ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸ ಪ್ರಸಾದ್‌ ಹಿಂದುಳಿದ ವರ್ಗದ ಧ್ವನಿಯಾಗಿದ್ದರು: ರಾಜು ಆಲಗೂರ

Published 29 ಏಪ್ರಿಲ್ 2024, 16:15 IST
Last Updated 29 ಏಪ್ರಿಲ್ 2024, 16:15 IST
ಅಕ್ಷರ ಗಾತ್ರ

ವಿಜಯಪುರ: ವಿ.ಶ್ರೀನಿವಾಸ್ ಪ್ರಸಾದ ಅವರು ಒಬ್ಬ ಧೀಮಂತ ನಾಯಕ. ಹಿಂದುಳಿದ ವರ್ಗದ ಹಿತ ಕಾಪಾಡುವ ಮೂಲಕ ಅವರ ಧ್ವನಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹೇಳಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಶ್ರೀನಿವಾಸ್ ಪ್ರಸಾದ ಅವರೊಂದಿಗಿದ್ದ ನನಗೆ ಉತ್ತಮ ಸಂಬಂಧವಿತ್ತು. ಅವರು ಶ್ರೇಷ್ಠ ಸಂಸದೀಯ ಪಟುವಾಗಿದ್ದರು. ನಾನು ಬಳ್ಳೊಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ನನಗೆ ಶಕ್ತಿಯಾಗಿದ್ದರು ಎಂದರು.

ಬಡವರು, ಅಲ್ಪಸಂಖ್ಯಾತರ ಪರ ಅವರ ಕಳಕಳಿ ಅಪಾರ. ಅಂತಹ ನಾಯಕ ಈಗ ಯಾರೂ ಇಲ್ಲ. ಹಿಂದೆ ನಮ್ಮೂರಿಗೆ ಕರೆಸಿ ಅವರಿಂದ ಭಾಷಣ ಮಾಡಿಸಿದ್ದೆ. ಚಳವಳಿಯ ದಿನಗಳಿಂದ ಜಿಲ್ಲೆಯಲ್ಲಿ ನಾನವರ ಒಡನಾಡಿಯಾಗಿದ್ದೆ. ಆರು ಸಲ ಸಂಸದರಾಗಿ, ಶಾಸಕರಾಗಿ ಅವರು ತಮ್ಮ ರಾಜಕೀಯ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT