ಗುರುವಾರ , ಜನವರಿ 23, 2020
19 °C

ಕಬ್ಬುತುಂಬಿದ ಲಾರಿ ಮತ್ತು ಗೂಡ್ಸ್ ಆಟೊ ನಡುವೆ ಡಿಕ್ಕಿ:  ಸ್ಥಳದಲ್ಲಿಯೇ 3 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಡಗೇರಾ (ಯಾದಗಿರಿ): ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ ಗೂಡ್ಸ್ ಆಟೊ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ಹಲಗೇರಾ ಗೇಟ್ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ಬಸಪ್ಪ ತಂದೆ ಲಕ್ಷ್ಮಣ ದುಪ್ಪಲ್ಲಿ (36) ಮೃತಪಟ್ಟವರು. ಇನ್ನುಳಿದ ಇಬ್ಬರು ವಾಡಿ ಪಟ್ಟಣದವರು ಎನ್ನಲಾಗುತ್ತಿದೆ. ತಾಲ್ಲೂಕಿನ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ವಿಜಯಪುರದಿಂದ ಕಬ್ಬು ಸಾಗಿಸುತ್ತಿದ್ದ ಲಾರಿಯನ್ನು ಪಂಕ್ಚರ್ ಆಗಿದ್ದರಿಂದ ರಸ್ತೆ ಬದಿ ನಿಲ್ಲಿಸಲಾಗಿತ್ತು. 

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೊ ಚಾಲಕ ಪರಾರಿಯಾಗಿದ್ದಾನೆ. ಪ್ರಕರಣದ ಕುರಿತು ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)