ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಗೂಳಿ: ಕೃಷಿ ಕ್ಷೇತ್ರ ನಿರ್ಲಕ್ಷಿಸಿದರೆ ತೊಂದರೆ

Last Updated 29 ಏಪ್ರಿಲ್ 2017, 6:57 IST
ಅಕ್ಷರ ಗಾತ್ರ

ಮನಗೂಳಿ (ಬಸವನಬಾಗೇವಾಡಿ):  ಭಾರತವು ಸನಾತನ ಧಾರ್ಮಿಕ ಪರಂಪರೆ ಹೊಂದಿದೆ. ವೀರಶೈವ ಧರ್ಮ ವ್ಯಾಪಕವಾಗಿದೆ. ಇದು ಸಮನ್ವತೆಯನ್ನು ಬೋಧಿಸಿದ ವಿಶಿಷ್ಠ ಧರ್ಮವಾಗಿದೆ ಎಂದು ಉಜ್ಜಯಿನಿ ಪೀಠದ  ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಬಸವೇಶ್ವರ ದೇವಾಲಯ ಮುಂಭಾಗ ಸೋಮವಾರ ಸಂಜೆ ಪಟ್ಟೀ ಕಂಥಿ ಹಿರೇಮಠದ ಡಾ. ಮಹಾಂತ ಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಪಟ್ಟಾಧಿಕಾರದ ರಜತಮಹೋತ್ಸವ  ಹಾಗೂ ಲಿಂ. ಬಿ.ಎಸ್. ಪಾಟೀಲ ಅವರ 85 ನೇ ಜನ್ಮ ದಿನಾಚರಣೆ ಕಾರ್ಯ ಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧರ್ಮ, -ಗುರು, -ದೇವರು ಎಂಬ ಮೂರು ಅದ್ಭುತ ತ್ರಿವೇಣಿ ಸಂಗಮದ ಮೇಲೆ ಜಗತ್ತು ನಿಂತಿದೆ. ದೇಶಕ್ಕೆ ಅನ್ನ  ಕೊಡುವ ಕೃಷಿ ವಿದ್ಯೆಗೆ ನಿಷ್ಕಾಳಜಿ ವಹಿ ಸಲಾಗುತ್ತಿದೆ. ಈ ಕ್ಷೇತ್ರವನ್ನು ನಿರ್ಲಕ್ಷಿಸಿ ದರೆ ಮುಂದಿನ ದಿನಗಳಲ್ಲಿ ಆಹಾರದ ಕೊರತೆ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೃಷಿ ವಿದ್ಯೆಯನ್ನು ಒಂದನೇ ತರಗತಿಯಿಂದಲೇ ಪಠ್ಯದಲ್ಲಿ ಅಳವಡಿ ಸುವ ಮೂಲಕ ಕೃಷಿಯು ಆಕರ್ಷ ಣಿಯವಾಗುವಂತೆ ಮಾಡಬೇಕಿದೆ ಎಂದು ಹೇಳಿದರು.

ದೇಶ ಕಾಯುವ ಸೈನಿಕರ ಸೇವೆಯ ಸ್ಮರಣೀಯವಾಗಿದೆ. ತಾಯಿಂದಿರು ತಮ್ಮ ಮಕ್ಕಳನ್ನು ದೇಶ ಸೇವೆಗಾಗಿ ಸೈನಿಕ ಹುದ್ದೆಗೆ ಕಳುಹಿಸುವಂತಾಗಬೇಕು. ಇಲ್ಲಿನ ಶ್ರೀಮಠದ ಶ್ರೀಗಳು ತಮ್ಮ ಪಟ್ಟಾಧಿಕಾರದ ರಜತ ಮಹೋತ್ಸವದ ಅಂಗವಾಗಿ ವೈಶಿಷ್ಟ ಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿ ರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಬಸನಗೌಡ ಪಾಟೀಲ (ಯತ್ನಾಳ) ಮಾತನಾಡಿ, ಇಂದು ರೈತರ ಜೀವನ ಸಂಕಷ್ಟದಲ್ಲಿದೆ. ಅವರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತಾಗಬೇಕು. ತೊಗರಿ ಖರೀದಿ ಕೇಂದ್ರವನ್ನು ಇನ್ನಷ್ಟು ದಿನ ಮುಂದುವರಿಸಲು ಕೃಷಿ ಸಚಿವ ರೊಂದಿಗೆ ನಾನು ಮಾತನಾಡಿರುವುದಾ ಹೇಳಿದ ಅವರು, ಕೃಷಿ, ಗೋಮಾತೆ, ಗಿಡಗಳ ಸಂರಕ್ಷಣೆಯನ್ನು ಮರೆತರೆ ನಾವು ಶಾಶ್ವತವಾಗಿ ಬರಗಾಲ ಎದುರಿಸಬೇಕಾಗುತ್ತದೆ ಎಂದರು.

ಶಿವಗಂಗಾಕ್ಷೇತ್ರದ ಮಲಯಶಾಂತ ಮುನಿ ಶಿವಾಚಾರ್ಯ ಸ್ವಾಮೀಜಿ, ಸಿಂದಗಿಯ ಪ್ರಭುಸಾರಂಗದೇವ ಶಿವಾ ಚಾರ್ಯ ಸ್ವಾಮೀಜಿ ಮಾತನಾಡಿದರು.
ಡಾ. ಮಹಾಂತಲಿಂಗ ಶಿವಾ ಚಾರ್ಯರು, ಅಭಿನವ ಸಂಗನಬಸವ ಸ್ವಾಮೀಜಿ, ಶ್ರೀಕಂಠಚಾರ್ಯ ಸ್ವಾಮೀಜಿ, ಭೃಂಗೀಶ್ವರ ಸ್ವಾಮೀಜಿ, ಅಪ್ಪುಗೌಡ ಪಾಟೀಲ, ಶಿವನಗೌಡ ಬಿರಾದಾರ, ರಮೇಶ ಸೂಳಿಭಾವಿ, ಅಣ್ಣಾಸಾಹೇಬ ಪಾಟೀಲ, ರಾಜುಗೌಡ ಪಾಟೀಲ, ಎಸ್.ಜಿ.ಹಾವಣ್ಣನವರ, ಸಂಗನಗೌಡ ರಾಯ ಗೊಂಡ, ಹೆಚ್.ಬಿ. ಶಿರೋಳ, ಚಿದಾ ನಂದ ಇಟ್ಟಂಗಿ, ಆರ್.ಆರ್. ಕಲ್ಲೂರ ಇತರರು ಇದ್ದರು.

ಅಪ್ಪುಗೌಡ ಪಾಟೀಲ ಸ್ವಾಗತಿಸಿದರು. ಅನ್ನದಾನಿ ಸ್ವಾಮೀಜಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ 30 ಸೈನಿಕರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಉಜ್ಜಯಿನಿ ಪೀಠದ ಶ್ರೀಗಳ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT