ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗೀರಥ ಮಹರ್ಷಿ ಭವನಕ್ಕೆ ₹ 25 ಲಕ್ಷ: ಶಾಸಕ ರಾಜೂಗೌಡ ಆಶ್ವಾಸನೆ

ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ
Last Updated 8 ನವೆಂಬರ್ 2020, 15:47 IST
ಅಕ್ಷರ ಗಾತ್ರ

ಸುರಪುರ: ‘ಸುರಪುರ ಅಥವಾ ಹುಣಸಗಿ ತಾಲ್ಲೂಕಿನಲ್ಲಿ ಭಗೀರಥ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ನೀಡಿ ₹ 25 ಲಕ್ಷ ಅನುದಾನ ಒದಗಿಸಲಾಗುವುದು’ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ರಾಜೂಗೌಡ ಭರವಸೆ ನೀಡಿದರು.

ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಮಹರ್ಷಿ ಭಗೀರಥ ಉಪ್ಪಾರ ಸಮುದಾಯದ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಸಾಧನೆ ಮಾಡಿದ ಸಾಧಕರಿಗೆ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉಪ್ಪಾರ ಸಮಾಜಕ್ಕೆ ನನ್ನ ಆಡಳಿತಾವಧಿಯಲ್ಲಿ ಸಾಕಷ್ಟು ಪ್ರಾಶಸ್ತ್ಯ ನೀಡಿದ್ದೇನೆ. ಸ್ಥಳೀಯವಾಗಿ ಖಾಲಿಯಿರುವ ಬೋರ್ಡ್‍ಗಳಲ್ಲಿ ಉಪ್ಪಾರ ಸಮಾಜದವರಿಗೆ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಲಾಗುವುದು’ ಎಂದರು.

‘ಉಪ್ಪಾರ ಸಮಾಜದ ವಿದ್ಯಾರ್ಥಿಗಳು ಗಂಗೆಯನ್ನು ಭೂಮಿಗೆ ತಂದ ಮಹಾನ್ ಗುರು ಭಗೀರಥ ಮಹರ್ಷಿಯ ಸಾಧನೆ ಪ್ರೇರಕವಾಗಿಟ್ಟುಕೊಳ್ಳಬೇಕು’ ಎಂದು ಹೇಳಿದರು.

‘ಸತ್ಕಾರಗಳಿಂದ ಬೇರೆಯವರಲ್ಲೂ ಹುಮ್ಮಸ್ಸು ಮೂಡಿ ಪ್ರತಿಯೊಬ್ಬರಲ್ಲೂ ಸಾಧನೆ ಮಾಡುವತ್ತ ಪ್ರೇರೇಪಿಸುತ್ತದೆ. ಉತ್ತಮ ಸಾಧನೆ ಮಾಡಿದಾಗ ಸನ್ಮಾನ ಮಾಡಿ ಸಹಕಾರ ನೀಡುವುದು ಉತ್ತಮ ಬೆಳವಣಿಗೆ’ ಎಂದರು.

ದೇವದುರ್ಗ ಮಲದಕಲ್ ನಿಜಾನಂದ ಯೋಗಾಶ್ರಮದ ರಾಜಗುರು ಗುರುಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

ಚಿಕ್ಕನಹಳ್ಳಿ ಯಲ್ಲಮ್ಮ ದೇವಸ್ಥಾನದ ಅರ್ಚಕ ಸಂಜೀವಪ್ಪ ಮುತ್ಯಾ, ರಾಮಣ್ಣ ಮುತ್ಯಾ, ಬಸಣ್ಣ ಶರಣರು ವಾಗಣಗೇರಾ, ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಭೀಮಣ್ಣ ವೈ. ಕಟ್ಟಿಮನಿ ಚಿಕ್ಕನಹಳ್ಳಿ, ಉಪಾಧ್ಯಕ್ಷ ಗೋವಿಂದರಾಜ ಬಿ ಶಹಾಪುರಕರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮೇಲಪ್ಪ ಗುಳಗಿ, ಜಿಲ್ಲಾ ಪಂಚಾಯಿತಿ ಸದಸ್ಯ ದೊಡ್ಡ ದೇಸಾಯಿ, ಪ್ರಥಮ ದರ್ಜೆ ಗುತ್ತಿಗೆದಾರರಾದ ಶ್ರೀನಿವಾಸ ಎಚ್. ಅಮ್ಮಾಪುರ, ಡಾ. ಸತ್ಯನಾರಾಯಣ ಆಲದಾರತಿ, ಮಲ್ಲಿಕಾರ್ಜುನ ಕಟ್ಟಿಮನಿ, ಗೋಪಣ್ಣ ದೊಡ್ಡಮನಿ, ಮೌನೇಶ ಎಸ್‍ಡಿ ಗೋನಾಲ, ರಾಮಚಂದ್ರ ಪೂಜಾರಿ ದೇವಿಕೇರಿ, ಧರಿಯಪ್ಪ ಬೂದಿಹಾಳ, ದೇವೀಂದ್ರ ಕುಮಾರ ಗೋಗಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT