ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | 'ಪಂಚಾಯಿತಿ ಮಟ್ಟದಲ್ಲಿ ಬಿತ್ತನೆ ಬೀಜ ದೊರೆಯಲಿ'

Published 30 ಮೇ 2024, 15:47 IST
Last Updated 30 ಮೇ 2024, 15:47 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ದೊರೆಯಬೇಕು. ಸರ್ಕಾರ ನೀಡುವ ಕೃಷಿ ಪರಿಕರಗಳ ಅವಧಿ 7 ರಿಂದ 3 ವರ್ಷಕ್ಕೆ ಇಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಗುರುವಾರ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ್‌ ವಿಲಿಯಂ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ರೈತರು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಪಡೆಯಲು ಹಳ್ಳಿಗಳಿಂದ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಿಗೆ ಹೋಗುವುದು ಕಷ್ಟವಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಿತ್ತನೆ ಬೀಜಗಳು ಸಿಕ್ಕರೆ ರೈತರಿಗೆ ಸಹಕಾರಿಯಾಗಲಿದೆ ಎಂದರು.

ಮುಖಂಡ ರಾಮಸಿಂಗ ರಜಪೂತ, ಪ್ರಕಾಶ ತೇಲಿ, ಬಸವರಾಜ ಗಾಣಗೇರ, ಬಸವರಾಜ ಹಡಪದ, ಅಶೋಕ ಕನ್ನೂರ, ರಾಜಾರಾಮಸಿಂಗ ಕೊಳೂರ, ಬಸವರಾಜ ಗುದಳೆ, ರವಿ ಗೆರಡೆ, ಶ್ರೀಶೈಲ ಮಸೂತಿ, ರಾಜು ಕೇರೂರ, ಬಸವರಾಜ ಮಸೂತಿ, ರಾಜಾರಾಮಸಿಂಗ ಡೊಣೂರ, ಹಣಮಂತ ಶೆಗಣೂಶಿ, ಪರಸು ಚಿಕ್ಕಲಕಿ, ಬಸವರಾಜ ಕಲ್ಬುರ್ಗಿ, ಮಲುಕು ಅಕ್ಕಿಹುಗ್ಗಿ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT