ಸೋಮವಾರ, ಜನವರಿ 24, 2022
20 °C

ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: 2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್ ಮೂಲಕ ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದ್ದು, ವರ್ಗಾವಣೆ ಪ್ರಕ್ರಿಯೆಯ ವೇಳಾಪಟ್ಟಿ ಈ ಕೆಳಗಿನಂತಿರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಪ್ರಾಥಮಿಕ ಶಾಲಾ ಮುಖ್ಯ ಗುರುಗಳ ಕೋರಿಕೆ ವರ್ಗಾವಣೆ ನ. 29 ರಂದು ಬೆಳಿಗ್ಗೆ 9.30 ರಿಂದ 6.30 ವರೆಗೆ 1 ರಿಂದ ಮುಗಿಯುವವರೆಗೆ ಹಾಗೂ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆ 1 ರಿಂದ 150 ರವರೆಗೆ ನಡೆಯಲಿದೆ.

ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆ ನ.30 ರಂದು ಬೆಳಿಗ್ಗೆ 9.30 ರಿಂದ 6.30 ವರೆಗೆ 151 ರಿಂದ 450 ರವರೆಗೆ ನಡೆಯಲಿದೆ.

ಡಿ.1ರಂದು ಬೆಳಿಗ್ಗೆ 9.30 ರಿಂದ 6.30 ವರೆಗೆ 451 ರಿಂದ 950 ರವರೆಗೆ ನಡೆಯಲಿದೆ.

ಡಿ.2ರಂದು ಬೆಳಿಗ್ಗೆ 9.30 ರಿಂದ 6.30 ವರೆಗೆ 951 ರಿಂದ 1450 ರವರೆಗೆ ನಡೆಯಲಿದೆ.

ಡಿ.3ರಂದು ಬೆಳಿಗ್ಗೆ 9.30 ರಿಂದ 6.30 ವರೆಗೆ 1450 ರಿಂದ ಮುಗಿಯುವರೆಗೆ ನಡೆಯಲಿದೆ.

ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ವರ್ಗಾವಣೆ  ಡಿ.4 ರಂದು ಬೆಳಿಗ್ಗೆ 9.30 ರಿಂದ 6.30 ವರೆಗೆ 1 ರಿಂದ ಮುಗಿಯುವರೆಗೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ನಿರ್ದಿಷ್ಟ ಪಡಿಸಿದ ಹುದ್ದೆಗಳಲ್ಲಿ 3-5 ವರ್ಷಗಳ ಕನಿಷ್ಟ ಸೇವೆ ಪೂರೈಸಿದ ಶಿಕ್ಷಕರ ವರ್ಗಾವಣೆಯ ಕೌನ್ಸಲಿಂಗ್ ಡಿ.5 ರಂದು ಬೆಳಿಗ್ಗೆ 9.30 ರಿಂದ 6.30 ವರೆಗೆ 1 ರಿಂದ ಮುಗಿಯುವರೆಗೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು