ಮುದ್ದೇಬಿಹಾಳ: ಮುದ್ದೇಬಿಹಾಳ ಪಟ್ಟಣದ ಹೊರವಲಯದಲ್ಲಿರುವ ಆಕ್ಸಫರ್ಡ್ಸ್ ಪಾಟೀಲ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ಸ್ ಪಾಟೀಲ್ಸ್ ಶಾಲೆ ಮತ್ತು ನಾಗರಬೆಟ್ಟ ಗುಡ್ಡದ ಪಕ್ಕದಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜಿನಲ್ಲಿ ಫೆ.22 ರಂದು ಬೆಳಿಗ್ಗೆ 10ಕ್ಕೆ ಆಕ್ಸಫರ್ಡ್ ಚಾಂಪಿಯನ್ ಮತ್ತು ಆಕ್ಸಫರ್ಡ್ ಪಾಟೀಲ್ಸ್ ಸೀನಿಯರ್ ಜೀನಿಯಸ್ ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಮಲ್ಲನಗೌಡ ಪಾಟೀಲ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು, ಪಾಲಕರಿಗೆ ಮುದ್ದೇಬಿಹಾಳ ಬಸ್ ನಿಲ್ದಾಣದ ಹತ್ತಿರ ಶಾಲೆಯ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಐಡಿ ಕಾರ್ಡ್, ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಪರೀಕ್ಷೆಯ ದಿನದಂದೇ ಹೆಸರು ನೋಂದಾಯಿಸಲು ಅವಕಾಶವಿದೆ ಎಂದರು.

ಚಾಂಪಿಯನ್ ಪರೀಕ್ಷೆ:

ಮುದ್ದೇಬಿಹಾಳದ ಹೈಸ್ಕೂಲ್ನಲ್ಲಿ ನಡೆಯುವ ₹10 ಲಕ್ಷ ಶಿಷ್ಯವೇತನ ಕೊಡಲಾಗುವ ಆಕ್ಸಫರ್ಡ್ ಚಾಂಪಿಯನ್ ಪರೀಕ್ಷೆಗೆ 5, 8, 9 ಮತ್ತು 10ನೇ ತರಗತಿಯ ರಾಜ್ಯ, ಐಸಿಎಸ್ಇ, ಸಿಬಿಎಸ್ಇ ಪಠ್ಯಕ್ರಮದ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಪರೀಕ್ಷೆಗಳಲ್ಲಿ ತರಗತಿವಾರು 1-5 ರ್ಯಾಂಕ್ ಪಡೆಯುವವರಿಗೆ ಒಂದು ವರ್ಷದ ಸಂಪೂರ್ಣ ಉಚಿತ ಶಿಕ್ಷಣ ಕೊಡಲಾಗುತ್ತದೆ. 6,7 ರ್ಯಾಂಕ್ ಪಡೆಯುವವರಿಗೆ ಶುಲ್ಕದಲ್ಲಿ ಶೇ 75, 8,9 ರ್ಯಾಂಕ್ ಪಡೆಯುವವರಿಗೆ ಶುಲ್ಕದಲ್ಲಿ ಶೇ 50, 10,11 ರ್ಯಾಂಕ್ ಪಡೆಯುವವರಿಗೆ ಶುಲ್ಕದಲ್ಲಿ ಶೇ 25 ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಪರೀಕ್ಷೆಯಲ್ಲಿ ಶೇ 40 ಅಂಕ ಗಳಿಸುವ ಎಲ್ಲ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ 10 ರಿಯಾಯಿತಿ ಇದೆ. ಇಂಗ್ಲಿಷ್ ಗ್ರಾಮರ್, ವಿಜ್ಞಾನ, ಗಣಿತ ವಿಷಯಗಳ ಮೇಲೆ 60 ವಸ್ತುನಿಷ್ಠ ಮಾದರಿಯ ಪ್ರಶ್ನೆಗಳಿದ್ದು ಪರೀಕ್ಷೆ ಒಂದು ಗಂಟೆ ಕಾಲಾವಧಿಯದ್ದಾಗಿರುತ್ತದೆ ಎಂದರು.

ಆಸಕ್ತರು ವಿದ್ಯಾರ್ಥಿ ಹೆಸರು-ತರಗತಿ-ಶಾಲೆಯ ಹೆಸರು,ವಿಳಾಸ, ಮೊಬೈಲ್ ಸಂಖ್ಯೆ, ಎಸ್ಎಂಎಸ್ ಅಥವಾ ವಾಟ್ಸಪ್ ಸಂದೇಶವನ್ನು ಮೊ:8792156682 ಸಂಖ್ಯೆಗೆ ಕಳಿಸಬೇಕು. ಹೆಚ್ಚಿನ ಮಾಹಿತಿಗೆ ಮೊ:8431936945, 7847981398 ಸಂಖ್ಯೆಗಳನ್ನು ಸಂಪರ್ಕಿಸಬೇಕು ಎಂದರು.

ಸೀನಿಯರ್ ಜೀನಿಯಸ್ ಪರೀಕ್ಷೆ:

ನಾಗರಬೆಟ್ಟದ ಗುಡ್ಡದ ಹತ್ತಿರ ಇರುವ ಸೈನ್ಸ್ ಪಿಯು ಕಾಲೇಜಿನಲ್ಲಿ ನಡೆಯುವ ನಗದು ಬಹುಮಾನ ಮತ್ತು ಶಿಷ್ಯವೇತನ ಕೊಡಲಾಗುವ ಆಕ್ಸಫರ್ಡ ಪಾಟೀಲ್ಸ್ ಸೀನಿಯರ್ ಜೀನಿಯಸ್ ಪರೀಕ್ಷೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ರಾಜ್ಯ, ಐಸಿಎಸ್ಇ, ಸಿಬಿಎಸ್ಇ ಪಠ್ಯಕ್ರಮದ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.

ಮೊದಲ 1 ರಿಂದ 7 ಸ್ಥಾನ ಪಡೆಯುವವರಿಗೆ ಕ್ರಮವಾಗಿ ತಲಾ ₹50 ಸಾವಿರ, ₹40 ಸಾವಿರ, ₹30 ಸಾವಿರ, ₹ 20ಸಾವಿರ, ₹10 ಸಾವಿರ, ₹5 ಸಾವಿರ, ₹2500 ನಗದು ಪುರಸ್ಕಾರ ನೀಡಲಾಗುತ್ತದೆ. ಇದಲ್ಲದೆ 1-10 ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ಒಂದು ವರ್ಷದ ಪ್ರಥಮ ಪಿಯುಸಿ ವಸತಿ ಸಹಿತ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.

11-20 ರ್ಯಾಂಕ್ ಪಡೆಯುವ ಟಾಪರ್ಗಳಿಗೆ ಒಂದು ವರ್ಷದ ಪ್ರಥಮ ಪಿಯುಸಿ ಬೋಧನಾ ಶುಲ್ಕದಲ್ಲಿ ಶೇ 100 ರಿಯಾಯಿತಿ ನೀಡಲಾಗುತ್ತದೆ.

ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ವಿಷಯಗಳ ಮೇಲೆ 60 ವಸ್ತುನಿಷ್ಠ ಮಾದರಿಯ ಪ್ರಶ್ನೆಗಳಿದ್ದು ಒಂದು ಘಂಟೆ ಕಾಲಾವಧಿ ಇರುತ್ತದೆ. ಪ್ರತಿ ಪ್ರಶ್ನೆಗೆ 4 ಅಂಕ ಇದ್ದು ತಪ್ಪು ಉತ್ತರಕ್ಕೆ ಒಂದು ಅಂಕ ಕಡಿತಗೊಳಿಸಲಾಗುತ್ತದೆ.

ಆಸಕ್ತರು ವಿದ್ಯಾರ್ಥಿ ಹೆಸರು-ತರಗತಿ-ಶಾಲೆಯ ಹೆಸರು,ವಿಳಾಸ, ಮೊಬೈಲ್ ಸಂಖ್ಯೆ, ಮಾದರಿಯ ಎಸ್ಎಂಎಸ್ ಅಥವಾ ವಾಟ್ಸಪ್ ಸಂದೇಶವನ್ನು ಮೊ:9380095756 ಸಂಖ್ಯೆಗೆ ಕಳಿಸಬೇಕು.

ಹೆಚ್ಚಿನ ಮಾಹಿತಿಗೆ ಮೊ:7483147040, 8310035858, 9019460665, 8971769144 ಸಂಖ್ಯೆಗಳನ್ನು ಸಂಪರ್ಕಿಸಲು ತಿಳಿಸಿದರು.

ನಿರ್ದೇಶಕ ದರ್ಶನಗೌಡ ಪಾಟೀಲ, ರಾಜಶೇಖರ ಹಿರೇಮಠ, ಆನಂದ ನಾವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.