ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರದಲ್ಲಿ ‘ನಾಯಕ’ರದ್ದೇ ಪಾರುಪತ್ಯೆ

72 ವರ್ಷ ಸುರಪುರವನ್ನು ಆಳಿದ 6 ಜನ ಶಾಸಕರು
ಅಶೋಕ ಸಾಲವಾಡಗಿ
Published 25 ಏಪ್ರಿಲ್ 2024, 6:03 IST
Last Updated 25 ಏಪ್ರಿಲ್ 2024, 6:03 IST
ಅಕ್ಷರ ಗಾತ್ರ

ಸುರಪುರ: 1952 ರಲ್ಲಿ ನಡೆದ ಮೊದಲ ಚುನಾವಣೆ ಹೊರತುಪಡಿಸಿ ಸುರಪುರ ವಿಧಾನಸಭಾ ಕ್ಷೇತ್ರವನ್ನು ‘ನಾಯಕ’ ಜನಾಂಗದವರೇ ಆಳಿದ್ದಾರೆ. 2008 ರಲ್ಲಿ ಎಸ್‍ಟಿ ಮೀಸಲಾತಿಗೆ ಕ್ಷೇತ್ರ ಒಳಪಡುವುದಕ್ಕಿಂತ ಮುಂಚೆಯೂ ಬೇರೆ ಸಮುದಾಯದ ವ್ಯಕ್ತಿಗಳು ಶಾಸಕರಾಗಿ ಆಯ್ಕೆಯಾಗಲು ಸಾಧ್ಯವಾಗಿಲ್ಲ.

ಪ್ರಜಾತಂತ್ರದ ಮತದಾನ ವ್ಯವಸ್ಥೆ ಅಸ್ತಿತ್ವಕ್ಕೆ ಬಂದು 72 ವರ್ಷಗಳು ಗತಿಸಿವೆ. ಮೊದಲ 5 ವರ್ಷ ಯಾದಗಿರಿ ತಾಲ್ಲೂಕಿನ ಕುರುಬ ಜನಾಂಗದ ಕೋಳೂರು ಮಲ್ಲಪ್ಪ ಶಾಸಕರಾಗಿದ್ದರು. ಉಳಿದ 67 ವರ್ಷ ‘ನಾಯಕ (ವಾಲ್ಮೀಕಿ)’ ಜನಾಂಗದ ಐವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕ್ಷೇತ್ರದಲ್ಲಿ ವಾಲ್ಮೀಕಿ, ಕುರುಬ, ಲಿಂಗಾಯತ, ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಮತದಾರ ವಾಲ್ಮೀಕಿ ಜನಾಂಗ ಹೊರತುಪಡಿಸಿ ಉಳಿದವರಿಗೆ ಮಣೆ ಹಾಕಿಲ್ಲ.

ಆರಂಭದಲ್ಲಿ ಕಾಂಗ್ರೆಸ್ ಮತ್ತು ಸ್ವತಂತ್ರ್ಯ ಪಕ್ಷದ ಅಭ್ಯರ್ಥಿಗಳ ಮಧ್ಯೆ ಸ್ಪರ್ಧೆ ಇರುತ್ತಿತ್ತು. 1983ರಿಂದ ಜನತಾ ಪಕ್ಷ ನಂತರ ಜನತಾದಳದ ಅಭ್ಯರ್ಥಿಗಳು ಕಣದಲ್ಲಿರುತ್ತಿದ್ದರು. ತಲಾ ಒಂದು ಬಾರಿ ಸ್ವತಂತ್ರ ಪಕ್ಷ, ಕೆಸಿಪಿ, ಕನ್ನಡ ನಾಡು ಪಕ್ಷಗಳು ಗೆಲುವು ಸಾಧಿಸಿವೆ. ಬಿಜೆಪಿ ಎರಡು ಬಾರಿ ಗೆದ್ದರೆ ಉಳಿದ 11 ಬಾರಿ ಕಾಂಗ್ರೆಸ್ ಗೆದ್ದು ಬೀಗಿದೆ.

ಹ್ಯಾಟ್ರಿಕ್ ಸಾಧನೆ:

ರಾಜಾ ಪಿಡ್ಡನಾಯಕ ಮತ್ತು ರಾಜಾ ಮದನಗೋಪಾಲನಾಯಕ ಸತತ ಮೂರು ಸಲ ಆರಿಸಿ ಬಂದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ರಾಜಾ ಕುಮಾರ ನಾಯಕ 2 ಬಾರಿ, ರಾಜಾ ವೆಂಕಟಪ್ಪನಾಯಕ 4 ಬಾರಿ, ರಾಜೂಗೌಡ ಮೂರು ಬಾರಿ ಚುನಾಯಿತರಾಗಿದ್ದಾರೆ.
 
ಮೊದಲ ಉಪ ಚುನಾವಣೆ:

ಸುರಪುರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭೆಯ ಉಪ ಚುನಾವಣೆ ನಡೆಯುತ್ತಿದೆ. ಶಾಸಕ ರಾಜಾ ವೆಂಕಟಪ್ಪನಾಯಕ ಆಯ್ಕೆ ಆಗಿ ಒಂದು ವರ್ಷದೊಳಗೆ ಅಕಾಲಿಕ ನಿಧನ ಹೊಂದಿದ್ದರಿಂದ ಉಪ ಚುನಾವಣೆ ನಡೆಯುತ್ತಿದೆ. 1983 ರಲ್ಲಿ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 1985ರಲ್ಲಿ ರಾಜೀನಾಮೆ ನೀಡಿ ವಿಧಾನಸಭೆ ವಿಸರ್ಜನೆ ಮಾಡಿದ್ದರಿಂದ 1985 ರಲ್ಲಿ ಮಧ್ಯಂತರ ಚುನಾವಣೆ ನಡೆದಿತ್ತು. ಉಳಿದಂತೆ ಎಲ್ಲ ಅವಧಿಗಳು ಪೂರ್ಣಗೊಂಡಿವೆ.

ರಾಜಾ ಕುಮಾರನಾಯಕ
ರಾಜಾ ಕುಮಾರನಾಯಕ
ರಾಜಾ ಪಿಡ್ಡನಾಯಕ
ರಾಜಾ ಪಿಡ್ಡನಾಯಕ
ರಾಜಾ ಮದನಗೋಪಾಲನಾಯಕ
ರಾಜಾ ಮದನಗೋಪಾಲನಾಯಕ
ರಾಜಾ ವೆಂಕಟಪ್ಪನಾಯಕ
ರಾಜಾ ವೆಂಕಟಪ್ಪನಾಯಕ
ರಾಜೂಗೌಡ
ರಾಜೂಗೌಡ

ಸುರಪುರದ ಶಾಸಕರ ಪಟ್ಟಿ ವರ್ಷ;ಹೆಸರು;ಪಕ್ಷ 1952;ಕೋಳೂರು ಮಲ್ಲಪ್ಪ;ಕಾಂಗ್ರೆಸ್ 1957;ರಾಜಾ ಕುಮಾರನಾಯಕ;ಕಾಂಗ್ರೆಸ್ 1962;ರಾಜಾ ಪಿಡ್ಡನಾಯಕ;ಸ್ವತಂತ್ರ ಪಕ್ಷ 1967;ರಾಜಾ ಪಿಡ್ಡನಾಯಕ;ಕಾಂಗ್ರೆಸ್ 1972;ರಾಜಾ ಪಿಡ್ಡನಾಯಕ;ಕಾಂಗ್ರೆಸ್ 1978;ರಾಜಾ ಕುಮಾರನಾಯಕ;ಕಾಂಗ್ರೆಸ್ 1983;ರಾಜಾ ಮದನಗೋಪಾಲನಾಯಕ;ಕಾಂಗ್ರೆಸ್ 1985;ರಾಜಾ ಮದನಗೋಪಾಲನಾಯಕ;ಕಾಂಗ್ರೆಸ್ 1989;ರಾಜಾ ಮದನಗೋಪಾಲನಾಯಕ;ಕಾಂಗ್ರೆಸ್ 1994;ರಾಜಾ ವೆಂಕಟಪ್ಪನಾಯಕ;ಕೆಸಿಪಿ 1999;ರಾಜಾ ವೆಂಕಟಪ್ಪನಾಯಕ;ಕಾಂಗ್ರೆಸ್ 2004;ರಾಜೂಗೌಡ;ಕನ್ನಡನಾಡು 2008;ರಾಜೂಗೌಡ;ಬಿಜೆಪಿ 2013;ರಾಜಾ ವೆಂಕಟಪ್ಪನಾಯಕ;ಕಾಂಗ್ರೆಸ್ 2018;ರಾಜೂಗೌಡ;ಬಿಜೆಪಿ 2023;ರಾಜಾ ವೆಂಕಟಪ್ಪನಾಯಕ; ಕಾಂಗ್ರೆಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT