ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹4.59 ಮೌಲ್ಯದ ಹಸಿ ಗಾಂಜಾ ಗಿಡ ವಶ

ಶಹಾಪುರ: ಬೆನಕನಹಳ್ಳಿ, ಬೀರನೂರದಲ್ಲಿ ಅಕ್ರಮ ಗಾಂಜಾ ಪತ್ತೆ 
Last Updated 8 ನವೆಂಬರ್ 2019, 15:34 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ಬೆನಕನಳ್ಳಿ ಹಾಗೂ ಬೀರನೂರ ಗ್ರಾಮದ ಜಮೀನಿನ ಹತ್ತಿ ಬೆಳೆಯಲ್ಲಿ ಅಕ್ರಮವಾಗಿ ಗಾಂಜಾ ಗಿಡವನ್ನು ಬೆಳೆದಿದ್ದು ಶುಕ್ರವಾರ ಎರಡು ಕಡೆ ಪ್ರತ್ಯೇಕವಾಗಿ ಪೊಲೀಸರು ದಾಳಿ ಮಾಡಿ ₹4.59 ಲಕ್ಷ ಮೌಲ್ಯದ ಹಸಿ ಗಾಂಜಾ ಗಿಡವನ್ನು ವಶಪಡಿಸಿಕೊಂಡಿದ್ದು, ತಾಲ್ಲೂಕಿನ ಪರಸಾಪುರ ಗ್ರಾಮದ ಹನುಮಯ್ಯ ಮರಡಿ ಎನ್ನುವ ಆರೋಪಿಯನ್ನು ಬಂಧಿಸಿದ್ದಾರೆ.

ತಾಲ್ಲೂಕಿನ ಬಿರನೂರ ಗ್ರಾಮದ ಸೀಮಾಂತರದಲ್ಲಿ ಪರಸಾಪುರ ಗ್ರಾಮದ ಹನುಮಯ್ಯ ಮರಡಿ ಹತ್ತಿ ಬೆಳೆಯಲ್ಲಿ ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಗಿಡಗಳನ್ನು ಬೆಳೆಸಿದ್ದಾನೆ. ಪೊಲೀಸರು ದಾಳಿ ಮಾಡಿ 54 ಹಸಿ ಗಾಂಜಾ ಗಿಡಗಳನ್ನು ಸುಮಾರು81 ಕೆ.ಜಿ. ಅದರ ಮೌಲ್ಯ ₹2.43 ಲಕ್ಷ ಆಗಿದ್ದು ಅದನ್ನು ಜಪ್ತಿ ಮಾಡಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದರು.

ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ರೈಲ್ವೆ ಟ್ರ್ಯಾಕ್ ಕಾಮಗಾರಿ ನಡೆದ ಹತ್ತಿರ ಹಳ್ಳದ ಪಕ್ಕದಲ್ಲಿ ಮಲ್ಲಪ್ಪ ದೊಡ್ಮನಿ ಅವರ ಜಮೀನು ಲೀಜ್ ಪಡೆದು ಹುಲಗಪ್ಪ ದೊಡ್ಮನಿ ಅಕ್ರಮವಾಗಿ 45 ಹಸಿ ಗಾಂಜಾ ಗಿಡಗಳನ್ನು ಬೆಳೆಸಿದ್ದರು. ಅವುಗಳ ತೂಕ 72 ಕೆ.ಜಿ. ಅದರ ಮೌಲ್ಯ ₹2.16 ಲಕ್ಷ ಆಗಿದೆ. ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ನಿರ್ದೇಶನದಲ್ಲಿ ಹಾಗೂ ಡಿವೈಎಸ್ಪಿ ಶಿವನಗೌಡ ಪಾಟೀಲ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ ಎಂದು ಶಹಾಪುರ ಠಾಣೆಯ ಪಿ.ಐ ಹನುಮರಡ್ಡೆಪ್ಪ ತಿಳಿಸಿದ್ದಾರೆ.
ಶಹಾಪುರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ಎಚ್ಚೆತ್ತುಕೊಂಡ ಪೊಲೀಸರು:ಎರಡು ದಿನ ಹಿಂದೆ ಹುಬ್ಬಳ್ಳಿಗೆ ಅಕ್ರಮವಾಗಿ ಗಾಂಜಾವನ್ನು ಶಹಾಪುರದಿಂದ ಕಾರಿನಲ್ಲಿ ಸಾಗಾಣಿಕೆ ಮಾಡುತ್ತಿರುವಾಗ ಮೂವರು ಆರೋಪಿಗಳನ್ನು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT