ಯಾದಗಿರಿ: ನಗರದ ಗಂಜ್ ಪ್ರದೇಶ ಸಮೀಪದ ರಸ್ತೆಯಲ್ಲಿ ಶನಿವಾರ ಮಾಜಿ ಸಚಿವ ರಾಜೂಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘತವಾಗಿದ್ದು, ಸಣ್ಣ ತರುಚಿದ ಗಾಯಗಳಾಗಿವೆ.

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಪಂದ್ಯ ಮುಗಿಸಿಕೊಂಡು ಯಾದಗಿರಿಯತ್ತ ಕಾರಿನಲ್ಲಿ ಬರುತ್ತಿದ್ದರು. ಗಂಜ್ ಪ್ರದೇಶದ ರಸ್ತೆಯಲ್ಲಿ ಟ್ರಕ್ವೊಂದರ ಚಾಲಕ ನಿಯಂತ್ರಣ ತಪ್ಪಿ ರಾಜೂಗೌಡ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡಿಕ್ಕಿಯ ರಭಸಕ್ಕೆ ಕಾರಿನ ಹಿಂಭಾಗ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಇದ್ದವರು ಪಾರಾಗಿದ್ದು, ರಾಜೂಗೌಡ ಅವರಿಗೆ ಸಣ್ಣ ತರುಚಿದ ಗಾಯಗಳಾಗಿವೆ. ಪ್ರಥಮ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

‘ದೇವತು, ತಾಯಿ, ಜನರ ಆಶೀರ್ವಾದದಿಂದ ನನಗೆ ಏನೂ ಆಗಿಲ್ಲ. ಅಪಘಾತದಲ್ಲಿ ನನಗೆ ಎಳ್ಳು ಕಾಳಷ್ಟು ತೊಂದರೆ ಆಗಲ್ಲಿ. ಕಾರಿನ ಫೋಟೊ ನೋಡಿದವರು ಆತಂಕಕ್ಕೆ ಒಳಗಾಗಿ ನನಗೆ ಫೋನ್ ಮೇಲೆ ಫೋನ್ ಮಾಡಿ, ಮನೆಗೆ ಬಂದು ವಿಚಾರಿಸುತ್ತಿದ್ದಾರೆ. ನನಗೆ ಏನೂ ಆಗಿಲ್ಲ. ಯಾರೂ ಆತಂಕಕ್ಕೆ ಒಳಗಾಗಬಾರದು’ ಎಂದು ರಾಜೂಗೌಡ ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.