ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಪ್ಯಾರಾಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ನಿಶಾದ್‌ಗೆ ಬೆಳ್ಳಿ, ಪ್ರೀತಿಗೆ ಕಂಚು

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್
Published 19 ಮೇ 2024, 16:23 IST
Last Updated 19 ಮೇ 2024, 16:23 IST
ಅಕ್ಷರ ಗಾತ್ರ

ಕೊಬೆ (ಜಪಾನ್): ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಭಾರತದ ಹೈಜಂಪ್‌ ಸ್ಪರ್ಧಿ ನಿಶಾದ್ ಕುಮಾರ್ ಮತ್ತು 200 ಮೀಟರ್ ಓಟಗಾರ್ತಿ ಪ್ರೀತಿ ಪಾಲ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ.

ಟೋಕಿಯೊ ಪ್ಯಾರಾ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಕುಮಾರ್ ಪುರುಷರ ಟಿ–47 ವಿಭಾಗದ ಹೈಜಂಪ್‌ ಫೈನಲ್‌ನಲ್ಲಿ 1.99 ಮೀಟರ್‌ ಎತ್ತರ ಜಿಗಿದು ಎರಡನೇ ಸ್ಥಾನ ಪಡೆದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು.   

ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ 2023ರ ಆವೃತ್ತಿಯಲ್ಲಿ ಕುಮಾರ್ ಇದೇ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು.

ಅಮೆರಿಕದ ರೊಡೆರಿಕ್ ಟೌನ್ಸೆಂಡ್ 2.05 ಮೀಟರ್ ಎತ್ತರ ಜಿಗಿದು ಚಿನ್ನ ಗೆದ್ದರು.  ಕಣದಲ್ಲಿದ್ದ ಮತ್ತೊಬ್ಬ ಭಾರತೀಯ ರಾಮ್ ಪಾಲ್ 1.90 ಮೀಟರ್ ಕ್ರಮಿಸಿ ಆರನೇ ಸ್ಥಾನ ಪಡೆದರು.

ಮಹಿಳೆಯರ ಟಿ35 ವಿಭಾಗದ 200 ಮೀಟರ್ ಓಟದ ಫೈನಲ್‌ನಲ್ಲಿ ಪ್ರೀತಿ ಪಾಲ್ 30.49 ಸೆಕೆಂಡುಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು.

ಮಹಿಳೆಯರ ಟಿ20 ವಿಭಾಗದ 400 ಮೀಟರ್ ಓಟದಲ್ಲಿ ದೀಪ್ತಿ ಜೀವನ್‌ಜಿ 56.18 ಸೆಕೆಂಡುಗಳಲ್ಲಿ ಗುರಿ ತಲುಪಿ ಫೈನಲ್‌ಗೆ  ಅರ್ಹತೆ ಪಡೆದರು. 

ಮೂರನೇ ದಿನದಾಟದ ಅಂತ್ಯಕ್ಕೆ ಚೀನಾ 10 ಚಿನ್ನ, 8 ಬೆಳ್ಳಿ, 8 ಕಂಚಿನೊಂದಿಗೆ ಒಟ್ಟು 26 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸದ್ಯ ಭಾರತ 29ನೇ ಸ್ಥಾನದಲ್ಲಿದೆ. ಚಾಂಪಿಯನ್‌ಷಿಪ್ ಮೇ 25ರವರೆಗೆ ಮುಂದುವರಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT