ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಜನರಿಲ್ಲದ ಪುನರ್ವಸತಿ ಕೇಂದ್ರಗಳು!

ತಾರಾಪುರ, ತಾವರಖೇಡ ಗ್ರಾಮಗಳ ಸ್ಥಳಾಂತರ 
Published 30 ಮೇ 2023, 23:30 IST
Last Updated 30 ಮೇ 2023, 23:30 IST
ಅಕ್ಷರ ಗಾತ್ರ

ಆಲಮೇಲ: ಕಡಣಿ ಹಾಗೂ ಹೊಸ ತಾರಾಪುರ ಸಮೀಪ ನಿರ್ಮಾಣವಾದ ಪುನರ್ವಸತಿ ಕೇಂದ್ರಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.

ಹೌದು... ತಾಲ್ಲೂಕಿನ ತಾವರಖೇಡ ಹಾಗೂ ತಾರಾಪುರ ಗ್ರಾಮಗಳು ಭೀಮಾ ಹಿನ್ನಿರಿನಿಂದ ಸಂಪೂರ್ಣ ಮುಳುಗಡೆ ಆಗುವುದರಿಂದ ಈ ಎರಡೂ ಗ್ರಾಮಗಳ ಸ್ಥಳಾಂತರ ಪ್ರಕ್ರಿಯೆ ಒಂದೂವರೆ ದಶಕಗಳ ಕಾಲ ಸುದೀರ್ಘ ಪ್ರಯತ್ನದಲ್ಲಿತ್ತು. ಇತ್ತೀಚೆಗೆ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯ ಸರ್ಕಾರ ಮಾಡಿದೆಯಾದರೂ ಅಲ್ಲಿಗೆ ಬಂದು ನೆಲೆಸುವ ಮನಸ್ಸು ಮಾತ್ರ ಈ ಎರಡೂ ಗ್ರಾಮಗಳ ಜನರು ಮಾಡುತ್ತಿಲ್ಲ. ಪ್ರತಿವರ್ಷ ಭೀಮೆ ಉಕ್ಕಿ ಬಂದಾಗ ಈ ಗ್ರಾಮಗಳಿಗೆ ನೀರು ಸುತ್ತುವರೆದು ಜನರನ್ನು ಹೈರಾಣು ಮಾಡುತ್ತದೆ.

ತಾವರಖೇಡ ಹಾಗೂ ತಾರಾಪುರ ಸ್ಥಳಾಂತರಕ್ಕಾಗಿ ಕಡಣಿ ಹಾಗೂ ಹೊಸ ತಾರಾಪುರ ಸಮೀಪ ನವ ಗ್ರಾಮಗಳ ಕಾಮಗಾರಿ ಸಂಪೂರ್ಣ ಮುಗಿದು ಹಲವು ವರ್ಷಗಳೇ ಸಂದವು. ಎರಡೂ ಗ್ರಾಮಗಳ 800ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿಗೆ ಸ್ಥಳಾಂತರ ಆಗಬೇಕಿದೆ ಎನ್ನುತ್ತಾರೆ ನೀರಾವರಿ ಇಲಾಖೆಯ ಅಧಿಕಾರಿಗಳು.

ನವ ಗ್ರಾಮದಲ್ಲಿ ಒಂದು ಸುತ್ತು ಹಾಕಿದರೆ ಅಲ್ಲಿ ಮೂಲಸೌಲಭ್ಯಗಳು ಕಲ್ಪಿಸಿರುವ ಕಾರ್ಯ ಕಂಡುಬರುತ್ತವೆ. ದೇವಸ್ಥಾನ, ಶಾಲೆ, ಅಂಗನವಾಡಿ, ಸಮುದಾಯ ಭವನಗಳು ಸೇರಿದಂತೆ ಎಲ್ಲ ಜನಾಂಗಕ್ಕೂ ಸಾಮೂಹಿಕ ಅವಶ್ಯಕತೆಯಿರುವ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ತಾವರಖೇಡಕ್ಕೆ ಕಡಣಿ ಹತ್ತಿರ ಜಾಗ ಖರೀದಿಸಿ ಅಲ್ಲಿ ಮನೆಗಳ ನಿರ್ಮಾಣದ ಎಲ್ಲ ಕಾಮಗಾರಿಗಳನ್ನು ಮಾಡಲಾಗಿದೆ. ಇಲ್ಲಿಗೆ ಜನರು ಸ್ಥಳಾಂತರವಾಗಬೇಕಿದೆ. ಈ ಬಡಾವಣೆಗೆ ಮೂಲಸೌಲಭ್ಯಗಳು ನೀಡಲಾಗಿದೆ. ಉತ್ತಮ ಗುಣಮಟ್ಟದ ರಸ್ತೆಯೂ ನಿರ್ಮಾಣವಾಗಿದೆ. ಅದು ಬಳಕೆಯಿಲ್ಲದೆ ಉಪಯೋಗಕ್ಕೆ ಬಾರದ್ದಾಗಿದೆ. ಮುಖ್ಯವಾಗಿ ಇಲ್ಲಿ ಮತ್ತೇ ರಸ್ತೆ, ಚರಂಡಿ ಹೊಸದಾಗಿ ನಿರ್ಮಿಸಬೇಕಿದೆ, ಇದೇ ಪರಿಸ್ಥಿತಿಯು ತಾರಾಪುರ ಪುನರ್ವಸತಿ ಕೇಂದ್ರದ್ದಾಗಿದೆ ಎಂದು ಕಡಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾವಿತ್ರಿ ನಾಟೀಕಾರ ತಿಳಿಸುತ್ತಾರೆ.

ದೇವಾಲಯವಿದೆ ದೇವರ ಮೂರ್ತಿಯಿಲ್ಲ!. ಕಟ್ಟಡ ಕೆಲಸ ಮುಗಿದು ಐದು ವರ್ಷ ಕಳೆದರೂ ಜನವಸತಿಯಿಲ್ಲ
ದೇವಾಲಯವಿದೆ ದೇವರ ಮೂರ್ತಿಯಿಲ್ಲ!. ಕಟ್ಟಡ ಕೆಲಸ ಮುಗಿದು ಐದು ವರ್ಷ ಕಳೆದರೂ ಜನವಸತಿಯಿಲ್ಲ

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಅವರು ಎಲ್ಲಾ ಫಲಾನಿಭವಿಗಳಿಗೆ ನಿವೇಶನ ಪತ್ರ ನೀಡಿದ್ದಾರೆ. ಆದಷ್ಟು ಬೇಗ ಪುನರ್ವಸತಿ ಕೇಂದ್ರಕ್ಕೆ ಬರಬೇಕಿದೆ. -ಸುಧೀರ ಭೀಮಾ ಏತ ನೀರಾವರಿ ನಿಗಮದ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT