀಡ್ಜ್‌ ಎಂದು ಕರೆಯುವ ಈ ಮಡಿಕೆಗಳನ್ನು ತಯಾರಿಸಿ ಈಗಲೂ ಮಾರಾಟ ಮಾಡುತ್ತಿರುವುದು ವಿಶೇಷ. ಹಲವು ಲವಣಾಂಶಗಳ ಮಿಶ್ರಿತ ಮಣ್ಣಿನಿಂದ ತಯಾರಾದ ಈ ಮಡಿಕೆ ಉಪಯೋಗಿಸುವದರಿಂದ ಹಲವು ರೋಗ ರುಜೀನುಗಳಿಂದ ದೂರ ಇರಬಹುದು ಎನ್ನುವುದು ಅನುಭವಿಗಳ ಹಿತನುಡಿ.

ಹೊಸ ಮಾದರಿ ಮಡಕೆ: ಆಕರ್ಷಣಿಯವಾಗಿ ಕಾಣಲು ಬಣ್ಣ ಲೇಪಿತ ಮಡಿಕೆ ಮಾರಾಟ ಮಾಡುತ್ತಿದ್ದು ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹರಿವೆ, ಮಣ್ಣಿನ ಬಾಟಲ್, ಗಡಿಗೆ ಇದ್ದು ಸುಸಜ್ಜಿತ ಮುಚ್ಚಳ ಅಳವಡಿಸಿದ್ದು, ನಳ ಜೋಡಿಸಲಾಗಿದೆ. ನೈಸರ್ಗಿಕವಾದ ಆರೋಗ್ಯ ಕಾಪಾಡಿಕೊಳ್ಳಲು ಮಣ್ಣಿನಿಂದ ತಟ್ಟೆ, ಪ್ಲೇಟ್, ಚಮಚ, ಗ್ಲಾಸ್, ಲೋಟ ಇತರೆ ವಸ್ತುಗಳು ಸಹ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ತತ್ರಾಣಿ ಸಹ ಮಾರಾಟ ಮಾಡುತ್ತಿದ್ದಾರೆ.

ಮಣ್ಣಿನಿಂದ ತಯಾರಿಸಿದ ತಟ್ಟೆ
ಮಣ್ಣಿನಿಂದ ತಯಾರಿಸಿದ ತಟ್ಟೆ

15 ಲೀಟರ್ ಮಡಿಕೆಗೆ ₹ 400, 20 ಲೀಟರ್ ಮಡಿಕೆಗೆ ₹450, ಮಣ್ಣಿನ ಬಾಟಲ್ ₹150, ಊಟದ ತಟ್ಟೆ, ಗ್ಲಾಸ್, ಲೋಟ್ ಹಾಗೂ ಚಮಚ ಸೇರಿ ₹300 , ನಾಸ್ತಾ ಪ್ಲೇಟ್ ₹20, ಚಹಾ ಕಪ್ ₹10, ಗ್ಲಾಸ್ ₹20 ರಂತೆ ಮಣ್ಣಿನಿಂದ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಮಣ್ಣಿನಿಂದ ತಯಾರಿಸಿದ ವಿವಿಧ ಸಾಮಗ್ರಿಗಳು
ಮಣ್ಣಿನಿಂದ ತಯಾರಿಸಿದ ವಿವಿಧ ಸಾಮಗ್ರಿಗಳು

‘ಬೇಸಿಗೆ ಬಂತೆಂದರೆ ನಾವು ಮಣ್ಣಿನ ಮಡಕೆ ಉಪಯೋಗಿಸುತ್ತೇವೆ. ನೀರು ತಂಪಾಗುವುದರ ಜೊತೆಗೆ ಮಣ್ಣಿನಲ್ಲಿರುವ ಲವಣಾಂಶಗಳಿಂದ ಆರೋಗ್ಯ ಸುಧಾರಿಸುತ್ತದೆ. ಹಲವು ರೋಗಗಳು ಸಹ ಮಣ್ಣಿನ ಮಡಕೆ ಉಪಯೋಗಿಸುವದರಿಂದ ದೂರಾಗುತ್ತವೆ‘ ಎಂದು ಮಹಾರಾಷ್ಟ್ರಕ್ಕೆ ಹೋಗುತ್ತಿರುವ ಪ್ರಯಾಣಿಕ ರವಿ ತಿಳಿಸಿದರು.

ಮಣ್ಣಿನಿಂದ ತಯಾರಿಸಿದ ಗ್ಲಾಸ್ ಹಾಗೂ ಲೋಟ
ಮಣ್ಣಿನಿಂದ ತಯಾರಿಸಿದ ಗ್ಲಾಸ್ ಹಾಗೂ ಲೋಟ
ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಮಣ್ಣಿನ ಮಡಿಕೆ ಉಪಯೋಗ ಮಾಡುವದು ಸೂಕ್ತ
ಚಿದಾನಂದ ಕುಂಬಾರ ಮಡಕೆ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT