ಯಾದಗಿರಿ: ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ಮೀಸಲು ಪಡೆಯ ಕಾನ್‌ಸ್ಟೇಬಲ್ ಮೇಲೆ ಮಹಿಳೆ ಕಡೆಯವರು ಕೈ, ಕಾಲು ಕಟ್ಟಿ ಥಳಿಸಿದ್ದಾರೆ.
ನಗರ ಹೊರವಲಯದಲ್ಲಿ ಬುಧವಾರ ಸಂಜೆ ಘಟನೆ ನಡೆದದ್ದು, ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
'ಒಂದು ವರ್ಷದಿಂದ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಕಾನ್‌ಸ್ಟೇಬಲ್ ಹಲವಾರು ಬಾರಿ ಮಹಿಳೆ ಕಡೆಯವರು ಬುದ್ದಿವಾದ ಹೇಳಿದರೂ ಕೇಳಿಲ್ಲ. ಇದರಿಂದ ರೋಸಿ ಹೋದ ಅವರು ಬುಧವಾರ ಮನೆ ಕಡೆ ಬಂದಾಗ ಬಟ್ಟೆಯಿಂದ ಕೈ, ಕಾಲು ಕಟ್ಟಿ ಥಳಿಸಿದ್ದಾರೆ. ಮಹಿಳೆ ಸಾಲವೂ ಕೊಡಿಸಿದ್ದ. ಮಹಿಳೆಗೆ ಮಕ್ಕಳು ಇದ್ದಾರೆ. ಕಾನ್ ಸ್ಟೆಬಲ್ ಅವಿವಾಹಿತ' ಎಂದು ಪೊಲೀಸರು ತಿಳಿಸಿದ್ದಾರೆ.
'ಮಹಿಳೆ ದೂರು ನೀಡಿದ ಪ್ರಕಾರ ಆರೋಪಿಯನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.