ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಯಾದಗಿರಿ ಜಿಲ್ಲೆಯಲ್ಲಿ ₹27 ಕೋಟಿ ಹಾನಿ

164 ಮನೆಗಳಿಗೆ ಭಾಗಶಃ ಹಾನಿ, ₹32.80 ಲಕ್ಷ ನಷ್ಟ ಅಂದಾಜು: ಡಾ.ರಾಗಪ್ರಿಯಾ
Last Updated 22 ಸೆಪ್ಟೆಂಬರ್ 2021, 16:43 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಸೆಪ್ಟೆಂಬರ್ 20ರಿಂದ 22ರವರೆಗೆ ಸುರಿದ ಭಾರಿ ಮಳೆಗೆ ಅಂದಾಜು ₹27.10 ಕೋಟಿ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್ ತಿಳಿಸಿದ್ದಾರೆ.

164 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಹುಣಸಗಿಯಲ್ಲಿ 107, ಸುರಪುರ 8, ವಡಗೇರಾ 19, ಶಹಾಪುರ 27, ಯಾದಗಿರಿ ತಾಲ್ಲೂಕಿನಲ್ಲಿ 3 ಮನೆಗಳು ಸೇರಿ ಒಟ್ಟು ₹32.80 ಲಕ್ಷ ನಷ್ಟ ಅಂದಾಜಿಸಲಾಗಿದೆ. ಇದಲ್ಲದೇ 67 ಮನೆಗಳಿಗೆ ನೀರು ನುಗ್ಗಿದೆ ಎಂದರು.

ಕೃಷಿ ಬೆಳೆ ಹಾನಿ: ಜಿಲ್ಲೆಯಲ್ಲಿ 482 ಹೆಕ್ಟೇರ್ ಕೃಷಿ ಭೂಮಿ ನಷ್ಟವಾಗಿದ್ದು, ಇದರ ಅಂದಾಜು ₹4.33 ಕೋಟಿಯಷ್ಟಿದೆ. ತೋಟಗಾರಿಕೆ ಬೆಳೆ ಹಾನಿ 5.60 ಹೆಕ್ಟೇರ್‌ ಇದ್ದು, ನಷ್ಟದ ಅಂದಾಜು ₹4.78 ಲಕ್ಷ ಆಗಲಿದೆ. 59.95 ಕಿ.ಮೀ ಉದ್ದ ರಸ್ತೆ ಹಾನಿಯಾಗಿ, ₹19.51 ಕೋಟಿ ನಷ್ಟವಾಗಿದೆ. 8 ಸೇತುವೆಗಳಿಗೆ ಹಾನಿಯಾಗಿದ್ದು, ಅದು ₹2.70 ಕೋಟಿಯಷ್ಟಿದೆ. 10 ವಿದ್ಯುತ್ ಪರಿವರ್ತಕ ಹಾನಿಯ ಮೊತ್ತ ₹12 ಲಕ್ಷವಾಗಿದ್ದು, 69 ವಿದ್ಯುತ್ ಕಂಬಗಳು ಕುಸಿದಿವೆ. ಇದರ ಅಂದಾಜಿತ ಮೊತ್ತ ₹4.14 ಕೋಟಿಯಷ್ಟ ಇದೆ. 3 ಜಾನುವಾರು ಮೃತಪಟ್ಟು, ವಾರಸುದಾರರಿಗೆ ₹1.12 ಲಕ್ಷ ನಷ್ಟವಾಗಿದೆ.

ಜಿಲ್ಲೆಯಲ್ಲಿ ಮಳೆ, ಪ್ರವಾಹ ಮತ್ತು ನೈಸರ್ಗಿಕ ವಿಕೋಪದ ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 08473 253800ಗೆ ಕರೆ ಮಾಡಲು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT