ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರವಧನ ನೀಡಲು ಆಗ್ರಹ

ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ; ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
Last Updated 9 ನವೆಂಬರ್ 2020, 13:49 IST
ಅಕ್ಷರ ಗಾತ್ರ

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ನೌಕರರ ಸಂಘ, ಸಿ.ಐ.ಟಿ.ಯು. ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪತ್ರಿಭಟನೆ ನಡೆಸಲಾಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸುನಂದಾ ಬಿ. ನಾಯಕ,2018ರ ಸೆಪ್ಟೆಂಬರ್‌ನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ₹2 ಸಾವಿರ ಗೌರವಧನವನ್ನು ಹೆಚ್ಚಿಗೆ ಮಾಡಿದ್ದರು. ಈ ಹಣವನ್ನು ಎಲ್ಲ ಜಿಲ್ಲೆಗಳಲ್ಲಿ ನೀಡಿದ್ದಾರೆ. ಆದರೆ, ವಿಜಯಪುರ ಜಿಲ್ಲೆಯಲ್ಲಿ ಹೆಚ್ಚುವರಿ ಗೌರವಧನ ನೀಡಿಲ್ಲ ಎಂದು ಹೇಳಿದರು.

ಮಾತೃಪೂರ್ಣ ಯೋಜನೆ ಪ್ರೋತ್ಸಾಹ ಧನ ₹ 500, ಸಹಾಯಕಿಯರಿಗೆ ₹ 250 ಎಲ್ಲ ಜಿಲ್ಲೆಯಲ್ಲಿ ಕೊಟ್ಟಿದ್ದಾರೆ. ಆದರೆ, ನಮ್ಮ ಜಿಲ್ಲೆಯಲ್ಲಿ ಕೊಟ್ಟಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯಗಳು ಸಮರ್ಪಕವಾಗಿಲ್ಲ. ವಿದ್ಯುತ್ ಸಂಪರ್ಕ ಇದ್ದರೂ ಕೂಡ ಕರೆಂಟ್ ಇರುವುದಿಲ್ಲ ಎಂದು ದೂರಿದರು.

ಗ್ರಾಮೀಣ ವಲಯಗಳಲ್ಲಿ ಅಂಗನವಾಡಿ ಕೇಂದ್ರಕ್ಕೆ ಬಾಡಿಗೆ ಹಣ ಕಚೇರಿಯಿಂದ ಕೊಡುತ್ತಿಲ್ಲ, ಅಂಗನವಾಡಿ ಕಾರ್ಯಕರ್ತೆಯರು ಕೈಯಿಂದ ಬಾಡಿಗೆ ತುಂಬುತ್ತಿದ್ದಾರೆ. ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕರಿಗೆ ಗೌರವಧನ ನೀಡಬೇಕು. ಕೆಲವೊಂದು ತಾಲ್ಲೂಕುಗಳಲ್ಲಿ 3-4 ತಿಂಗಳಿಂದ ಗೌರವಧನ ಕೊಟ್ಟಿರುವದಿಲ್ಲ ಎಂದು ಆರೋಪಿಸಿದರು.

ಸರ್ಕಾರದ ನಿಯಮಾವಳಿ ಪ್ರಕಾರ ಒಬ್ಬ ಮೇಲ್ವಿಚಾರಕಿ ಒಂದು ವಲಯದಲ್ಲಿ ಕೇವಲ ಆರು ತಿಂಗಳು ಮಾತ್ರ ಕೆಲಸ ಮಾಡಬೇಕು. ನಂತರ ಬೇರೆ ವಲಯಕ್ಕೆ ಹೋಗಬೇಕು. ಒಬ್ಬ ಮೇಲ್ವಿವಿಚಾರಕಿ ಒಂದು ತಾಲ್ಲೂಕಿನಲ್ಲಿ 3 ವರ್ಷಗಳ ಮಾತ್ರ ಇರಬೇಕು. ಆದರೆ, ಕೆಲವೊಂದು ಮೇಲ್ವಚಾರಿಕಿಯರು 9-10 ವರ್ಷಗಳಿಂದ ಒಂದೇ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಮೇಲ್ವಿಚಾರಕಿಯರು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಉಪಾಧ್ಯಕ್ಷೆ ಭಾರತಿ ವಾಲಿ, ಗೌರವಾಧ್ಯಕ್ಷ ಸರಸ್ವತಿ ಮಠ, ಸಂಘಟನಾ ಕಾರ್ಯದರ್ಶಿ ಅಶ್ವಿನಿ ತಳವಾರ, ಜಯಶ್ರೀ ಪೂಜಾರಿ, ಗೀತಾ ನಾಯಕ, ಆರತಿ ಜನಕಾರ, ಸರೋಜನಿ ಸಿಂಪಿಗೇರ, ಶೋಭಾ ಕಬಾಡೆ, ದಾನಮ್ಮ ಗುಗ್ಗರೆ ಇದ್ದರು.

---

ಅಂಗನವಾಡಿ ಕೇಂದ್ರಗಳಲ್ಲಿ ವಿತರಣೆ ಮಾಡುವ ಮೊಟ್ಟೆಯ ಹಣವನ್ನು ಮೊದಲು ಅಂಗನವಾಡಿ ಕಾರ್ಯಕರ್ತೆಯರೇ ಖರೀದಿಸಬೇಕಾಗಿದೆ. ಆದ್ದರಿಂದ ಮುಂಗಡವಾಗಿ ಮೊಟ್ಟೆಯ ಹಣವನ್ನು ಪಾವತಿಸಬೇಕು
- ಸುನಂದಾ ಬಿ. ನಾಯಕ,ಅಧ್ಯಕ್ಷೆ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT