ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋರಬಂಡಾ: ಶ್ರೀಲಕ್ಷ್ಮೀ ತಿಮ್ಮಪ್ಪ ದೇವರ ಜಾತ್ರೆ

Last Updated 8 ನವೆಂಬರ್ 2022, 5:31 IST
ಅಕ್ಷರ ಗಾತ್ರ

ಗುರುಮಠಕಲ್: ನಮ್ಮ ಶ್ರೀಮಂತ ಸಂಸ್ಕೃತಿ ಹಾಗೂ ಭವ್ಯ ಪರಂಪರೆ ಪ್ರತಿಯೊಬ್ಬರೂ ಅರಿತುಕೊಳ್ಳುವುದು ಅವಶ್ಯ. ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ನೀಡುವುದು ಮರೆಯದಿರಿ ಎಂದು ಬಂಜಾರ ಧರ್ಮಗುರು ಮಹಾಂತ ಬಾಬುಸಿಂಗ ಮಹಾರಾಜ ಕರೆ ನೀಡಿದರು.

ಹತ್ತಿರದ ಬೋರಬಂಡಾ ಗ್ರಾಮದ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಸೋಮವಾರ 13ನೇ ಜಾತ್ರಾ ಮಹೋ ತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದರು.

ಯುವ ಪೀಳಿಗೆಯು ದುಶ್ಚಟಗಳಿಂದ ಎಚ್ಚರವಾಗಿರಿ ಮತ್ತು ಅವುಗಳು ಶತೃಗಳೆಂದು ಭಾವಿಸಿ, ಸ್ವಾಭಿಮಾನ ಮತ್ತು ಗುರುಪರಂಪರೆಯ ಮಾರ್ಗದರ್ಶ ನದಂತೆ ಆದರ್ಶ ಜೀವನವನ್ನು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.

ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರಶ್ರೀಗಳು ಮಾತ ನಾಡಿ, ಜಾತ್ರೆ, ಆಚರಣೆ, ಉತ್ಸವಗಳು ನಮ್ಮನ್ನು ಪರಸ್ಪರ ಬೆಸೆಯುವ ಮಹತ್ವದ ಆಚರಣೆಗಳಾಗಿವೆ. ಎಲ್ಲರೂ ಒಂದಾಗಿ ಸೇರುವ ಮೂಲಕ ಮನಸ್ಸುಗಳೂ ಒಂದಾಗಿ ಮುನ್ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

ಪಲ್ಲಕಿ, ರಥೋತ್ಸವ: ಸೋಮವಾರ ಬೆಳಿಗ್ಗೆ ವಿಶೇಷ ಅಭಿಷೇಕ, ಅಲಂಕಾರ, ರಥಾಂಗ ಹೋಮ, ಕಲ್ಯಾಣೋತ್ಸವ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಸಂಪನ್ನಗೊಂಡವು. ನಂತರ ರಥೋತ್ಸವ ಹಾಗೂ ಮಹಾಮಂಗಳಾರತಿಯ ನಂತರ ಪ್ರಸಾದ ವಿತರಣೆ ನಡೆಯಿತು.

ಲಿಂಗಸೂಗೂರಿನ ಸಿದ್ದಲಿಂಗ ಶ್ರೀ, ಯೋಗಿ ಮಹೇಂದ್ರನಾಥ, ನೇರಡಗಂ ಪಂಚಮ ಸಿದ್ದಲಿಂಗ ಶ್ರೀ, ಡಾ.ಜಗ್ನು ಮಹಾರಾಜ, ಕಿಶನಬಾವು ರಾಠೋಡ, ಜಿ.ಪಂ. ಸಿಇಒ ಅಮರೇಶ ನಾಯ್ಕ, ಜಗನ್ನಾಥರಾವ, ರವೀಂದ್ರ ಕೆ.ನಾಯಕ, ಲಕ್ಷ್ಮಣ ಗುಗಾಲತ, ಸಬಾವತರಾಜು ನಾಯಕ, ಸುಭಾಶ ಚೌವಾಣ, ಮುಕ್ತಿಲಾಲ ಕಾಲಿಯಾ, ಅಭಯಸಿಂಗ ಪಾಮರ, ಅಮರಸಿಂಗ ನಾಯಕ ಸೇರಿದಂತೆ ವಿವಿಧ ರಾಜ್ಯಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT