ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್‌: ಮತ್ತೆ ಹಲವರಲ್ಲಿ ಆರೋಗ್ಯ ಸಮಸ್ಯೆ, 19 ಜನ ಅಸ್ವಸ್ಥ

ಹಿಮಾಲಪುರ ಘಟನೆ ನಂತರ ಮತ್ತೆ ಹಲವರಲ್ಲಿ ಆರೋಗ್ಯ ಸಮಸ್ಯೆ
Published 22 ಆಗಸ್ಟ್ 2023, 10:40 IST
Last Updated 22 ಆಗಸ್ಟ್ 2023, 10:40 IST
ಅಕ್ಷರ ಗಾತ್ರ

ಗುರುಮಠಕಲ್‌ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿ ಸೋಮವಾರ (ಆ.21) ರಂದು ವಾಂತಿ ಭೇದಿ ಪ್ರಕರಣಗಳು ವರದಿಯಾಗಿದ್ದು, ಮಂಗಳವಾರ (ಆ.22) ಮಧ್ಯಾಹ್ನದ ವೇಳೆಗೆ 19 ಜನರು ಅಸ್ವಸ್ಥರಾಗಿದ್ದಾರೆ.

‘ಈವರೆಗೆ ಒಟ್ಟು 19 ಪ್ರಕರಣಗಳು ಕಂಡುಬಂದಿದ್ದು, 9 ಜನರಲ್ಲಿ ಮಾತ್ರ ವಾಂತಿ ಭೇದಿ ಸಮಸ್ಯೆಯಿದೆ. ಉಳಿದವರಲ್ಲಿ ಕೇವಲ ಭೇದಿ ಸಮಸ್ಯೆಯಿದೆ’ ಎಂದು ಗಾಜರಕೋಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಎಂ.ಎಂ.ರಾಹಿಲ್‌ ತಿಳಿಸಿದರು.

ಗುರುಮಠಕಲ್‌ ಸಮುದಾಯ ಆರೋಗ್ಯ ಕೇಂದ್ರಕ್ಕೆ 5 ಜನರನ್ನು ಕಳುಹಿಸಲಾಗಿದ್ದು, ವೈದ್ಯಕೀಯ ಆರೈಕೆ ಪಡೆದು ಗುಣಮುಖರಾಗಿದ್ದಾರೆ. ವಯಸ್ಸಾದ ಒಬ್ಬರಲ್ಲಿ ಕಡಿಮೆ ರಕ್ತದೋತ್ತಡವೂ ಕಾಣಿಸಿಕೊಂಡ ಹಿನ್ನಲೆ ಯಾದಗಿರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

‘ಗಾಜರಕೋಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸದ್ಯ ಐವರು ವೈದ್ಯಕೀಯ ಆರೈಕೆ ಪಡೆಯುತ್ತಿದ್ದು, 4 ಜನ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ಈ ಮೊದಲು ಫೆಬ್ರುವರಿ ತಿಂಗಳಲ್ಲಿ ಅನಪುರ ಗ್ರಾಮದ ಮೂವರು ವಾಂತಿ ಭೇದಿಗೆ ಮೃತಪಟ್ಟ ನಂತರವೂ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಎಚ್ಚರಿಕೆ ವಹಿಸದಿರುವುದು ಆಶ್ಚರ್ಯಕರ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದರು.

ಗಾಜರಕೋಟ ಗ್ರಾಮದ ಜಲ ಮೂಲಗಳನ್ನು ಸೋಮವಾರ ಸಂಜೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಾಜಿದ್‌, ಟಿಎಚ್‌ಒ ಡಾ.ಹಣಮಂತರೆಡ್ಡಿ ಪರಿಶೀಲಿಸಿದರು.
ಗಾಜರಕೋಟ ಗ್ರಾಮದ ಜಲ ಮೂಲಗಳನ್ನು ಸೋಮವಾರ ಸಂಜೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಾಜಿದ್‌, ಟಿಎಚ್‌ಒ ಡಾ.ಹಣಮಂತರೆಡ್ಡಿ ಪರಿಶೀಲಿಸಿದರು.
ಫೆಬ್ರುವರಿಯಲ್ಲಿ ಅನಪುರ, ಕೆಲದಿನಗಳಲ್ಲೆ ಚಿನ್ನಾಕಾರ, ದಂತಾಪುರ ಮತ್ತು ಜೂನ್‌ ತಿಂಗಳಲ್ಲಿ ಹಿಮಾಲಪುರ ಗ್ರಾಮಗಳಲ್ಲಿ ವಾಂತಿ ಭೇದಿಯಿಂದ ಹಲವು ಜನ ಅಸ್ವಸ್ಥರಾಗಿದ್ದರು. ಆದರೆ, ಈ ಯಾವ ಘಟನೆಗಳೂ ಆಡಳಿತದ ಮೇಲೆ ಪ್ರಭಾವ ಬೀರಲಿಲ್ಲವೇ? ಘಟನೆಗಳು ಪುನಾವರ್ತನೆಯಾಗುತ್ತಿವೆ. ಅಧಿಕಾರಿಗಳ ಬೇಜವಾಬ್ದಾರಿಗೆ ಜನ ಬೆಲೆ ತೆರುವಂತಾಗುತ್ತಿದೆ.
–ಆನಂದ ಇಟ್ಕಲ್‌ ಗಾಜರಕೋಟ, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT