ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಜಿಲ್ಲೆಯಲ್ಲಿ ಗ್ರಾಮೀಣರ ಮೇಲುಗೈ

Last Updated 14 ಮೇ 2017, 8:53 IST
ಅಕ್ಷರ ಗಾತ್ರ

ವಿಜಯಪುರ: ಫಲಿತಾಂಶ ಹೆಚ್ಚಳಗೊಳ್ಳದಿದ್ದರೂ, ರ್‌್ಯಾಂಕಿಂಗ್‌ನಲ್ಲಿ 11 ಸ್ಥಾನ ಮೇಲಕ್ಕೆ ಜಿಗಿದ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ, ಈ ಬಾರಿಯೂ ಗ್ರಾಮೀಣರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲೂ ಬಾಲಕಿಯರೇ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿ ಸಾಧನೆಗೈದಿರುವುದು ವಿಶೇಷ.

ಮುದ್ದೇಬಿಹಾಳ ಶೈಕ್ಷಣಿಕ ವಲಯದ ಮೈಲೇಶ್ವರ ಬ್ರಿಲಿಯಂಟ್‌ ಶಾಲೆಯ ವಿದ್ಯಾರ್ಥಿ ಗಿರೀಶ ಎಸ್‌.ಗಾಣಿಗೇರ 621 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಮೊದಲಿಗನಾಗಿದ್ದಾನೆ. ವಿಜಯಪುರ ನಗರದ ಶಮ್ಸ್‌ ಪ್ರೌಢಶಾಲೆಯ ಶಿಫಾಸಾನಿಯಾ ಎಸ್.ಬಡಿಗೇರ 620 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಎಕ್ಸಲೆಂಟ್‌ ಶಾಲೆಯ ಸಾಕ್ಷಿ ಎಸ್‌.ಬಿರಾದಾರ, ಸೇಂಟ್‌ ಜೋಸೆಫ್‌ ಶಾಲೆಯ ಅನುಷಾ ಬಿ ಮೇಟಿ ತಲಾ 619 ಅಂಕ ಗಳಿಸುವ ಮೂಲಕ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಎಸ್. ಬಿರಾದಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜಿಲ್ಲೆಯ ಏಳು ಶೈಕ್ಷಣಿಕ ವಲಯದಿಂದ ಒಟ್ಟು 28660 (ಗಂಡು- 15756, ಹೆಣ್ಣು- 12904) ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 20701 (ಗಂಡು- 10856, ಹೆಣ್ಣು- 9845 ) ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ 72.23% ಫಲಿತಾಂಶ ದಾಖಲಿಸಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಕೊಂಚ ಏರಿಕೆಯಾಗಿದೆ. ಶೇಕಡಾವಾರು ಪ್ರಮಾಣದಲ್ಲಿ ವಿದ್ಯಾರ್ಥಿಗಳು 68.90%, ವಿದ್ಯಾರ್ಥಿನಿಯರು 76.29% ರಷ್ಟು ತೇರ್ಗಡೆಯಾಗಿದ್ದಾರೆ ಎಂದು ತಿಳಿಸಿದರು.

ಶೈಕ್ಷಣಿಕ ಸಕಲ ಸೌಲಭ್ಯ ಹೊಂದಿದ್ದರೂ ನಗರ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶ ಗ್ರಾಮೀಣರ ಫಲಿತಾಂಶಕ್ಕಿಂತ ಕಡಿಮೆಯಿದೆ. ಪರೀಕ್ಷೆಗೆ ಹಾಜರಾದ ನಗರ ಪ್ರದೇಶದ 8491 ವಿದ್ಯಾರ್ಥಿಗಳ ಪೈಕಿ 5845 ವಿದ್ಯಾರ್ಥಿಗಳು (68.84%) ತೇರ್ಗಡೆಯಾಗಿದ್ದಾರೆ.

ಗ್ರಾಮೀಣ ಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 20169 ವಿದ್ಯಾರ್ಥಿಗಳ ಪೈಕಿ 14856 (73.66%) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣರ ಸಾಧನೆಯೇ ಮೇಲುಗೈ ಪಡೆದಿದೆ ಎಂದು ಹೇಳಿದರು.

ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳ ಫಲಿತಾಂಶಕ್ಕಿಂತ ಅನುದಾನ ರಹಿತ ಪ್ರೌಢಶಾಲೆಗಳ ಫಲಿತಾಂಶವೇ ಹೆಚ್ಚಿದೆ. ಸಿಂದಗಿ ಶೈಕ್ಷಣಿಕ ವಲಯದ ಫಲಿತಾಂಶ 66.70% ದಾಖಲಾಗಿದ್ದು, ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ವಲಯವಾಗಿದೆ. 80.36% ದಾಖಲಿಸಿರುವ ಮುದ್ದೇಬಿಹಾಳ ವಲಯ ಅತ್ಯಂತ ಹೆಚ್ಚು ಫಲಿತಾಂಶ ಪಡೆದ ಶೈಕ್ಷಣಿಕ ವಲಯವಾಗಿದೆ.

ಅಂಕಿ–ಅಂಶ

73% ಸರ್ಕಾರಿ ಪ್ರೌಢಶಾಲೆಗಳ ಫಲಿತಾಂಶ

66% ಅನುದಾನಿತ ಪ್ರೌಢಶಾಲೆಗಳ ಫಲಿತಾಂಶ

80% ಅನುದಾನ ರಹಿತ ಪ್ರೌಢಶಾಲೆಗಳ ಫಲಿತಾಂಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT