ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕ ನಿಷ್ಠೆಯಿಂದ ಜೀವನದ ಪ್ರಗತಿ: ಹೇಮರಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಶಂಕರ್‌

Last Updated 10 ಮೇ 2019, 14:53 IST
ಅಕ್ಷರ ಗಾತ್ರ

ಕೊಪ್ಪಳ: ಹೇಮರಡ್ಡಿ ಮಲ್ಲಮ್ಮನ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪನ್ಯಾಸಕ ಶಂಕರ್ ಮಾಳೆಕೊಪ್ಪ ಹೇಳಿದರು.

ನಗರದ ಕಿನ್ನಾಳ ರಸ್ತೆಯಲ್ಲಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶುಕ್ರವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ‌ 595ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಎಲ್ಲರೂ ಕಾಯಕನಿಷ್ಠೆ ಹೊಂದಬೇಕು. ದಾನ-ಧರ್ಮ ಮಾಡಬೇಕು. ಜ್ಞಾನಿಗಳಾಗಬೇಕು. ಉತ್ತಮ ಮನೋಭಾವನೆಗಳನ್ನು ಬೆಳೆಸಿ ಕೊಳ್ಳಬೇಕು. ವೈರಾಗ್ಯ ಮೂರ್ತಿಗಳಾಗಿ ಬಾಳಬೇಕು. ಯೋಗಿಗಳಾಗಬೇಕು. ಅತಿಥಿಗಳನ್ನು ಗೌರವಿಸಬೇಕು. ಪತಿವೃತ್ತಾ ಧರ್ಮ ಪಾಲಿಸಬೇಕು. ಈ ಎಲ್ಲವನ್ನೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮೋಕ್ಷ ಹೊಂದಬೇಕಾದರೇ ಒಳ್ಳೆಯ ಗುರುವಿನ ಸಹಾಯ ಅಗತ್ಯವಾಗಿದೆ. ಕುಟುಂಬದಲ್ಲಿ ವ್ಯಾತ್ಯಾಸಗಳಿರುವುದು ಸಹಜ. ಆದರೆ ಅವುಗಳನ್ನು ಸರಿಪಡಿಸಿಕೊಂಡು ಬದುಕಬೇಕು. ಮಲ್ಲಮ್ಮ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಎಲ್ಲರೂ ಸಮಾನರು ಎನ್ನುವ ಭಾವನೆ ಬರಬೇಕು. ಹಣವಿಟ್ಟರೇ ಕೊಳೆಯುತ್ತದೆ. ಆದರೆ ಕೊಳೆತ ಗೊಬ್ಬರವನ್ನೂ ಕೃಷಿಗೆ ಬಳಕೆ ಮಾಡಿಕೊಂಡರೇ ಉತ್ತಮ ಬೆಳೆ ಬರುತ್ತದೆ. ಇದನ್ನು ರಡ್ಡಿ ಬಾಂಧವರು ಸಾಧಿಸಿ, ತೋರಿಸಿದ್ದಾರೆ ಎಂದರು.

ಮಲ್ಲಮ್ಮನ ಮೈದುನ ವೇಮನು ಆಂಧ್ರ ಪ್ರದೇಶದಲ್ಲಿ ಕನ್ನಡದ ಸರ್ವಜ್ಞನಿಗೆ ಸಮಾನರಾಗಿದ್ದಾರೆ. ಇವರು ಮಲ್ಲಮ್ಮನ ಷರತ್ತಿಗೆ ತಲೆಬಾಗಿ ವೈರಾಗಿಯಾಗುತ್ತಾರೆ.‌ ಅಲ್ಲಿಂದ ತಮ್ಮ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯಕ್ಕೆ ಮುಂದಾಗುತ್ತಾರೆ ಎಂದರು.

ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ವ್ಯವಸಾಯದ ಜೊತೆಗೆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದು ಅವಶ್ಯವಾಗಿದೆ.‌ ಎಲ್ಲರೂ ಶಿಕ್ಷಣ ಪಡೆದು ಸಮಾಜಮುಖಿ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಕೃಷ್ಣಾರಡ್ಡಿ ಗಲಿಬಿ ಪ್ರಾಸ್ತಾವಿಕ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ, ಮುಖಂಡರಾದ ವೆಂಕನಗೌಡ್ರ ಹಿರೇಗೌಡ್ರ, ವಕೀಲ ವೆಂಕರಡ್ಡಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಹನುರಡ್ಡಿ ಹಂಗನಕಟ್ಟಿ, ಬಸವರಾಜ ಪುರದ, ಪ್ರಭು ಹೆಬ್ಬಾಳ, ಸಂಗಪ್ಪ ವಕ್ಕಳದ ಕೇಶವರಡ್ಡಿ ಮಾದಿನೂರು ಇದ್ದರು.

ಹೇಮರಡ್ಡಿ ಮಲ್ಲಮ ಭಕ್ತಿ, ತಾಳ್ಮೆಯ ಪ್ರತೀಕ: ಬಣ್ಣನೆ

ಕನಕಗಿರಿ: ಇಲ್ಲಿನ ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ ಹೇಮ-ವೇಮರಡ್ಡಿ ಚಾರಿಟೆಬಲ್ ಟ್ರಸ್ಟ್ ಹಾಗೂ ರಡ್ಡಿ ಸಮಾಜದ ಸಹಯೋಗದಲ್ಲಿ ಹೇಮರಡ್ಡಿ ಮಲ್ಲಮ್ಮರ ಜಯಂತಿ ಆಚರಿಸಲಾಯಿತು.

ತಹಶೀಲ್ದಾರ್ ರವಿ ಅಂಗಡಿ ಅವರು, ಹೇಮರೆಡ್ಡಿ ಮಲ್ಲಮ್ಮ ಅವರು ಕುಟುಂಬದಿಂದ ಸಾಕಷ್ಟು ಶೋಷಣೆಗೆ ಒಳಗಾಗಿದ್ದರೂ ಎಂದಿಗೂ ತಾಳ್ಮೆ ಕಳೆದುಕೊಂಡಿರಲಿಲ್ಲ. ಭಕ್ತಿಯಿಂದ ಇಡೀ ಕುಟುಂಬವನ್ನು ಸಾಗಿಸಿ ಮಹಿಳೆಯರ ಕಣ್ಮಣಿಯಾದರು ಎಂದು ಹೇಳಿದರು.

ಸಮಾಜಕ್ಕೆ ಆದರ್ಶ, ಮೌಲ್ಯಗಳನ್ನುಬೋಧಿಸಿದ ಸಂತರು, ಶರಣರನ್ನು ಕೇವಲಒಂದು ಸಮಾಜಕ್ಕೆ ಸೀಮಿತಗೊಳಿಸಬಾರದುಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಶರಣಬಸಪ್ಪ ಭತ್ತದ ಮಾತನಾಡಿ, ತಾಳ್ಮೆ ಹಾಗೂ ಭಕ್ತಿಯ ಪ್ರತೀಕವಾಗಿರುವ ಹೇಮರಡ್ಡಿ ಮಲ್ಲಮ್ಮ ಅವರಂತೆ ಪ್ರತಿಯೊಬ್ಬರು ನಡೆದಾಗ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಟ್ರಸ್ಟ್‌ ಅಧ್ಯಕ್ಷ ಪುರುಷೋತ್ತಮರಡ್ಡಿ ಮಾದಿನಾಳ, ಉಪ ತಹಶೀಲ್ದಾರ್ ವಿಶ್ವೇಶ್ವರಯ್ಯ ಸಾಲಿಮಠ, ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥರಡ್ಡಿ ಮಾದಿನಾಳ ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಹುಲಗಪ್ಪ ವಾಲೇಕಾರ, ಹುಸೇನಸಾಬ ಸೂಳೇಕಲ್, ಕೆ ಸುಭಾಸ, ಸೈಯದ ಮಹ್ಮದ ಪಾಷ, ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರಕಾಶ ಹಾದಿಮನಿ,ಎಸ್‌ಡಿಎಂಸಿ ಅಧ್ಯಕ್ಷ ಯಂಕಾರಡ್ಡಿ ಕೆರಿ, ರಮೇಶರಡ್ಡಿ ಓಣಿಮನಿ, ಮಧುಸೂದನ ಮಾದಿನಾಳ,ಕನಕದಾಸ ಪೂಜಾರ, ವಿಶ್ವನಾಥರೆಡ್ಡಿ
ಓಣಿಮನಿ, ಯಂಕಾರೆಡ್ಡಿ ಕೆರಿ, ಕಾಂತೆಪ್ಪಕೋರಡ್ಡಿ ಇದ್ದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಜಯಂತಿಯಲ್ಲಿ ತಹಶೀಲ್ದಾರ್ ರವಿ ಅಂಗಡಿ, ಕಾಂತಮ್ಮ, ಚಿರಂಜೀವಿ, ಪುರುಷೋತ್ತಮ್ಮ, ಪ್ರಕಾಶ ಮಹಿತಿ , ಟಿ. ಜೆ ವಿಜಯಕುಮಾರ, ‍ಪಾಮಣ್ಣ, ಯಮನೂರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT