ಮಂಗಳವಾರ, ಮೇ 11, 2021
20 °C

ನಗರ ವಾಸಿಗಳೆಲ್ಲರಿಗೂ ಲಸಿಕೆ: ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮನೆ ಮನೆಗೆ ಲಸಿಕೆ ಅಭಿಯಾನ ಪ್ರಾರಂಭ ಮಾಡಿದಾಗಿನಿಂದ ನಗರದಲ್ಲಿ ಲಸಿಕೆ ತೆಗೆದುಕೊಂಡವರ ಸಂಖ್ಯೆ ಶೇ 57ಕ್ಕೆ ತಲುಪಿದೆ. ಇಡೀ ರಾಜ್ಯದಲ್ಲೇ ವಿಜಯಪುರ ನಗರ ನಂ.1 ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಕನಕದಾಸ ಬಡಾವಣೆ ಶ್ರೀ ಹನುಮಾನ ದೇವಸ್ಥಾನದ ಆವರಣ ಹಾಗೂ ದಿವಟಗೇರಿಗಲ್ಲಿ ರಾಯರ ಮಠದ ಹತ್ತಿರ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಉಚಿತ ಕೋವಿಡ್ ಲಸಿಕೆ ಆಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

18 ವರ್ಷ ಮೇಲ್ಪಟ್ಟ ಎಲ್ಲ ಯುವಕರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಿ, ಇದರ ಬಗ್ಗೆ ಕುಲಂಕುಶವಾಗಿ ಮಾಹಿತಿ ಪಡೆದು ಮೇ 31 ರ ಒಳಗಾಗಿ ನಗರದ ಎಲ್ಲರಿಗೂ ಲಸಿಕೆ ಹಾಕಿಸಿ ಶೇ 100 ರಷ್ಟು ಲಸಿಕೆ ಪಡೆದ ನಗರವಾಗಿ ವಿಜಯಪುರವನ್ನು ಮಾಡುವ ಉದ್ದೇಶವಿದೆ ಎಂದರು.

ಕೋವಿಡ್ ಎರಡನೇ ಅಲೆ ಅತ್ಯಂತ ಭಯಾನಕಾಗಿದೆ, ಮೂರನೇ ಅಲೆ ಬರುವದಕ್ಕಿಂತ ಮೊದಲು ನಾವೆಲ್ಲ ಜಾಗರೂಕರಾಗಿರಬೇಕು, ಎಚ್ಚರ ವಹಿಸಬೇಕು ಹೀಗಾಗಿ ಎಲ್ಲರು ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ, ಬಿಸಿ ನೀರು, ಕಷಾಯ ಕುಡಿಯಿರಿ, ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಆರೋಗ್ಯ ಅಧಿಕಾರಿ ಡಾ.ಬಾಲಕೃಷ್ಣ, ವಕೀಲ  ಎಸ್.ಎಸ್.ಸಜ್ಜನ್,  ಚಂದ್ರು ಚೌಧರಿ,  ಮಡಿವಾಳ ಯಳವಾರ, ಪುಟ್ಟು ಸಾವಳಗಿ, ಕಲ್ಲು ಬಿರಾದಾರ, ರಾಚು ಬಿರಾದಾರ, ನಾನಾಗೌಡ ಕಳಸಗೊಂಡ, ಮಲ್ಲು ಹರಣಾಳ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು