ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ ತಾಲ್ಲೂಕು: 31 ಗ್ರಾಮ ಪಂಚಾಯಿತಿ ಮೀಸಲು ಪಟ್ಟಿ

Last Updated 5 ಅಕ್ಟೋಬರ್ 2012, 7:35 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ತಾಲ್ಲೂಕಿನ 31 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಲಾಟರಿ ಎತ್ತುವ ಮೂಲಕ  ಪ್ರಕಟಿಸಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತ ಸದಸ್ಯರ ಸಮ್ಮುಖದಲ್ಲಿ ಮೀಸಲಾತಿ ಪಟ್ಟಿ ಪ್ರಕಟಣೆ  ನಡೆಯಿತು.

ತಾಲ್ಲೂಕಿನ ಇಂಗಳಗೇರಿ ಮತ್ತು ಬಿದರಕುಂದಿ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಯಿತು. ಭಂಟನೂರ, ಹಿರೂರ, ಮಡಿಕೇಶ್ವರ, ಕಾಳಗಿ, ಢವಳಗಿ, ಮೂಕಿಹಾಳ, ನಾಗಬೇನಾಳ, ಹಿರೇಮುರಾಳ, ಯರಝರಿ, ರಕ್ಕಸಗಿ, ಕೋಳುರ ಮತ್ತು ತಂಗಡಗಿ ಪಂಚಾಯಿತಿಗಳ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಿರಿಸಲಾಯಿತು.

ಕೊಣ್ಣೂರ, ಕೊಡಗಾನೂರ, ತುಂಬಗಿ, ಬಾವೂರ, ಮಿಣಜಗಿ, ಬಿ.ಸಾಲವಾಡಗಿ, ರೂಢಗಿ, ಕುಂಟೋಜಿ, ಕವಡಿಮಟ್ಟಿ, ನಾಲತ ವಾಡ, ಯಲಗೂರ, ಹುಲ್ಲೂರ ಮತ್ತು ಬಿಜ್ಜೂರ ಪಂಚಾಯಿತಿಗಳ ಉಪಾಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾದವು. ಬಸರಕೋಡ, ಆಲೂರ ಮತ್ತು ಹಡಲಗೇರಿ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಪುರುಷರಿಗೆ ಮೀಸಲಾದವು.

30 ಗ್ರಾಪಂ ಗಳಿಗೆ 2010 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಆದರೆ ಇಂಗಳಗೇರಿ ಗ್ರಾಪಂಗೆ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಚುನಾವಣೆ ನಡೆದಿರಲಿಲ್ಲ.

ಕೆಲ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಎರಡನೇ ಅವಧಿಗೂ ಪುನರಾವರ್ತನೆಯಾಗಿದ್ದರಿಂದ ಆಯಾ ಪಂಚಾಯಿತಿಗಳ ಸದಸ್ಯರು ಆಕ್ಷೇಪಣೆ ಎತ್ತಿ ಬದಲಾಯಿಸುವಂತೆ ಮನವಿ ಮಾಡಿದರು.

ಉಪ ವಿಭಾಗಾಧಿಕಾರಿ ಡಾ.ಎಚ್. ಬಿ. ಬೂದೆಪ್ಪ, ತಹಶೀಲ್ದಾರ ಸೋಮಲಿಂಗ ಗೆಣ್ಣೂರ, ತಾಳಿಕೋಟೆ ವಿಶೇಷ ತಹಶೀಲ್ದಾರ ಎಂ.ಎ.ಎಸ್. ಬಾಗವಾನ, ಜಿಲ್ಲಾಧಿಕಾರಿಗಳ ಸ್ಥಾನಿಕ ಸಹಾಯಕ ಚೋರಗಸ್ತಿ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಕ್ಕಮಹಾದೇವಿ ಹೊಕ್ರಾಣಿ ಮೊದಲಾದವರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT