ಒತ್ತುವರಿ ತೆರವುಗೊಳಿಸಿದ ಗಂಟೆ ಒಳಗೆ ಮಳಿಗೆ ನಿರ್ಮಾಣ

7
ಸಾರ್ವಜನಿಕ ಆಸ್ತಿ ಸಂರಕ್ಷಣೆ ಮಾಡದ ಪೌರಾಯುಕ್ತರು: ಆರೋಪ

ಒತ್ತುವರಿ ತೆರವುಗೊಳಿಸಿದ ಗಂಟೆ ಒಳಗೆ ಮಳಿಗೆ ನಿರ್ಮಾಣ

Published:
Updated:
Deccan Herald

ಶಹಾಪುರ: ನಗರದ ಹಳೆ ಬಸ್ ನಿಲ್ದಾಣದ ಎದುರು ಸಿಪಿಎಸ್ ಶಾಲೆಗೆ ತೆರಳುವ ರಸ್ತೆ ಒತ್ತುವರಿ ಮಾಡಿ ನಿರ್ಮಿಸಿದ್ದ  ಮಳಿಗೆಯನ್ನು ತೆರವುಗೊಳಿಸಿದ ಅರ್ಧ ಗಂಟೆಯಲ್ಲಿ ಮತ್ತೆ ಅದೇ ಸ್ಥಳದಲ್ಲಿ ಮಳಿಗೆ ನಿರ್ಮಾಣಕ್ಕೆ ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ತೆರವುಗೊಳಿಸಿದ ಒತ್ತುವರಿ ಸ್ಥಳವು ಪ್ರಭಾವಿ ಕಾಂಗ್ರೆಸ್ ನಾಯಕರೊಬ್ಬರಿಗೆ ಸೇರಿದ್ದು, ರಸ್ತೆಯನ್ನು ಒತ್ತುವರಿ ಮಾಡಿ ಪಕ್ಕದಲ್ಲಿಯೇ ಮಳಿಗೆ ನಿರ್ಮಿಸಲಾಗುತ್ತಿದೆ. ಸಿಪಿಎಸ್ ಶಾಲಾ ಮೈದಾನ, ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿಗೆ ತೆರಳುವ ರಸ್ತೆ ಇದಾಗಿದೆ. ರಸ್ತೆಯಲ್ಲಿ ಮಳಿಗೆ ನಿರ್ಮಿಸುವುದರಿಂದ ಪಾದಚಾರಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ. ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಈಚೆಗೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಚೆನ್ನಪ್ಪ ಆನೆಗುಂದಿ ಹಾಗೂ ಎಸ್‌.ಎಂ.ಸಾಗರ ಪೌರಾಯುಕ್ತರಿಗೆ ದೂರು ನೀಡಿದ್ದರು.ಅದರಂತೆ ಪೌರಾಯುಕ್ತ ಬಸವರಾಜ ಶಿವಪೂಜೆ ಹಾಗೂ ಎಂಜಿನಿಯರ್ ಹಾಗೂ ನಗರಸಭೆಯ ಸಿಬ್ಬಂದಿ ಮಂಗಳವಾರ ಒತ್ತುವರಿ ಸ್ಥಳಕ್ಕೆ ತೆರಳಿ ಮಳಿಗೆಯನ್ನು ತೆರವುಗೊಳಿಸಿದ್ದರು.

‘ಕಾಂಗ್ರೆಸ್ ನಾಯಕರೊಬ್ಬರು ಪೌರಾಯುಕ್ತರ ಮೇಲೆ ರಾಜಕೀಯ ಒತ್ತಡ ಹಾಕಿ ಅರ್ಧ ಗಂಟೆಯಲ್ಲಿ ಮತ್ತೆ ಮಳಿಗೆ ನಿರ್ಮಿಸಿರುವುದು ನಾಚಿಕೆಗೇಡು ಸಂಗತಿಯಾಗಿದೆ. ಮೂರು ದಿನದಲ್ಲಿ ಒತ್ತುವರಿಯನ್ನು ತೆರವುಗೊಳಿಸದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಎಸ್ಎಫ್ಐ ಸಂಘಟನೆಯ ಮುಖಂಡ ವಿಜಯ ರಾಠೋಡ ಎಚ್ಚರಿಕೆ ನೀಡಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಕಾಲೇಜಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಬರುತ್ತಾರೆ. ಇಕ್ಕಟ್ಟಾದ ರಸ್ತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತೆ ಆಗುತ್ತದೆ. ಅಕ್ರಮವಾಗಿ ನಿರ್ಮಿಸಿದ ಮಳಿಗೆಯನ್ನು ತೆರವುಗೊಳಿಸಬೇಕು. ವಿದ್ಯಾರ್ಥಿಗಳಿಗೆ ಆಗುವ ತೊಂದರೆ ನಿವಾರಣೆಗೆ ಬೀದಿಗಿಳಿಯುವ ಮೊದಲು ಪೌರಾಯುಕ್ತರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಪ್ರಾಚಾರ್ಯರು ಪೌರಾಯುಕ್ತರಿಗೆ ಲಿಖಿತವಾಗಿ ದೂರು ನೀಡಿದ್ದಾರೆ.

ರಸ್ತೆ ಒತ್ತುವರಿ ಮಾಡಿ ತೆರವುಗೊಳಿಸಿದ ಸ್ಥಳದಲ್ಲಿ ಮತ್ತೆ ಮಳಿಗೆ ನಿರ್ಮಿಸಿದ ಮಳಿಗೆಯ ಮಾಲಿಕರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳದ ಪೌರಾಯುಕ್ತರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ಸಂರಕ್ಷಣೆ ಮಾಡದ ಪೌರಾಯುಕ್ತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಬಿಜೆಪಿಯ ರೈತ ಮೊರ್ಚಾದ ಜಿಲ್ಲಾ ಘಟಕದ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಅಕ್ರಮವಾಗಿ ನಿರ್ಮಿಸಿದ ಮಳಿಗೆಯನ್ನು ತೆರವುಗೊಳಿಸಿದ್ದು ನಿಜ. ಸಂಬಂಧಪಟ್ಟ ಮಾಲೀಕರಿಗೆ ಅಗತ್ಯ ದಾಖಲೆಗಳನ್ನು ಹಾಜರುಪಡಿಸುವಂತೆ ನೋಟಿಸ್‌ ಜಾರಿ ಮಾಡಲಾಗಿದೆ.
- ಬಸವರಾಜ ಶಿವಪೂಜೆ, ಪೌರಾಯುಕ್ತ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !