ಯಾದಗಿರಿ: ರಾಜ್ಯ ಸರ್ಕಾರವು ನಕಲಿ ಜಾತಿ ಪ್ರಮಾಣ ಪತ್ರಗಳ ವಿತರಣೆಗೆ ಕಡಿವಾಣ ಹಾಕದೆ ಇದ್ದರೆ ವಿಧಾನಸೌಧ, ಸಂಸತ್ತಿಗೂ ಮುತ್ತಿಗೆ ಹಾಕುತ್ತೇವೆ ಎಂದು ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಎಚ್ಚರಿಕೆ ನೀಡಿದರು.

ನಗರದಲ್ಲಿ ಬುಧವಾರ ಮಹರ್ಷಿ ವಾಲ್ಮೀಕಿ ಭಾವಚಿತ್ರ ಇರುವ ಬಾವುಟಗಳು ರಾರಾಜಿಸಿದವು. ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶ ಸೇರಿ ನೆರೆಯ ರಾಯಚೂರು, ಕಲಬುರಗಿ, ಬೀದರ್ನಿಂದ ಬಂದಿದ್ದ ವಾಲ್ಮೀಕಿ ಸಮುದಾಯದ ಜನ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಸೇಡಂ, ಸುರಪುರ, ರಾಯಚೂರು, ಕಲಬುರಗಿ, ಹೊಸಳ್ಳಿ ಸೇರಿದಂತೆ ಸುತ್ತಲ್ಲಿನ ರಸ್ತೆಗಳಿಂದ ಕ್ರೂಸರ್, ಬೊಲೆರೊಗಳಲ್ಲಿ ಹಲಗೆ ಬಾರಿಸುತ್ತ, ಜೈಕಾರ ಹಾಕುತ್ತ ತಹಶೀಲ್ದಾರ್ ಕಚೇರಿ ಮುಂಭಾಗಕ್ಕೆ ದಾವಿಸಿದರು. ಕೆಲವರು ಸಮುದಾಯದ ಬಾವುಟಗಳನ್ನು ಹಿಡಿದು ಕಾರು, ಬೈಕ್ಗಳಲ್ಲಿಯೂ ಬಂದರು.

ಮಹರ್ಷಿ ವಾಲ್ಮೀಕಿ ನಾಯಕ, ಮದಕರಿ ನಾಯಕ, ವೀರ ಸಿಂಧೂರ ಲಕ್ಷ್ಮಣ ಸೇರಿ ಮಹನೀಯರಿಗೆ ಜೈಕಾರ ಹಾಕುತ್ತ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಶಾಸ್ತ್ರಿ ವೃತ್ತದಲ್ಲಿ ಹಲಗೆ ಬಾರಿಸುತ್ತ ಕ್ರಾಂತಿ ಗೀತೆಗಳನ್ನು ಹಾಡಿದರು.

ಪರಿಶಿಷ್ಟ ಪಂಗಡದ ನಾಯಕ, ನಾಯ್ಕಡ್ ತಳವಾರ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ವಿತರಣೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಜತೆಗೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಆಕ್ರೋಶವೂ ವ್ಯಕ್ತಪಡಿಸಿದರು.

ಸುಭಾಷ್ ವೃತ್ತದಲ್ಲಿ ಒಂದು ಗಂಟೆಗೂ ಹೆಚ್ಚು ಬಹಿರಂಗ ಸಭೆ ಮಾಡಿದರು. ರಾಜ್ಯ ಸರ್ಕಾರ, ನಕಲಿ ಜಾತಿ ಪ್ರಮಾಣ ಪತ್ರಗಳ ಬಗ್ಗೆ ಮಾತನಾಡದ ಎಸ್ಟಿ ಮೀಸಲು ಕ್ಷೇತ್ರಗಳಿಂದ ಗೆದ್ದು ಶಾಸಕರಾಗಿ, ಸಚಿವರ ವಿರುದ್ಧ ಕಿಡಿಕಾರಿದರು.

ಬಹಿರಂಗ ಸಭೆಯ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಂಗಲಿಂಗೇಶ್ವರದ ತ್ರಿಶೂಲಪ್ಪ ಶರಣರು, ವಾಲ್ಮೀಕಿ ನಾಯಕ ಸಂಘದ ಉತ್ತರ ಕರ್ನಾಟಕದ ಅಧ್ಯಕ್ಷ ಮಾರೆಪ್ಪ ನಾಯಕ ಮಗ್ದಂಪುರ, ಜಿಲ್ಲಾ ಅಧ್ಯಕ್ಷ ಗೌಡಪ್ಪ ಆಲ್ದಾಳ, ಬೀದರ್ ಜಿಲ್ಲಾ ಅಧ್ಯಕ್ಷ ದಶರಥ ನಾಯಕ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಯರ್ರಿಸ್ವಾಮಿ, ವಿಜಯನಗರ ಜಿಲ್ಲಾ ಅಧ್ಯಕ್ಷ ಜಂಬಯ್ಯ ನಾಯಕ, ರಾಯಚೂರು ಜಿಲ್ಲಾ ಅಧ್ಯಕ್ಷ ರಘುವೀರ ನಾಯಕ, ಪ್ರಮುಖರಾದ ಸಿದ್ದಲಿಂಗಪ್ಪ ನಾಯಕ, ಸಾಹೇಬಗೌಡ ಗೌಡಗೇರ, ಮರೆಪ್ಪ ಪ್ಯಾಟಿ, ಬಸನಗೌಡ ಕಡದ್ರಾಳ, ತಿಮ್ಮಣ್ಣ ನಾಯಕ, ಚಳವಳಿ ರಾಜಣ್ಣ, ಶ್ರವಣಕುಮಾರ, ಭೀಮಣ್ಣಗೌಡ ಯಮನೂರ, ಶಾರದ ಹುಲಿನಾಯಕ ದೊರೆ ಸೇರಿ ಹಲವರು ಪಾಲ್ಗೊಂಡಿದ್ದರು.

‘ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಲಿ’

‘ಜಾತಿ ಪ್ರಮಾಣ ಪತ್ರ ವಿತರಣೆಯಲ್ಲಿ ಅಧಿಕಾರಿಗಳು ಸಾಂವಿಧಾನಿಕ ಮಾನದಂಡಗಳನ್ನು ಪಾಲಿಸದೆ ಇರುವುದು ನಾಚಿಕೆಗೇಡಿನ ಸಂಗತಿ. ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಕೊಡುವ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೆಕು’ ಎಂದು ವಿವಿಧ ಜಿಲ್ಲೆಗಳ ಅಧ್ಯಕ್ಷರು ಒತ್ತಾಯಿಸಿದರು. ‘ಹೋರಾಟ ಮಾಡಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಹಿರಿಯರ ಮಾರ್ಗದಲ್ಲಿ ನಡೆಯಬೇಕು. ನಕಲಿ ಪ್ರಮಾಣ ಪತ್ರಗಳನ್ನು ಕೊಟ್ಟು ನಮ್ಮ ನಾಯಕರ ಬಲ ಕುಗ್ಗಿಸಿದರೆ ವಿಧಾನಸಭೆ ಸಂಸತ್ತಿಗೂ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಡಾ.ಅಂಬೇಡ್ಕರ್ ಅವರು ಎಸ್ಸಿ ಎಸ್ಟಿ ಸಮುದಾಯದ ಹಿತಕಾಯಲು ಚುನಾವಣೆಯಲ್ಲಿ ಮೀಸಲು ಕ್ಷೇತ್ರಗಳನ್ನು ಕೊಟ್ಟಿದ್ದಾರೆ ಹೊರತು ಜನಪ್ರತಿನಿಧಿಗಳಿಗೆ ಮೋಜು ಮಾಡಲು ಅಲ್ಲ.
-ಪ್ರಸನ್ನಾನಂದ ಸ್ವಾಮೀಜಿ ದಾವಣಗೆರೆಯ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠ

ಶಾಸಕರು ಸಂಸದರು ಸಚಿವರು ನಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು. ಅಧಿಕಾರಿಗಳೂ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಕೊಡಬಾರದು
-ವರದಾನಂದ ಗೋಲಪಲ್ಲಿ ಸ್ವಾಮೀಜಿ ಗೋಲಪಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.