ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಈದ್‌ ಮಿಲಾದ್‌ ಆಚರಣೆ: ಉಪನ್ಯಾಸ

Last Updated 12 ನವೆಂಬರ್ 2019, 12:16 IST
ಅಕ್ಷರ ಗಾತ್ರ

ಯಾದಗಿರಿ: ‘ಮಹ್ಮಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಈದ್‌ ಮಿಲಾದ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ’ ಎಂದು ಜಮಾತೆ ಅಹಮ್ಮದಿಯಾ ದಕ್ಷಿಣ ಕರ್ನಾಟಕ ಪ್ರಚಾರಕ ಮೊಹಮ್ಮದ್ ನೇಮತುಲ್ಲಾ ಹೇಳಿದರು.

ನಗರದ ಶಹಾಪುರಪೇಟೆಯ ಅಹಮ್ಮದಿಯಾ ಮಸೀದಿ ಆವರಣದಲ್ಲಿ ಈದ್ ಮಿಲಾದ್‌ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹ್ಮಮದ್ ಪೈಗಂಬರ್ ಅವರು ಶತ್ರುಗಳನ್ನು ಕ್ಷಮಾ ಗುಣದಿಂದಲೇ ಅವರ ಮನಸ್ಸನ್ನು ಗೆದ್ದು ಮಿತ್ರರನ್ನಾಗಿಸಿಕೊಂಡು ಸಮುದಾಯವನ್ನು ಬೆಳೆಸಿದ್ದಾರೆ’ ಎಂದರು.

ಜಮಾತೆ ಅಹಮ್ಮದಿಯಾ ಸಂಘಟನೆಯ ನಗರ ಅಧ್ಯಕ್ಷ ನಯೀಮ್ ಅಹಮ್ಮದ್ ಸಗರಿ ಮಾತನಾಡಿ, ‘ಪ್ರವಾದಿ ಮಹ್ಮಮದ್ ಪೈಗಂಬರರು ಅವರ ಜೀವನ ಆದರ್ಶಗಳು ನಮಗೆಲ್ಲ ದಾರಿದೀಪವಾಗಿವೆ’ ಎಂದರು.

ಜಮಾತೆ ಅಹಮ್ಮದಿಯಾ ಸಂಘಟನೆ ಜಿಲ್ಲಾಧ್ಯಕ್ಷ ಅಸದ್ ಸುಲ್ತಾನ್ ಸಾಬ್‌ ಘೋರಿ, ಅಹಮ್ಮದೀಯಾ ಮಸೀದಿಯ ಧಾರ್ಮಿಕ ಮುಖಂಡ ತಾರೀಖ್ ಅಹಮ್ಮದ್ ಗುಲಬರ್ಗಿ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT