ಸೋಮವಾರ, ಆಗಸ್ಟ್ 2, 2021
20 °C

ಸುರಪುರ: ಪೌರ ಕಾರ್ಮಿಕರಿಗೆ ದಿನಸಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ರಂಗಂಪೇಟೆಯ ನಾಗಮ್ಮ ಸಿಂದಗಿ ಅವರ 3ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಶೋಷಿತಪರ ಸಂಘಟನೆಯಿಂದ ಮಂಗಳವಾರ ಪೌರ ಕಾರ್ಮಿಕರಿಗೆ ದಿಸಿ, ತರಕಾರಿ ಮತ್ತು ಬಟ್ಟೆ ವಿತರಿಸಲಾಯಿತು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ, 'ಕೆಲವರು ತಮ್ಮ ಹಿರಿಯರ ಪುಣ್ಯತಿಥಿಗೆ ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ. ಇದರಿಂದ ಯಾವುದೇ ಲಾಭವಿಲ್ಲ. ಅದೇ ಹಣವನ್ನು ಪೌರ ಕಾರ್ಮಿಕರಿಗೆ, ಬಡವರಿಗೆ ದಿನಸಿ, ತರಕಾರಿ, ಬಟ್ಟೆ ಇತರ ಅಗತ್ಯ ವಸ್ತುಗಳನ್ನು ವಿತರಿಸಿದರೆ ಬಡವರಿಗೆ ಅನುಕೂಲವಾಗುತ್ತದೆ‘ ಎಂದರು.

ಶಿವಲಿಂಗ ಚಲುವಾದಿ ಎಂ. ಪಟೇಲ, ಖಾಜಾ ಅಜ್ಮೀರ, ಶ್ರೀಮಂತ ಚಲುವಾದಿ, ಗೋವಿಂದರಾಜ ಶಹಾಪುರಕರ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.