ವಿಜಯಪುರ: ವಿಶ್ವ ಪ್ರಸಿದ್ಧ ‘ಪಿಸುಗುಟ್ಟುವ’ ಗೋಳಗುಮ್ಮಟದ ಮುಂಭಾಗದಲ್ಲಿರುವ ವಸ್ತು ಸಂಗ್ರಹಾಲಯ ಐತಿಹ್ಯದ ಸಾಕ್ಷಿ ಸ್ವರೂಪ. ಒಂದೇ ಕಡೆ ದೊರಕಿದ ವಸ್ತುಗಳನ್ನು ಸಂಗ್ರಹಿಸಿ ಇರಿಸಲಾಗಿರುವ ದೇಶದ ಅತ್ಯಂತ ದೊಡ್ಡ ಹಾಗೂ ಹಳೆಯ ವಸ್ತು ಸಂಗ್ರಹಾಲಯ ಎಂಬ ಕೀರ್ತಿಗೂ ಪಾತ್ರವಾಗಿದೆ.

ಗೋಳಗುಮ್ಮಟದಂತೆ ಈ ವಸ್ತು ಸಂಗ್ರಹಾಲಯಕ್ಕೂ ದೊಡ್ಡ ಇತಿಹಾಸವೇ ಇದೆ. 135 ವರ್ಷಗಳ ಇತಿಹಾಸವನ್ನು ಹೊಂದಿರುವ ವಸ್ತು ಸಂಗ್ರಹಾಲಯವನ್ನು ನೋಡಿಯೇ ಆನಂದಿಸಬೇಕು, ಅಲ್ಲಿರುವ ಪ್ರತಿ ವಸ್ತುಗಳು ಇತಿಹಾಸವನ್ನು ಸಾಕ್ಷಿಕರಿಸುತ್ತದೆ. ಸಂಶೋಧಕರಿಗೆ ‘ಹೊಸ’ ವಿಷಯಗಳ ಅಕ್ಷಯ ಪಾತ್ರೆಯಂತೆ ತೋರುತ್ತದೆ. ಹೆಜ್ಜೆ ಹೆಜ್ಜೆಗೂ ವಿಶೇಷ ಅವಶೇಷಗಳು, ಶಾಸನಗಳು, ಆದಿಲ್ಷಾಹಿ ಕಾಲದ ಗೃಹಪಯೋಗಿ ವಸ್ತುಗಳು, ಯುದ್ಧ ಸಾಮಗ್ರಿಗಳು, ಆಗಿನ ಕಾಲದ ಬೆಡ್ ಶೀಟ್ಗಳು, ಪಿಂಗಾಣಿ ವಸ್ತುಗಳ ದೊಡ್ಡ ಲೋಕವೇ ಅಲ್ಲಿದೆ.

ಈ ವಸ್ತು ಸಂಗ್ರಹಾಲಯ ಈಗ ಇರುವುದು ಗೋಳಗುಮ್ಮಟದ ಮುಂಭಾಗದಲ್ಲಿರುವ ಕಟ್ಟಡ ನಗಾರಿ ಖಾನಾದಲ್ಲಿ. ಆದರೆ, ಈ ವಸ್ತು ಸಂಗ್ರಹಾಲಯ 1892ರಲ್ಲಿ ಸ್ಥಾಪನೆಯಾಗಿ ಮೊದಲು ಆನಂದ ಮಹಲ್ ಮುಂಭಾಗದಲ್ಲಿರುವ ನೆಲ ಅಂತಸ್ತಿನಲ್ಲಿತ್ತು. ಜೇಮ್ಸ್ ಬರ್ಗೆಸ್, ಹೆನ್ರಿ ಕೌಸೆನ್ಸ್ ವಸ್ತು ಸಂಗ್ರಹಾಲಯದ ಪ್ರೇರಕ ಶಕ್ತಿಯಾದರು. ಆನಂದ್ ಮಹಲ್ನಲ್ಲಿ ಈ ವಸ್ತು ಸಂಗ್ರಹಾಲಯ ಆರಂಭಗೊಂಡಿತು. ಆದರೆ, ಕಾಲಾಂತರದಲ್ಲಿ ಹೆಚ್ಚಿನ ವಸ್ತುಗಳು ದೊರಕಿದಾಗ ಈ ಸ್ಥಳ ಸಣ್ಣದಾಯಿತು. ಆದರೆ, ಅಲ್ಲಿ ವಸ್ತುಗಳ ಸಂರಕ್ಷಣೆಯೂ ಸವಾಲಾಯಿತು. ಹೀಗಾಗಿ ‘ನಗಾರಿ ಖಾನಾ’ಕ್ಕೆ ಅದನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಅಂದಿನ ಸರ್ಕಾರ ಯೋಚಿಸಿತು. ಆದರೆ, ನಗಾರಿ ಖಾನಾಕ್ಕೆ ಕಿಟಕಿ ಇರಲಿಲ್ಲ, ಬೇರೆ ರೀತಿಯಲ್ಲಿ ಕಿಟಕಿ ಅಳವಡಿಸಿದರೆ ಕಟ್ಟಡದ ಸೌಂದರ್ಯಕ್ಕೆ ಧಕ್ಕೆ ಬರುತ್ತದೆ, ಹೀಗಾಗಿ ಆಸಾರ್ ಮಹಲ್ ಕಟ್ಟಡದಲ್ಲಿರುವ ಕಿಟಕಿಗಳ ವಿನ್ಯಾಸ ರೂಪದಲ್ಲಿಯೇ ನಗಾರಿ ಖಾನಾಕ್ಕೂ ಕಿಟಕಿ ಅಳವಡಿಸಿತು.

ಗೋಳಗುಮ್ಮಟ ನಿರ್ಮಾಣ ವೇಳೆ ರಾಜರ ವಿಶ್ರಾಂತಿಗಾಗಿ ಈ ಕಟ್ಟಡ ನಿರ್ಮಾಣ ಮಾಡಲಾಗಿತ್ತು ಎಂದು ಕೆಲವರು ಹೇಳುತ್ತಾರೆ. ರಾಜ ಬರುವ ಸೂಚನೆ ನೀಡಲು ಅಲ್ಲಿ ನಗಾರಿ ಇರಿಸಲಾಗಿತ್ತು. ಹೀಗಾಗಿ ಇದು ನಗಾರಿ ಖಾನಾ ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರ ಪ್ರಕಾರ ಗೋಳಗುಮ್ಮಟಕ್ಕೆ ದೃಷ್ಟಿ ತಾಕದಿರಲಿ, ಮೊದಲು ಇದರ ಮೇಲೆ ಕಣ್ಣು ಬಿದ್ದು ಒಳ ಪ್ರವೇಶಿಸಿದ ನಂತರ ಗೋಳಗುಮ್ಮಟ ದರ್ಶನವಾಗಲಿ ಎಂಬ ರೀತಿಯಲ್ಲಿ ಕಟ್ಟಡ ಕಟ್ಟಿದ್ದಾರೆ ಎಂದು ಹೇಳುವುದುಂಟು. ಆದರೆ, ದೃಷ್ಟಿ ಕಡಿಮೆ ಮಾಡಲು ಕಟ್ಟಿದ ಕಟ್ಟಡ ಗುಮ್ಮಟದ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.

ನೆಲ ಮಹಡಿಗೆ ಪ್ರವೇಶಿಸಿದಾಗ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಅಪರೂಪದ ಮತ್ತು ಅಮೂಲ್ಯವಾದ ವಸ್ತುಗಳನ್ನು ಅಲ್ಲಿ ದರ್ಶಿಸಬಹುದು. ಅಷ್ಟ ಕೈಗಳನ್ನು ಹೊಂದಿರುವ ನಟರಾಜ ಶಿಲ್ಪ, ಗಣಗಳೊಂದಿಗೆ ಶಿವ ನೃತ್ಯ ಮಾಡುವ ಮೂರ್ತಿಗಳು, ಭವ್ಯತೆಯ ಸ್ವರೂಪವಾಗಿರುವ ಕಲ್ಲಿನ ಬಾಗಿಲು, ಅನೇಕ ಉಬ್ಬುಶಿಲ್ಪಗಳು ಕರ್ನಾಟಕದ ಶಿಲ್ಪಿಗಳ ಕೌಶಲ ಮತ್ತು ಪರಂಪರೆಗೆ ಉತ್ತಮ ಉದಾಹರಣೆಗಳಾಗಿವೆ. ಹೆಚ್ಚಾಗಿ 11 ರಿಂದ 14ನೇ ಶತಮಾನದ ವೀರಗಲ್ಲುಗಳು ಮತ್ತು ಶಾಸನಗಳು ಕನ್ನಡಿಗರ ಶೌರ್ಯವನ್ನು ಘೋಷಿಸುತ್ತವೆ. 14ನೇ ಶತಮಾನದ ಕಪ್ಪು ಕಲ್ಲಿನ ಜೈನ ಪಾರ್ಶ್ವನಾಥ ತೀರ್ಥಂಕರರ ಶಿಲ್ಪಗಳು ಸಹ ಇಲ್ಲಿವೆ.

ಚಾಲುಕ್ಯ ರಾಜ ಮಂಗಳೇಶನು ಮೂಲತಃ ಮಹಾಕೂಟೇಶ್ವರ ದೇವಾಲಯದ ಮುಂದೆ ನಿರ್ಮಿಸಿದ ಕ್ರಿ.ಶ. 6ನೇ ಶತಮಾನದ ಅಪರೂಪದ ಎತ್ತರದ ವಿಜಯ ಸ್ತಂಭವಿದೆ. ಇದನ್ನು ಈಗ ವಸ್ತುಸಂಗ್ರಹಾಲಯದ ಕಾರಿಡಾರ್ನಲ್ಲಿ ಪ್ರದರ್ಶಿಸಲಾಗಿದೆ. ಅದರ ಮೇಲೆ ರಾಜನ ಪ್ರಾಮುಖ್ಯತೆಯ ಕ್ರಮವನ್ನು ಕೆತ್ತಲಾಗಿದೆ. ಈ ಬೃಹತ್ ವಿಜಯ ಕಂಬವನ್ನು ನೋಡುವುದೇ ಒಂದು ಹಬ್ಬ. ಅಲ್ಲಿಯೇ ಕಲ್ಲಿನ ರಂದ್ರ ಪರದೆಗಳು, ಕೌಶಲಪೂರ್ಣ ಸೂಕ್ಷ್ಮ ಕೆತ್ತನೆಗಳಿಗೆ ಗಮನಾರ್ಹವಾದ ಕೊಂಡಿಗಳ ಸರಪಳಿಗಳು ಸಹ ಇವೆ, ಎಲ್ಲವನ್ನೂ ಪ್ರದರ್ಶಿಸಲಾಗಿದೆ.

ಒಂದೇ ಪ್ರದೇಶದಲ್ಲಿ ದೊರಕಿದ ವಸ್ತುಗಳನ್ನು ಇರಿಸಿದ ವಸ್ತು ಸಂಗ್ರಹಾಲಯಗಳಲ್ಲಿ ವಿಜಯಪುರ ವಸ್ತು ಸಂಗ್ರಹಾಲಯ ದೊಡ್ಡದು. ಸಮಗ್ರ ಇತಿಹಾಸವನ್ನು ಅರಿಯುವ ಅಪೂರ್ವ ಸಂಗ್ರಹಾಲಯ ಇದಾಗಿದೆ
ಕೃಷ್ಣ ಕೋಲ್ಹಾರ ಕುಲಕರ್ಣಿ ಇತಿಹಾಸಕಾರ

ಆದಿಲ್ ಷಾಹಿ ಸಾಮ್ರಾಜ್ಯದ ದರ್ಶನ ನೆಲ ಮಹಡಿಯಿಂದ ಮೊದಲ ಮಹಡಿಗೆ 32 ಕಿರಿದಾದ ಮೆಟ್ಟಿಲುಗಳು ಇವೆ. ಇಲ್ಲಿ ಆದಿಲ್ ಶಾಹಿ ಅರಸರ ಕಾಲವೇ ತೆರೆದುಕೊಳ್ಳುತ್ತದೆ. ರಾಜಧಾನಿ ವಿಜಯಪುರದ ಹಳೆಯ ಸಮಗ್ರ ನಕ್ಷೆ ಗಮನ ಸೆಳೆಯುತ್ತದೆ. ಕಪ್ಪು ಮತ್ತು ಬಿಳಿ ಬಣ್ಣದಲ್ಲಿರುವ ಎಂಟು ರಾಜರ ಭಾವಚಿತ್ರಗಳು ಮೌಲ್ಯಯುತ ಮತ್ತು ಕಲಾತ್ಮಕ ವರ್ಣಚಿತ್ರಗಳ ಸಹ ಅಲ್ಲಿವೆ. 17ನೇ ಶತಮಾನದ ಚಿನ್ನದ ಲೇಪನ ಹೊಂದಿರುವ ವರ್ಣಚಿತ್ರಗಳು ನೋಡುಗರ ಮುಂದೆ ಇವೆ. ಈ ಸೂಕ್ಷ್ಮ ವರ್ಣಚಿತ್ರಗಳಲ್ಲಿ ಚಾಂದ್ ಬೀಬಿ ಮೊಹ್ಮದ್ ಆದಿಲ್ ಷಾ ಅವರ ಪ್ರೇಯಸಿ ರಂಭಾವತಿ ಅವರ ವರ್ಣಚಿತ್ರಗಳು ಸೇರಿವೆ. ಕ್ರಿ.ಶ. 1604ರ ಪವಿತ್ರ ಕುರಾನ್ನ ಚಿನ್ನ ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಬರೆದ ಕೆಲವು ಹಸ್ತಪ್ರತಿಗಳು ಅಲ್ಲಿದ್ದು ಗದ್ಯ ಮತ್ತು ಕಾವ್ಯದ ಸಾಹಿತ್ಯ ಕೃತಿಗಳು ಪ್ರೇಮ ಕವಿತೆಗಳು ರಾಜ ಮುದ್ರೆಯೊಂದಿಗೆ ಸನದ್ಗಳು ಮತ್ತು ಫರ್ಮಾನ್ಗಳನ್ನು ಸಂರಕ್ಷಿಸಲಾಗಿದೆ. ಆಗಿನ ಕಾಲದ ಬೃಹತ್ ಹಂಡೆಗಳು ಅಲ್ಲಿವೆ ಉಪ್ಪಿನಕಾಯಿ ಎಣ್ಣೆ ಇತ್ಯಾದಿಗಳನ್ನು ಸಂಗ್ರಹಿಸಲು ಬಳಸುವ ಚೀನೀ ಮಣ್ಣಿನ ಹಂಡೆಗಳಂತೆಯೇ ಇವೆ ಆದಿಲ್ಷಾಹಿ ಅರಸರು ಬಳಸುತ್ತಿದ್ದ ಚೀನಿ (ಪಿಂಗಾಣಿ) ಬಳಕೆಯ ವಸ್ತುಗಳು ಅಲ್ಲಿವೆ. ಆಗಿನ ಕಾಲದ ವಾಶ್ ಬೇಸಿನ್ಗಳು ಹೂವಿನ ಕುಂಡಗಳು ಶ್ರೀಮಂತ ಮಹಿಳೆಯರು ಬಹುಶಃ ಬಳಸುತ್ತಿದ್ದ ಆಭರಣ ಪೆಟ್ಟಿಗೆಗಳು ಎಲೆ ಪೆಟ್ಟಿಗೆಗಳು ಅಲ್ಲಿವೆ. ವಿಶೇಷವಾಗಿ ಆದಿಲ್ಷಾಹಿ ಕಾಲದ ಖಡ್ಗಗಳು ಆಯುಧಗಳು ಪ್ರತಿಯೊಬ್ಬರ ಗಮನ ಸೆಳೆಯತ್ತವೆ ಯುದ್ಧ ವೇಳೆ ಧರಿಸುವ ಇಂದಿನ ಬುಲೆಟ್ ಫ್ರೂಫ್ ಜಾಕೆಟ್ನಂತೆ ಇರುವ ವಿಶಾಲವಾದ ಶಿರಸ್ತ್ರಾಣ ಸಹಿತ ಯುದ್ಧ ಉಡುಗೆಗಳು ಅಲ್ಲಿವೆ ಖಡ್ಗ ಭರ್ಚಿ ಮೊದಲಾದ ಆಯುಧಗಳನ್ನು ನೋಡಿಯೇ ಆನಂದಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.