ಸುರಪುರ: ‘ದಶಕಗಳ ಹಿಂದೆ ಬಯಲಾಟ ಮನರಂಜನೆ, ಸಾಮಾಜಿಕ ಸಂದೇಶ ಮತ್ತು ಜನರಿಗೆ ಪೌರಾಣಿಕ ಮಾಹಿತಿ ಒದಗಿಸುವ ಮಾಧ್ಯಮವಾಗಿತ್ತು. ಆಧುನೀಕತೆಯ ಭರಾಟೆಯಲ್ಲಿ ಈ ಅಪರೂಪದ ಕಲೆ ನಶಿಸುತ್ತಿದೆ’ ಎಂದು ಸಾಹಿತಿ ಕನಕಪ್ಪ ವಾಗಣಗೇರಿ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ತಳವಾರಗೇರಿ ಗ್ರಾಮದಲ್ಲಿ ಶುಕ್ರವಾರ ಗ್ರಾಮಸ್ಥರು ಅಭಿನಯಿಸಿದ ‘ಐರಾವಣ ಮಹಿರಾವಣ’ ಬಯಲಾಟ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಒಂದು ಕಾಲದಲ್ಲಿ ಈ ಭಾಗದಲ್ಲಿ ಬಯಲಾಟಗಳು ನಿರಂತರವಾಗಿ ಪ್ರದರ್ಶಿತವಾಗುತ್ತಿದ್ದವು. ಜನಪದ ಮೂಲವಾಗಿರುವ ಈ ಅನನ್ಯ ಕಲೆಗೆ ಈಗ ಪ್ರೋತ್ಸಾಹ ಇಲ್ಲ. ಸರ್ಕಾರ ಬಯಲಾಟ ಅಕಾಡೆಮಿ ಸ್ಥಾಪಿಸಿದೆ. ಈ ಮೂಲಕ ಬಯಲಾಟಕ್ಕೆ ಮತ್ತೆ ಮೊದಲಿನ ವೈಭವ ಮರಳುವಂತಾಗಲಿ’ ಎಂದು ಹೇಳಿದರು.

‘ಈ ಭಾಗದಲ್ಲಿ ರಸ್ತಾಪುರದ ಭೀಮಕವಿ ಮತ್ತು ವಾಗಣಗೇರಿಯ ಬಸವನಗೌಡ ಅವರು ಅದ್ಭುತ ಬಯಲಾಟ ಸಾಹಿತ್ಯ ರಚನಾಕಾರರಾಗಿದ್ದರು. ಸ್ವತಃ ಅಭಿನಯಿಸಿ, ಬಯಲಾಟದ ಸೂತ್ರಧಾರನಾದ ‘ಸಾರಥಿ’ಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು’ ಎಂದು ಹೇಳಿದರು.

ಸಾರಥಿ ಕನಕಪ್ಪ ವಾಗಣಗೇರಿ ಮತ್ತು ಆಂಜನೇಯ ಪಾತ್ರಧಾರಿ ಪರಶುರಾಮ ಹವಾಲ್ದಾರ ಮಧ್ಯೆ ನಡೆದ ಹಾಸ್ಯ ಮಾತುಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು.

ಆಂಜನೇಯ ಪಾತ್ರಧಾರಿ ಪ್ರೇಕ್ಷಕರ ಮಧ್ಯದಿಂದ ಸಂಜೀವಿನ ಪರ್ವತ ಹೊತ್ತು ತಂದ ದೃಶ್ಯ ಎಲ್ಲರನ್ನೂ ರೋಮಾಂಚನಗೊಳಿಸಿತು. ಬೆಳಗಿನವರೆಗೂ ನಡೆದ ಬಯಲಾಟ ನಡುಗುವ ಚಳಿಯಲ್ಲೂ ಜನರನ್ನು ಹಿಡಿದಿಡಲು ಯಶಸ್ವಿಯಾಯಿತು.

ಪಾತ್ರಧಾರಿಗಳ ವೇಷಭೂಷಣ, ಆಂಗಿಕ ಅಭಿನಯ, ಹಾವಭಾವ, ಡೈಲಾಗ್ ಡೆಲಿವರಿ, ಹಾಡು, ನೃತ್ಯ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿದವು.

ರಾಮನ ಪಾತ್ರದಲ್ಲಿ ಹನುಮಂತ ಸುರಪುರ, ಲಕ್ಷ್ಮಣನ ಪಾತ್ರದಲ್ಲಿ ಮರೆಪ್ಪ ರತ್ತಾಳ, ಸೀತೆಯ ಪಾತ್ರದಲ್ಲಿ ಮಲ್ಲಯ್ಯ ಮಠಪತಿ, ರಾವಣನಾಗಿ ಶಿವಪ್ಪ ಗಾಲದಿನ್ನಿ, ವಿಭೂಷಣನಾಗಿ ದೇವಪ್ಪ ತೆಳಗೇರಿ, ಇಂದ್ರಜೀತನ ಪಾತ್ರದಲ್ಲಿ ಹಣಮಂತ ಸಾಹುಕಾರ, ಐರಾವಣನಾಗಿ ದುರ್ಗಪ್ಪ ಸಾಹುಕಾರ, ಮಹಿರಾವಣನಾಗಿ ಸಣ್ಣದೇವಪ್ಪ, ಮಂಡೋದರಿಯಾಗಿ ಶರಣು ರತ್ತಾಳ ಅವರು ಪರಕಾಯ ಪ್ರವೇಶ ಮಾಡಿದವರಂತೆ ಅಪೂರ್ವವಾಗಿ ಅಭಿನಯಿಸಿದರು. ಬಯಲಾಟ ಮಾಸ್ತರ ಕಾರ್ಯ ನಿರ್ವಹಿಸಿದ ಗೋಪಣ್ಣ ಪೂಜಾರಿ ಎಲ್ಲರ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.