ಮಂಗಳವಾರ, ಜುಲೈ 27, 2021
23 °C

ಜಿಲ್ಲೆಯಲ್ಲಿ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಮಂಗಳವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದೆ.

ಜಿಲ್ಲೆಯಲ್ಲಿ 13 ಮಿ.ಮೀ ಮಳೆಯಾಗಿದ್ದು, ರೈತರು ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಮುಂಗಾರು ಮಳೆ ಆರಂಭದಲ್ಲಿ ಆಶಾದಾಯವಾಗಿದ್ದು, ಭೂಮಿ ಹದ ಮಾಡುವುದರಲ್ಲಿ ರೈತರು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಯಾದಗಿರಿ ತಾಲ್ಲೂಕಿನಲ್ಲಿ 20 ಮಿ.ಮೀ ಮಳೆಯಾಗಿದೆ. ಹತ್ತಿಕುಣಿ 19, ಗುರುಮಠಕಲ್‌ 18, ಕೊಂಕಲ್‌ 25, ಬಳಿಚಕ್ರ 19, ಸೈದಾಪುರ 19 ಮಿ.ಮೀ ಮಳೆ ಸುರಿದಿದೆ. 

ಶಹಾಪುರದಲ್ಲಿ 23.6, ಭೀಮರಾಯನಗುಡಿ 14.8, ಗೋಗಿ 3.8, ದೋರನಹಳ್ಳಿ 12, ಹೈಯಾಳ, 21 ವಡಗೇರಾ 25, ಹತ್ತಿಗೂಡೂರ 6 ಮಿ.ಮೀ ಮಳೆಯಾಗಿದೆ.

ಸುರಪುರ ಹೋಬಳಿಯಲ್ಲಿ 8 ಮಿ.ಮೀ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ರಾತ್ರಿ ವೇಳೆಯಲ್ಲಿ ಮಳೆ ಸುರಿಯುತ್ತಿದ್ದು, ಇದರಿಂದ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಇನ್ನೂ ಆಗಿಲ್ಲ. ಇದರಿಂದ ಧಗೆ ಇನ್ನೂ ಇದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.