ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತ ಸಮುದಾಯಗಳ ಏಳಿಗೆಗೆ ಶ್ರಮಿಸಿ

ಮಾದಾರ ಚೆನ್ನಯ್ಯ, ಬಾಬೂಜಿ ಜಯಂತಿ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕರೆ
Last Updated 11 ಮೇ 2022, 2:48 IST
ಅಕ್ಷರ ಗಾತ್ರ

ಶಹಾಪುರ: ಶೋಷಿತ ಸಮುದಾಯಗಳ ಏಳಿಗೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ರಾಜಕೀಯ ನಮ್ಮ ಜೀವನದ ಒಂದು ಭಾಗ. ಮತದಾರರು ಮತ ಚಲಾಯಿಸುವಾಗ ಸರ್ಕಾರದ ಯೋಜನೆಗಳ ಬಗ್ಗೆ ವಿಚಾರಿಸಿ ತನ್ನ ಸರ್ವಭೌಮತ್ವದ ಅಧಿಕಾರ ಚಲಾಯಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲಿಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಾರ ಚೆನ್ನಯ್ಯ ಹಾಗೂ ಡಾ.ಬಾಬು ಜಗಜೀವನರಾಂ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನ್ಯಾಯಮೂರ್ತಿ ಸದಾಶಿವ ಆಯೋಗ ಜಾರಿಗೆ ನಿರಂತರವಾಗಿ ಹೋರಾಟ ನಡೆದಿದೆ. ಅದನ್ನು ಜಾರಿಗೆ ಪ್ರಾಮಾಣಿಕಯವಾಗಿ ಯತ್ನಿಸುವೆ. ಶೋಷಿತ ವರ್ಗ ಒಡೆದಾಳುವ ನೀತಿಗೆ ಬಲಿಯಾಗಬಾರದು. ಶಿಕ್ಷಣ ನಮ್ಮ ಉಸಿರಾಗಬೇಕು ಎಂದರು.

ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಯಾವ ಸಮುದಾಯ ಶಿಕ್ಷಣದಿಂದ ಉನ್ನತಿಯನ್ನು ಸಾಧಿಸುತ್ತದೆ. ಅದು ಮುಂದುವರೆದ ಸಮಾಜವಾಗಬಲ್ಲದು. ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ದೇವರ ಹೆಸರಿನಲ್ಲಿ ಹಣ ವೆಚ್ಚ ಮಾಡುವ ಬದಲು ನಮ್ಮ ಮಕ್ಕಳ ಶಿಕ್ಷಣಕ್ಕೆ ಅದು ಮೀಸಲಿಡಿ. ಅಕ್ಷರದ ಬೆಳಕಿನ ಕಿರಣವು ಜೀವನದಲ್ಲಿ ಮಹತ್ವ ಬದಲಾವಣೆ ತರುತ್ತದೆ. ಶಿಕ್ಷಣದ ಕ್ರಾಂತಿಯಿಂದ ಏನೆಲ್ಲ ಬದಲಾವಣೆ ಮಾಡಲು ಸಾಧ್ಯವಿದೆ ಎಂದರು.

ಚಿಗರಹಳ್ಳಿಯ ಮರಳ ಶಂಕರ ದೇವರಮಠದ ಸಿದ್ದಬಸವ ಕಬೀರನಂದ ಸ್ವಾಮೀಜಿ, ಸುರಪುರ ಶಾಸಕ ರಾಜೂಗೌಡ, ವಿಧಾನ ಪರಿಷತ್ ಸದಸ್ಯ ಆರ್.ಬಿ,ತಿಮ್ಮಾಪುರ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಎಚ್.ಹನುಮಂತಪ್ಪ, ಪಾವಗಡ ಶ್ರೀರಾಮ, ಹನುಮೇಗೌಡ ಬಿರಣಕಲ್,ಚಂದ್ರಶೇಖರ ಆರಬೋಳ, ಅಮಾತೆಪ್ಪ ಕಂದಕೂರ, ಗುರುನಾಥರಡ್ಡಿ ಹಳಿಸಗರ, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರುದ್ರಪ್ಪ ಹುಲಿಮನಿ, ಗೌರವ ಅಧ್ಯಕ್ಷ ಶಾಂತಪ್ಪ ಕಟ್ಟಿಮನಿ, ಕಾರ್ಯಾಧ್ಯಕ್ಷರು ಶಿವುಕುಮಾರ ದೊಡ್ಮನಿ, ಡಾ.ಧರ್ಮಣ್ಣ ಬಡಿಗೇರ ಹಾಗೂ ಸಮಾಜದ ಮುಖಂಡರಾದ ವೆಂಕಟೇಶ ಆಲೂರ, ವಾಸುದೇವ ಕಟ್ಟಿಮನಿ, ಭೀಮರಾಯ ಕರಕಳ್ಳಿ, ಮುದಕಪ್ಪ ಹೊಸಮನಿ, ಚಂದ್ರಶೇಖರ ಗಂಗನಾಳ,ಶಂಕ್ರೆಪ್ಪ ಗುಡಿಮನಿ, ಚಂದ್ರಶೇಖರ ಸಗರ, ಮಲ್ಲಿಕಾರ್ಜುನ ಗಡ್ಡೆಸುಗೂರ,ಬಸವರಾಜ ನಾಯ್ಕಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT