ಹುಣಸಗಿ: ‘ಜ್ಞಾನ ಭಕ್ತಿಯ ಶುದ್ಧ ಆಚರಣೆಯ ಮೂಲಕ ಮೋಕ್ಷ ಸಾಧಿಸುವಂತಾಗಲು ಹರಿ ಸ್ಮರಣೆ ಮುಖ್ಯ ಎಂದು ಮಧ್ವಾಚಾರ್ಯರು ತಿಳಿಸಿಕೊಟ್ಟಿದ್ದಾರೆ’ ಎಂದು ವಿಜಯಾಚಾರ್ಯ ಜೋಶಿ ಹೇಳಿದರು.

ಪಟ್ಟಣದಲ್ಲಿ ಮಧ್ವನವಮಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಪಾಜಕ ಕ್ಷೇತ್ರದಲ್ಲಿ ಜನಿಸಿರುವ ಮಧ್ವಾಚಾರ್ಯರು ದೇಶದ ವಿವಿಧ ಭಾಗಳಲ್ಲಿ ಸಂಚರಿಸಿ ತತ್ವ ಪ್ರಸಾರ ಮಾಡಿದರು. ಅವರು ಬ್ರಹ್ಮಸೂತ್ರಭಾಷ್ಯ, ಅನುವ್ಯಾಖ್ಯಾನ, ಮಹಾಭಾರತ ತಾತ್ಪರ್ಯ ನಿರ್ಣಯ ಸೇರಿದಂತೆ 37 ಕ್ಕೂ ಕೃತಿಗಳನ್ನು ರಚಿಸಿದ್ದಾರೆ’ ಎಂದು ಹೇಳಿದರು.

ಬೆಳಿಗ್ಗೆ ಮಧ್ವಾಚಾರ್ಯರ ಭಾವಚಿತ್ರ ಹಾಗೂ ಹನುಮಂತ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿಟ್ಟು ಪುರ ಪ್ರದಕ್ಷಣೆ ನಡೆಯಿತು. ಬಳಿಕ ವರಹಳ್ಳೇರಾಯದೇವರಿಗೆ ಪಂಚಾಮೃತ ಅಭಿಶೇಕ, ಅಲಂಕಾರ, ಮಹಾಮಂಗಳಾರುತಿ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ವೇದವತಿ ಭಜನಾ ಮಂಡಳಿ, ಛಾಯಾ ಭಗವತಿ ಭಜನಾಮಂಡಳಿ ಹಾಗೂ ಸೃಷ್ಟಿ ನರಸಿಂಹ ಜಹಗಿರದಾರ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.

ಎಚ್.ರವಿಂದ್ರ ಜೋಶಿ, ಅನಂತ ಜೋಶಿ, ವರಹಳ್ಳೇರಾಯ ಸೇವಾ ಸಮಿತಿ ಅಧ್ಯಕ್ಷ ಚಂದ್ರಕಾಂತ ದೇಶಪಾಂಡೆ, ಮೋಹನರಾವ ವಜ್ಜಲ, ಮನೋಹರರಾವ ದ್ಯಾಮನಹಾಳ, ಕೃಷ್ಣಾ ದೇಶಪಾಂಡೆ, ವೆಂಕಟೇಶ ದೇಶಪಾಂಡೆ, ವೆಂಕಟಗಿರಿ ದೇಶಪಾಂಡೆ, ಮುರಲಿ ಕುಲಕರ್ಣಿ, ವಿಷ್ಣುವರ್ಧನ ಕುಲಕರ್ಣಿ, ಸತ್ಯನಾರಾಯಣ ಕುಲಕರ್ಣಿ, ಪ್ರದೀಪ ದೇವಣಗಾಂವ, ಗೋವಿಂದರಾವ ಜಹಗಿರದಾರ, ನರಸಿಂಹರಾವ ಜಹಾಗೀರದಾರ, ಪ್ರಾಣೇಶ ಕುಲಕರ್ಣಿ, ಎನ್.ಎಸ್. ಜೋಶಿ, ಶ್ರೀಹರಿ ಕುಲಕರ್ಣಿ ಸಂತೋಷ ಅಹಂಕಾರಿ, ಲಕ್ಷ್ಮೀಕಾಂತ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.