ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯ ವಿವಿಧೆಡೆ ಸಂವಿಧಾನ ದಿನಾಚರಣೆ

‘ಭಾರತ- ಪ್ರಜಾಪ್ರಭುತ್ವದ ತಾಯಿ‌’ ಘೋಷವಾಕ್ಯದಡಿಯಲ್ಲಿ ಕಾರ್ಯಕ್ರಮ
Last Updated 27 ನವೆಂಬರ್ 2022, 2:46 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು ಸೇರಿದಂತೆ ವಿವಿಧೆಡೆ ಶನಿವಾರ ಸಂವಿಧಾನ ದಿನಾಚರಣೆ ಆಚರಿಸಲಾಯಿತು.

ನಗರದ ತಹಶಿಲ್ದಾರ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ‘ಭಾರತ- ಪ್ರಜಾಪ್ರಭುತ್ವದ ತಾಯಿ‌’ ಘೋಷವಾಕ್ಯದಡಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸಂವಿಧಾನ ಶಿಲ್ಪಿ ಡಾ. ಬಿ.ಆರ್ .ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಸಂವಿಧಾನ ಪೀಠಿಕೆಯನ್ನು ಎಲ್ಲಾ ಅಧಿಕಾರಿಗಳು ಸಾಮೂಹಿಕವಾಗಿ ಓದುವ ಮೂಲಕ ‘ಸಂವಿಧಾನಿಕ ಮೌಲ್ಯಗಳು, ಮೂಲ ಆಶಯಗಳನ್ನು ಹಾಗೂ ರಾಷ್ಟ್ರದ ಏಕತೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕವಾಗಿ ಶ್ರಮಿಸಲು’ ಸಂಕಲ್ಪ ಮಾಡಿದರು. ತಹಸೀಲ್ದಾರ ಚನ್ನಮಲ್ಲಪ್ಪ ಅವರು ಸಂವಿಧಾನ ಪೀಠಿಕೆ ಹಾಗೂ ಪ್ರತಿಜ್ಞಾವಿಧಿ ಬೋಧಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚನ್ನಬಸವ, ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಪ್ರಭು ದೊರೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಸರ್ಕಾರಿ ಪದವಿ ಕಾಲೇಜು: ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಜರುಗಿತು.

ಜಿಲ್ಲಾ ಸರ್ಕಾರಿ ಕಾಲೇಜುಗಳ ಅದ್ಯಾಪಕರ ಸಂಘದ ಅಧ್ಯಕ್ಷ ಡಾ.ಸಂಗಪ್ಪ ರಾಂಪುರೆಮಾತನಾಡಿದರು.

ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,ಡಾ.ದೇವೀಂದ್ರಪ್ಪ ಹಳಿಮನಿ ಸಂವಿಧಾನ ಪೂರ್ವ ಪೀಠಿಕೆ ಓದಿದರು.

ಡಾ.ಜೆಟ್ಟೆಪ್ಪ.ಡಿ., ಪಂಪಾಪತಿರೆಡ್ಡಿ, ಚನ್ನಬಸಪ್ಪ ಒಡ್ಕರ್, ಪ್ರಹ್ಲಾದ ಜೋಷಿ, ಅರುಣ, ಡಾ.ಚಂದಪ್ಪ, ಪೀರ್ ಪಾಷ, ಡಾ.ವೆಂಕಟೇಶ ಕಲಾಲ, ಡಾ.ಲಿಂಗರಾಜ, ಡಾ.ಉಮಾದೇವಿ, ಅಂಬಿಕಾ, ಡಾ.ಉಮೇಶ ಇದ್ದರು.

ಜಿಲ್ಲಾ ಬಿಜೆಪಿ ಕಾರ್ಯಾಲಯ: ಜಿಲ್ಲಾ ಬಿಜೆ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆಯ ಅಂಗವಾಗಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲಿಸಿ ಸಂವಿಧಾನದ ಪೀಠಿಕೆ ಓದಲಾಯಿತು.

ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ನಿಗಮದ ಅಧ್ಯಕ್ಷ ದೇವಿಂದ್ರನಾಥ ನಾದ, ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯಕಾರಣಿ ಸದಸ್ಯ ಪರಶುರಾಮ ಕುರಕುಂದಿ, ಎಸ್ಸಿ ಮೋರ್ಚ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ ಬಿರನೂರ, ನಗರಸಭೆ ಸದಸ್ಯರಾದ ಸ್ವಾಮಿದೇವ ದಾಸನಕೆರಿ, ಅಂಬ್ಬಯ್ಯ ಶಾಬಾದಿ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಸಾಬು ಚಂಡ್ರಿಕಿ, ನಗರ ಮಂಡಲ ಅಧ್ಯಕ್ಷ ಮಂಜುನಾಥ ಜಡಿ, ಪ್ರಧಾನ ಕಾರ್ಯದರ್ಶಿ ಹಣಮಂತ ವಲ್ಯಾಪುರ, ಮಹೇಶ ಕುರುಕುಂಬಳ, ಮಾರುತಿ ಕಲಾಲ, ಸುಭಾಷ ಮಾಳಕೇರಿ, ಸುನಿತಾ ಚವ್ಹಾಣ, ಭೀಮಬಾಯಿ ಸೆಂಡಿಗಿ, ಎಸ್.ಪಿ ನಾಡೇಕರ್ ಇದ್ದರು.

ಅಹಿಂದಾ ಸಂಘಟನೆ: ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಅಹಿಂದ ಸಂಘಟನೆಯಿಂದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಘಟನೆಯ ಜಿಲ್ಲಾಧಯಕ್ಷ ಮೌಲಾಲಿ ಅನಪುರ ಹಾಗೂ ಕಾರ್ಯಕ್ರಮದ ಅಧ್ಯಕ್ಷ ಭೀಮಣ್ಣ ಮೇಟಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಣಮೇಗೌಡ ಬಿರುನಕಲ್ ಜ್ಯೋತಿ ಬೆಳಗಿಸಿದರು.

ವಿಶೇಷ ಸಂದೇಶಕರಾಗಿ ಡಾ.ವಿಜಯಕುಮಾರ ಸಾಲಿಮನಿ, ಡಾ. ಭೀಮರಾಯ ಲಿಂಗೇರಿ ಮಾತನಾಡಿದರು.

ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ವಿಜಯಕುಮಾರ ಸಿರಗೋಳ್, ಉಪಾಧ್ಯಕ್ಷರಾದ ಅಶೋಕ ವಾಟ್ಕರ್, ಭಗವಂತನವರ ದೇವರಾಜ ನಾಯಕ, ಮರೆಪ್ಪ ಚಟ್ರೆಕರ್, ಶಿವಪುತ್ರ ಜವಳಿ, ಭೀಮರಾಯ ಠಾಣಗುಂದಿ, ಹಣಮಂತ ತೆಕ್ರಾಳ, ಭೀಮಶಂಕರ ಗುಂಡಹಳ್ಳಿ ಇದ್ದರು.

ವಡಗೇರಾ: ಜಿಲ್ಲೆಯ ವಡಗೇರಾ ಪಟ್ಟಣದ ಶಾಖಾ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಂಥಾಲಯ ಮೇಲ್ವಿಚಾರಕ ನಾಮದೇವ ವಾಟ್ಕರ್, ನಮ್ಮ ಸಂವಿಧಾನವು ದೇಶದ ಸರ್ವರಿಗೂ ಸಮಬಾಳು-ಸಮಪಾಲು ನೀಡಿದೆ ಎಂದರು.

ದೇಶದ ಏಕತೆ, ಸಾರ್ವಭೌಮತೆ ಹಾಗೂ ಪ್ರಜಾಸತಾತ್ಮಕತೆಗಾಗಿ ಸಂವಿಧಾನ ರೂಪುಗೊಂಡಿದೆ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಿಕ್ಷಕಿ ರಾಚಮ್ಮ, ಶರಣು ಕುರಿ, ಮಹ್ಮದ್ ಖುರೇಷಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT